ಬೆಂಗಳೂರಿನಲ್ಲಿ ಹಾಡುಹಗಲೇ ದುಷ್ಕರ್ಮಿಗಳು 7.11 ಕೋಟಿ ರೂ. ನಗದು ದರೋಡೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಜಯದೇವ ಡೇರಿ ಸರ್ಕಲ್ ಬಳಿ ಮಂಗಳವಾರ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹಣ ಶಿಫ್ಟ್ ಮಾಡಿಕೊಂಡು ದುಷ್ಕರ್ಮಿಗಳ ಗುಂಪು ಹಣ ದರೋಡೆ ಮಾಡಿ ಪರಾರಿಯಾಗಿದೆ.
ಸೌತ್ ಎಂಡ್ ಸರ್ಕಲ್ ಗೆ ಬಂದಿದ್ದ ಹಣವಿದ್ದ ಸಿಎಂಎಸ್ ಕಾರನ್ನು ತಡೆದು ನಿಲ್ಲಿಸಿದ 7ರಿಂದ 8 ಜನರಿದ್ದ ಗ್ಯಾಂಗ್, ನಾವು ಆರ್ ಬಿಐ ನವರು ಎಂದು ಹೇಳಿಕೊಂಡು ಗನ್ ಮ್ಯಾನ್ ಸೇರಿದಂತೆ ವಾಹನದಲ್ಲಿದ್ದ ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸಿದ್ದಾರೆ.
ಕಾರನ್ನು ಡೇರಿ ಸರ್ಕಲ್ ಕಡೆ ತಿರುಗಿಸಿ ಮೇಲ್ಸೆತುವೆ ಮೇಲೆ ಕಾರನ್ನು ನಿಲ್ಲಿಸಿ ತಮ್ಮ ಕಾರಿಗೆ ಹಣ ಶಿಫ್ಟ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಂಕ್ ಸಿಎಂಎಸ್ ವಾಹನ ಚಾಲಕ ಸೇರಿದಂತೆ ವಾಹನದಲ್ಲಿದ್ದ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ.


