ರಾಯಚೂರು ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ದ ಮ್ಯಾನೇಜರ್ ಅಕ್ರಮ ಖಾತೆಗಳು, ಗೋಲ್ಡ್ ಲೋನ್ ಮೂಲಕ ಹಲವು ವಂಚನೆಗಳನ್ನು ಮಾಡಿ ಕೋಟಿಗಟ್ಟಲೆ ಹಣ ಎಗರಿಸಿ ಪರಾರಿಯಾಗಿದ್ದಾರೆ.
ನರೇಂದ್ರ ರೆಡ್ಡಿ ವಂಚನೆ ಮಾಡಿ ಪರಾರಿಯಾಗಿರುವ ಬ್ಯಾಂಕ್ ಮ್ಯಾನೇಜರ್. 2022-2025 ರ ವರೆಗೆ ಯಾರಿಗೂ ಸಣ್ಣ ಸುಳಿವು ಕೂಡ ಸಿಗದಂತೆ ಸರಣಿ ವಂಚನೆ ಎಸಗಿರುವುದು ಬಯಲಾಗಿದೆ.
ಬ್ಯಾಂಕ್ ನಿಂದ 10 ಕೋಟಿ 97 ಲಕ್ಷ ಹಣವನ್ನು ನರೇಂದ್ರ ರೆಡ್ಡಿ ಕೊಳ್ಳೆ ಹೊಡೆದಿರುವುದು ಪತ್ತೆಯಾಗಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 105 ನಕಲಿ ಖಾತೆ ತೆರೆದು 29 ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಲ್ಲದೆ, ನಕಲಿ ಗೋಲ್ಡ್ ತಾನೇ ಅಡ ಇಟ್ಟು ನಕಲಿ ಖಾತೆಗಳಿಗೆ ಗೋಲ್ಡ್ ಲೋನ್ ಮಂಜೂರು ಮಾಡಿದ್ದರು. ಅಸಲಿ ಗೋಲ್ಡ್ ಲೋನ್ ಹೊಂದಿದವರಿಗೂ ಮೋಸ ಮಾಡಿ, ಬ್ಯಾಂಕ್ ಆಡಿಟ್ ವೇಳೆ ವಂಚನೆ ಕಥೆ ಬಯಲಾಗ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಈ ಬಗ್ಗೆ ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.