ಮುಷ್ಫಿಕರ್ ರಹೀಂ ಅವರನ್ನು ಐಪಿಎಲ್ ತಂಡದಿಂದ ಹೊಗೆ ಹಾಕಿದ್ದಕ್ಕೆ ಪ್ರತೀಕಾರವಾಗಿ ಬಾಂಗ್ಲಾದೇಶ ಸರ್ಕಾರ ಐಪಿಎಲ್ ಟಿ-20 ಟೂರ್ನಿಯ ಪ್ರಸಾರವನ್ನು ನಿಷೇಧಿಸಿದೆ.
ಬಾಂಗ್ಲಾದೇಶದಲ್ಲಿ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಆ ದೇಶದ ಆಟಗಾರ ಮುಷ್ಫಿಕರ್ ರಹೀಂ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಹೊರಹಾಕುವಂತೆ ಬಿಸಿಸಿಐ ಸೂಚಿಸಿತ್ತು. ಬಿಸಿಸಿಐ ಸೂಚನೆ ಮೇರೆಗೆ ತಂಡದಿಂಧ ಹೊರಗಿಡಲಾಗಿದೆ.
ಮುಷ್ಫಿಕರ್ ರಹೀಂ ಅವರನ್ನು ಐಪಿಎಲ್ ತಂಡದಿಂದ ಕೈಬಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ದೇಶದಲ್ಲಿ ಐಪಿಎಲ್ ಟೂರ್ನಿಯನ್ನು ಪ್ರಸಾರ ಮಾಡದಂತೆ ಆದೇಶಿಸಿದೆ.
ಮುಷ್ಫಿಕರ್ ರಹೀಂ ಅವರನ್ನು ಐಪಿಎಲ್ ತಂಡದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗಿದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಐಪಿಎಲ್ ಪ್ರಸಾರ ನಿಷೇಧಿಸಲಾಗಿದೆ ಎಂದರು.
ಬಾಂಗ್ಲಾದೇಶದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ದೇಶದ ಕ್ರಿಕೆಟ್ ಟೂರ್ನಿಯನ್ನು ನಿಷೇಧಿಸಿರುವುದು ಇದೇ ಮೊದಲ ಬಾರಿಯಾಗಿದೆ. 2008ರಿಂದ ಪ್ರತೀ ಆವೃತ್ತಿಯನ್ನು ಪ್ರಸಾರ ಮಾಡಿದ್ದ ಬಾಂಗ್ಲಾದೇಶ ಈ ಬಾರಿ ಯಾವುದೇ ಟಿವಿ ಚಾನೆಲ್ ಹಾಗೂ ಲೈವ್ ಪ್ರದರ್ಶನ ನೀಡುವ ಆಪ್ ಗಳು ಸೇರಿದಂತೆ ಯಾವುದೇ ರೀತಿಯಲ್ಲೂ ಪ್ರಸಾರ ಮಾಡದಂತೆ ಸೂಚಿಸಿದೆ.


