ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ ಏ.4ರಿಂದ ಏ.14ರವರೆಗೆ ನಡೆಯಲಿದೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ.
ಸತತ 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿರುವ ಎ.ಜ್ಞಾನೇಂದ್ರ, ಈ ವರ್ಷ 15ನೇ ಬಾರಿಗೆ ಕರಗ ಹೊರಲಿದ್ದಾರೆ. ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆಯಿದೆ. ಏ.4ರಂದು ರಥೋತ್ಸವ ಹಾಗೂ ಧ್ವಜಾರೋಹಣ ನಡೆಯಲಿದೆ.
ಏ.5ರಿಂದ ಏ.8ರ ತನಕ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ಏ.9ರಂದು ಆರತಿ ದೀಪಗಳು, ಏ.10ರ ಗುರುವಾರ ಹಸಿ ಕರಗ, ಏ.11ರಂದು ಹೊಂಗಲು ಸೇವೆ, ಏ.12ರ ಶನಿವಾರದಂದು ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ರಥೋತ್ಸವ, ಏ.13ರಂದು ಪುರಾಣ ಪ್ರವಚನ ಮತ್ತು ದೇವಸ್ಥಾನದಲ್ಲಿ ಗಾವು ಶಾಂತಿ ಮತ್ತು ಏ.14ರ ಸೋಮವಾರ ವಸಂತೋತ್ಸವ ಧ್ವಜಾರೋಹಣ ನೆರವೇರಲಿದೆ.