ಬಾಗಲಕೋಟೆಯ ವ್ಯಕ್ತಿಯೊಬ್ಬರು ಕಾಶಿಯಲ್ಲಿ ನದಿಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿ ದ್ದಾರೆ. ಸತೀಶ್ ಜೋಷಿ (44) ಮೃತರು.
ಸತೀಶ್ ಜೋಷಿ ಬಾಗಲಕೋಟೆ ಜಿ.ಪಂ ಹೊರಗುತ್ತಿಗೆ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸು ತ್ತಿದ್ದರು. ವಾರದ ಹಿಂದೆ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್ ಮಹಾಕುಂಭ ಮೇಳ ಕ್ಕೆ ಪ್ರಯಾಣ ಬೆಳೆಸಿದ್ದರು. ಕುಂಭ ಮೇಳದಲ್ಲಿ ಭಾಗಿಯಾದ ಬಳಿಕ ಸತೀಶ್ ಹಾಗೂ ಕುಟುಂಬಸ್ಥರು ಅಲ್ಲಿಂದ ಕಾಶಿಗೆ ತೆರಳಿದ್ದರು.
ಬಾಗಲಕೋಟೆಯಿಂದ 35 ಜನ ಸೇರಿ ಪ್ರವಾಸಿ ಬಸ್‌ನಲ್ಲಿ ತೆರಳಿದ್ದರು. ಫೆ. 9ರಂದು (ಭಾನುವಾರ) ಬೆಳಗಿನ ಜಾವ ಕಾಶಿಯಲ್ಲಿ ನದಿಸ್ನಾನ ಮಾಡುವಾಗ ಮುಳುಗಿದ್ದ ಸತೀಶ್ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.