ಮಹಾರಾಷ್ಟ್ರದಲ್ಲಿ ಕನ್ನಡ, ಕನ್ನಡಿಗರ ಮೇಲೆ ಮರಾಠಿಗರು ನಡೆಸುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಬಾಗಲಕೋಟೆಯಲ್ಲಿ ಕನ್ನಡಿಗರು ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಚಿತ್ರದುರ್ಗ ಹಾಗೂ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕನ್ನಡಪರ ಹೋರಾಟಗಾರರು ಮಹಾರಾಷ್ಟ್ರ ಬಸ್‌ಗೆ ‘ಜೈ ಕರ್ನಾಟಕ’ ಎಂದು ಬರೆದು ಕನ್ನಡಾಭಿಮಾನ ಮೆರೆದಿದ್ದಾರೆ.
ಇಳಕಲ್ ಬಸ್ ನಿಲ್ದಾಣದಿಂದ ಮಹಾರಾಷ್ಟ್ರದ ಸೋಲಾಪುರ ಕಡೆ ಹೊರಟಿದ್ದ ಬಸ್ ಅನ್ನು ಕೂಡಲಸಂಗಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ಬಾಗಲಕೋಟೆ ಜನರು, ಬಸ್ ಮುಂಭಾಗದ ಗಾಜಿನ ಮೇಲೆ ‘ಜೈ ಕರ್ನಾಟಕ’ ಎಂದು ಬರೆದಿದ್ದಾರೆ. ಚಾಲಕನಿಗೆ ಕನ್ನಡ ಧ್ವಜ ಹಿಡಿಸಿ, ಜೈ ಕರ್ನಾಟಕ ಎಂದು ಘೋಷಣೆ ಹಾಕಿಸಿದ್ದಾರೆ.
ಫೆ.22 ರಂದು ರಾತ್ರಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಗೂಂಡಾ ವರ್ತನೆ ತೋರಿದ್ದರು. ಬೆಳಗಾವಿಯಲ್ಲಿ ಕೆಎಸ್ಸಾರ್ಟಿಸಿ ನಿರ್ವಾಹಕ ಟಿಕೆಟ್ ಎಲ್ಲಿಗೆ ಎಂದು ಕೇಳಿ ಕನ್ನಡದಲ್ಲಿ ಮಾತನಾಡಿ ಅಂದಿದ್ದಕ್ಕೆ ಯುವಕ ಯುವತಿ ಗುಂಪನ್ನು ಕರೆಸಿ ನಿರ್ವಾಹಕರ ಮೇಲೆ ದೌರ್ಜನ್ಯ ಎಸಗಿದ್ದರು. ಸಂತ್ರಸ್ತ ನಿರ್ವಾಹಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ವಿರುದ್ಧ ಸುಳ್ಳು ಪೋಕ್ಸೊ ಕೇಸ್ ಕೂಡ ದಾಖಲಿಸಲಾಗಿದೆ. ಇದರ ವಿರುದ್ಧ ಬೆಳಗಾವಿ ಸೇರಿ ದಂತೆ ಮಹರಾಷ್ಟ್ರ ಗಡಿ ಸುತ್ತಮುತ್ತ ಕನ್ನಡಿಗರ ಆಕ್ರೋಶ ಭುಗಿಲೆದ್ದಿದೆ.