Menu

ಅಶ್ವಿನಿ-ತನಿಶಾ ಜೋಡಿಗೆ ಬ್ಯಾಡ್ಮಿಂಟನ್ ಪ್ರಶಸ್ತಿ

ಗುವಾಹಟಿ: ಗುವಾಹಟಿ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಮಹಿಳಾ ಡಬಲ್ಸ್ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಇವರಿಬ್ಬರ ಜೋಡಿ ಚೀನಾದ ಲಿ ಹುವಾ ಝೌ ಮತ್ತು ವಾಂಗ್ ಜಿ ಮೆಂಗ್ ವಿರುದ್ಧ ನೇರ ಗೇಮ್ ಗಳ ಗೆಲುವು ದಾಖಲಿಸಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ಯಾರಿಸ್ ಒಲಿಂಪಿಕ್ಸಲ್ಲಿ ಸ್ಪರ್ಧಿಸಿದ್ದ ಅಗ್ರ ಶ್ರೇಯಾಂಕಿತ ಜೋಡಿ ೪೩ ನಿಮಿಷಗಳ ಕಾಲ ನಡೆದ ಫೈನಲ್ ಹೋರಾಟದಲ್ಲಿ ಲಿ ಮತ್ತು ವಾಂಗ್ ಅವರನ್ನು ೨೧-೧೮, ೨೧-೧೨ ಅಂತರದಿಂದ ಸೋಲಿಸಿತು.

ವಿಶ್ವದ ೧೬ನೇ ಶ್ರೇಯಾಂಕಿತ ಆಟಗಾರ್ತಿ ತನಿಶಾ ಹಾಗೂ ಅಶ್ವಿನಿ ಜೋಡಿ ೮-೨ರ ಮುನ್ನಡೆ ಸಾಧಿಸಿತು. ಆದಾಗ್ಯೂ, ಚೀನಾದ ಜೋಡಿಯು ಆಟದ ಮಧ್ಯದಲ್ಲಿ ಅಂತರವನ್ನು ೧೦-೧೧ ಕ್ಕೆ ಇಳಿಸಿತು ಮತ್ತು ಒತ್ತಡವನ್ನು ಮುಂದುವರಿಸಿತು.

ಪಂದ್ಯ ೧೮-೧೯ರವರೆಗೆ ನಿಕಟವಾಗಿ ಸಾಗಿತು. ನಂತರ ಭಾರತೀಯ ಜೋಡಿ ಅಂತಿಮ ಎರಡು ಅಂಕಗಳನ್ನು ಗಳಿಸಲು ಮತ್ತು ಮೊದಲ ಗೇಮ್ ಅನ್ನು ವಶಪಡಿಸಿಕೊಳ್ಳಲು ತಮ್ಮ ಉತ್ಸಾಹವನ್ನು ಉಳಿಸಿಕೊಂಡಿತು.

Related Posts

Leave a Reply

Your email address will not be published. Required fields are marked *