ಬಾಗಲಕೋಟೆಯ ಜಮಖಂಡಿಯಲ್ಲಿರುವ ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭದಲ್ಲೇ ಶಿಶು ಮೃತಪಟ್ಟಿದ್ದು, ಇದಕ್ಕೆ ವೈದ್ಯರ ಬೇಜವಾಬ್ದಾರಿಯೇ ಕಾರಣವೆಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
ಜಮಖಂಡಿಯ ಚೌಡಯ್ಯ ನಗರದ ನಿವಾಸಿ.ಶಿವಪ್ಪ ರೇವಣಸಿದ್ದಪ್ಪ ಬೋವಿ ಅವರ ಪತ್ನಿ ಇಂದ್ರಾ ಅವರ ಗರ್ಭದಲ್ಲೇ ಮಗು ಮೃತಪಟ್ಟಿದೆ. ಇಂದ್ರಾ ಅವರನ್ನು ರಾತ್ರಿ 2 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದರೂ ವೈದ್ಯರು ಕೇರ್ ಮಾಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಡೆಲಿವರಿಗೆ ಸಮಯವಿದೆ. ಬೆಳಿಗ್ಗೆ 4 ಗಂಟೆಗೆ ಆಡ್ಮಿಟ್ ಮಾಡುವುದಾಗಿ ವೈದ್ಯರಿಗೆ ನರ್ಸ್ ಹೇಳಿದ್ದು, ರಾತ್ರಿ ಪಾಳಿಯ ವೈದ್ಯರು ಬೆಳಿಗ್ಗೆ 8 ಗಂಟೆಗೆ ಪರೀಕ್ಷಿಸಿ ಮಗುವಿನ ಹಾರ್ಟ್ ಬೀಟ್ ಸರಿ ಇದೆ ಎಂದು ಹೇಳಿದ್ದರು. ಆದರೆ ಬೆಳಗಿನ ಕರ್ತವ್ಯದಲ್ಲಿರಬೇಕಿದ್ದ ವೈದ್ಯರು ಆಕೆಯನ್ನು ತಪಾಸಣೆ ಮಾಡಿಲ್ಲ. ಮತ್ತೊಬ್ಬ ವೈದ್ಯರು 9 ಗಂಟೆಗೆ ಬಂದು ಗರ್ಭಿಣಿ ಆರೋಗ್ಯ ಪರಿಶೀಲಿಸಿದಾಗ, ಮಗು ಗರ್ಭದಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಲ್ಲಿನ ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ. ರಾತ್ರಿ ಗರ್ಭಿಣಿಯ ಆರೋಗ್ಯ ವಿಚಾರಿಸದೆ ರೆಸ್ಟ್ ರೂಂಲ್ಲಿ ನಿದ್ದೆ ಮಾಡಿದ್ದರು. ಜಿಲ್ಲಾ ವೈಧ್ಯಾಧಿಕಾರಿಗಳು ಇವರ ಮೇಲೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಕುಟುಂಬ ಎಚ್ಚರಿಕೆ ನೀಡಿದೆ.