Menu

ಸಿಂಧನೂರು ಪ್ರಾಧಿಕಾರದ ಅಧ್ಯಕ್ಷರಾಗಿ ಬಾಬುಗೌಡ ಬಾದರ್ಲಿ ನೇಮಕ

ಸಿಂಧನೂರು : ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ನೇಮಕ ಆಗಿದ್ದಾರೆ.

ನಗರ ಅಭಿವೃದ್ಧಿ ಇಲಾಖೆ ವತಿಯಿಂದ ಆದೇಶ ಹೊರಡಿಸಿ ತಾಲೂಕು ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಬಾಬುಗೌಡ ಬಾದರ್ಲಿ ಸದಸ್ಯರಾಗಿ ವೈ.ನರೇಂದ್ರ ನಾಥ್, ಚಂದ್ರಶೇಖರ ರೆಡ್ಡಿ, ಖಾಜಾ ಮಲಿಕ್ ವಕೀಲ್ ಹಾಗೂ ಮಮತಾ ಗಂಡ ಮೌಲಪ್ಪ ಇವರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕುತೂಹಲ ಇದ್ದ ಅಧ್ಯಕ್ಷ ಸ್ಥಾನ :

ಅನೇಕ ದಿನಗಳಿಂದ ನಗರ ಪ್ರಾಧಿಕಾರದ ಅಧ್ಯಕ್ಷರಾಗಿ ಯಾರಾಗುತ್ತಾರೆ ಎಂಬ ಚರ್ಚೆ ಕ್ಷೇತ್ರದಲ್ಲಿ ಇತ್ತು, ಶಾಸಕ ಹಂಪನಗೌಡ ಬಾದರ್ಲಿ ಬೆಂಬಲಿಗರ ಅಥವಾ ಎಂಎಲ್ಸಿ ಬಸನಗೌಡ ಬಾದರ್ಲಿ ಬೆಂಬಲಿಗರ ಎಂಬ ಚರ್ಚೆಗೆ ಇಂದು ಶಾಸಕ ಹಂಪನಗೌಡ ಬಾದರ್ಲಿ ಅವರ  ಬೆಂಬಲಿಗರು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ.

Related Posts

Leave a Reply

Your email address will not be published. Required fields are marked *