ಬಸ್, ಮೆಟ್ರೋ ದರ ಹೆಚ್ಚಳದ ಬಳಿಕ ಬೆಂಗಳೂರು ನಾಗರಿಕರಿಗೆ ಆಟೊ ಪ್ರಯಾಣದರ ಹೆಚ್ಚಳದ ಬಿಸಿ ತಾಗಲಿದೆ. ಮೇ 28ಕ್ಕೆ ಆಟೋ ಪ್ರಯಾಣ ದರ ಏರಿಕೆ ಪಟ್ಟಿ ಪ್ರಕಟವಾಗಲಿದೆ.
ಈ ಬಗ್ಗೆ ಅಧಿಕೃತ ಅಧಿಕೃತ ಆದೇಶದ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಬುಧವಾರ ಸಭೆ ಕರೆದಿದ್ದು, ಆಟೋ ಪ್ರಯಾಣ ದರ ಏರಿಕೆ ಪ್ರಕಟಿಸುವ ಸಾಧ್ಯತೆ ಇದೆ. ಆಟೋ ದರ ಏರಿಕೆಗೆ ಈಗಾಗಲೇ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದ್ದು, ಅಧಿಕೃತ ಆದೇಶ ಮಾತ್ರ ಬಾಕಿ ಇದೆ.
ಆಟೋ ಮೀಟರ್ ದರ ಏರಿಕೆ ಮಾಡುವಂತೆ ಆಟೋ ಚಾಲಕ ಹಾಗೂ ಮಾಲೀಕರು ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ, ಜಿಲ್ಲಾಡಳಿತ ಆಟೋ ಚಾಲಕರ ಮನವಿಯನ್ನು ಪುರಸ್ಕರಿಸಿ ಆಟೋ ದರ ಏರಿಕೆ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಆಯೋಜನೆಯಾಗಿದ್ದು, ಆರ್ ಟಿ ಓ ಕಮಿಷನರ್ ಸೇರಿ ಎಲ್ಲಾ ವಲಯ ಆರ್ ಟಿ ಒ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಆಟೋ ಯೂನಿಯನ್ ನ ಕನಿಷ್ಠ ಇಬ್ಬರು ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ.