ಬೆಂಗಳೂರಲ್ಲಿ ಆಟೋ ಮೀಟರ್ ದರ ಏರಿಕೆ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಆಗಸ್ಟ್- 1 ರಿಂದ ನೂತನ ದರ ಜಾರಿಗೊಳ್ಳಲಿದ್ದು, ಮಿನಿಮಮ್ ಆಟೋ ಪ್ರಯಾಣ ದರ 36 ರೂಪಾಯಿಗೆ ಏರಿಕೆಯಾಗಿದೆ, ಈಗ ಬೆಂಗಳೂರಲ್ಲಿ ಮಿನಿಮಮ್ ಆಟೋ ಮೀಟರ್ ದರ 30 ರೂಪಾಯಿ ಇದೆ.
ಮಿನಿಮಮ್ ನಂತರದ ಪ್ರತಿ ಕಿಮೀ ಗೆ 18 ರೂಪಾಯಿ ನಿಗದಿಯಾಗಿದೆ, ಈ ಹಿಂದೆ ಪ್ರತಿ ಕಿಮೀ ಗೆ 15 ದರ ನಿಗದಿ ಮಾಡಲಾಗಿತ್ತು. ಎರಡು ಕಿಮೀ ಮಿನಿಮಮ್ ದರ 6 ರೂಪಾಯಿ ಹೆಚ್ಚಳವಾಗಿದ್ದು, 36 ರುಪಾಯಿ ಗೆ ಮೂರು ಜನ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಲು ಅವಕಾಶವಿದೆ.
ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತವಿರುತ್ತದೆ, ಐದು ನಿಮಿಷಗಳ ನಂತರ ಪ್ರತಿ ಹದಿನೈದು ನಿಮಿಷಕ್ಕೆ 10 ರೂಪಾಯಿ, ಪ್ರಯಾಣಿಕರ ಲಗೇಜು ದರ ಮೊದಲ 20 ಕೆಜಿ ಉಚಿತ, 20 ಕೆಜಿ ನಂತರ 10 ರೂಪಾಯಿ ನಿಗದಿಗೊಳಿಸಲಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ವರೆಗೆ ಒನ್ ಅಂಡ್ ಹಾಫ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು) ಇರುತ್ತದೆ.