Thursday, February 26, 2026
Menu

ಕೊರಟಗರೆಯಲ್ಲಿ ರಸ್ತೆ ದಾಟುತ್ತಿದ್ದ ಕೋತಿಯ ರಕ್ಷಿಸಿ ಪ್ರಾಣ ಕಳೆದುಕೊಂಡ ಆಟೊ ಚಾಲಕ

ತುಮಕೂರಿನ ಕೊರಟಗೆರೆಯ ಜಂಪೇನಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಕೋತಿಯ ರಕ್ಷಿಸಲು ಮುಂದಾಗಿ ಆಟೊ ಚಾಲಕರೊಬ್ಬರು ಮೃತಪಟ್ಟಿದ್ದಾರೆ. ಸೋಂಪುರ‌ ನಿವಾಸಿ‌ ಮಹೇಂದ್ರಕುಮಾರ್ ಮೃತಪಟ್ಟ ಚಾಲಕ.

ಕೊರಟಗೆರೆಯಿಂದ ತುಮಕೂರು ಕಡೆಗೆ ಆಟೊ‌ ಹೋಗುತ್ತಿದ್ದಾಗ ಜಂಪೇನಹಳ್ಳಿ‌ ಬಳಿ ಕೋತಿಯೊಂದು ಅಡ್ಡ ಬಂದಿದೆ. ರಸ್ತೆ ದಾಟುತ್ತಿದ್ದ ಕೋತಿಯನ್ನು ‌ರಕ್ಷಿಸಲೆಂದು ಚಾಲಕ ಮಹೇಂದ್ರ ಕುಮಾರ್ ಸಡನ್‌ ಬ್ರೇಕ್ ಹಾಕಿದ್ದಾರೆ. ಆಟೊ ಪಲ್ಟಿಯಾಗಿದೆ. ಪಲ್ಟಿಯಾದ ಆಟೊಗೆ ತುಮಕೂರು ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ‌ಹೊಡೆದಿದೆ.

ಕೋಲಾರದಲ್ಲಿ ಉಪನ್ಯಾಸಕ ಆತ್ಮಹತ್ಯೆ

ಕೋಲಾರದ ಖಾದ್ರಿಪುರ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊನೀಶ್ (36) ಆತ್ಮಹತ್ಯೆ ಮಾಡಿಕೊಂಡ ವರು. ಅವರು ಕೋಲಾರದ ಎಂಜಿನಿಯರಿಂಗ್‌ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು. ಪತ್ನಿ ವೇದವತಿ ಕೆಲಸಕ್ಕೆ ಹೋಗಿದ್ದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *