Menu

ಬಸಳೆ ಚಿಕನ್‌ ಕರಿ ಒಮ್ಮೆ ತಿಂದು ನೋಡಿ

ಸಾಮಾನ್ಯವಾಗಿ ಚಿಕನ್‌ ಪ್ರಿಯರು ಅದರಲ್ಲಿ ನಾನಾ ವಿಧಗಳ ಪಾಕಶೈಲಿಯ ಅಡುಗೆಗಳನ್ನು ಮಾಡಿ ಸವಿದು ಆನಂದಿಸುತ್ತಾರೆ. ಚಿಕನ್‌ ಇಷ್ಟವಿದ್ದರೂ ಅದು ತಿಂದರೆ ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆಗಳು ಬರುವ ಕಾರಣಕ್ಕೆ ಹಿಂದೇಟು ಹಾಕುವವರೂ ಹಲವರಿದ್ದಾರೆ. ರುಚಿಗೆ ಮತ್ತು ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆ ದೂರಗೊಳಿಸಲು ಪಾಲಕ್‌ ಚಿಕನ್‌, ಮೆಂತೆ ಚಿಕನ್‌, ಪುದೀನ ಚಿಕನ್‌ ತಿನ್ನುವುದೂ ಇದೆ. ಆದರೆ ಚಿಕನ್‌ನಿಂದ ಉಂಟಾಗಬಹುದಾದ ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆ ದೂರಗೊಳಿಸಲು ಇನ್ನೊಂದು ವಿಧಾನದಲ್ಲಿ ಚಿಕನ್‌

ಮದುವೆ ಆಗುವುದಾಗಿ ವಂಚನೆ: ಆರ್ ಸಿಬಿ ಬೌಲರ್ ಯಶ್ ದಯಾಳ್ ವಿರುದ್ಧ ಎಫ್ ಐಆರ್ ದಾಖಲು

ಲೈಂಗಿಕ ದೌರ್ಜನ್ಯ ಆರೋಪದಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ವೇಗಿ ಯಶ್ ದಯಾಳ್ ವಿರುದ್ಧ ಗಾಜಿಯಾಬಾದ್ ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಯಶ್ ದಯಾಳ್ ಜೊತೆ 5 ವರ್ಷಗಳಿಂದ ಸಂಬಂಧ ಹೊಂದಿದ್ದು, ಮದುವೆ ಆಗುವುದಾಗಿ ನಂಬಿಸಿ

ಆರೋಗ್ಯ ಮತ್ತು ರುಚಿಗಾಗಿ ಅಡುಗೆಯಲ್ಲಿ ದೊಡ್ಡಪತ್ರೆ ಬಳಕೆ

ಸುಲಭವಾಗಿ ಬೆಳೆಸಬಹುದಾದ ದೊಡ್ಡಪತ್ರೆ ಮಳೆಗಾಲದಲ್ಲಿ ಶೀತ ಹಾಗೂ ಕೆಮ್ಮು ನಿಯಂತ್ರಣಕ್ಕೆ ಔಷಧಿಯಾದರೆ, ಬೇಸಿಗೆಯಲ್ಲಿ ತಂಪಾಗಿಸುವ ಗುಣ ಹೊಂದಿದೆ.  ಹೀಗಾಗಿ ಇದನ್ನು ನಾನಾ ರೀತಿ ಅಡುಗೆಗಳಲ್ಲಿ ಬಳಸುವ ಮೂಲಕ ಆರೋಗ್ಯ ವರ್ಧಿಸಿಕೊಳ್ಳಬಹುದು. ದೊಡ್ಡಪತ್ರೆ ಎಲೆಗಳು ಹಸಿವು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವುದು. ಚರ್ಮದ ಸಮಸ್ಯೆ

ಅಮೆರಿಕದಲ್ಲಿ ರಸ್ತೆ ಅಪಘಾತ: ಹೈದ್ರಾಬಾದ್‌ ಮೂಲದ ಕುಟುಂಬ ಸಜೀವ ದಹನ

ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಗ್ರೀನ್ ಕೌಂಟಿಯಲ್ಲಿ ಕಾರು ಹಾಗೂ ಟ್ರಕ್ ನಡುವೆ ಅಪಘಾತ ನಡೆದು ಈ ದುರಂತ ಸಂಭವಿಸಿದೆ. ಹೈದರಾಬಾದ್ ಮೂಲದ ತೇಜಸ್ವಿನಿ, ವೆಂಕಟ್

Heart attack death-ಮಂಗಳೂರಿನಲ್ಲಿ ಹೃದಯಾಘಾತಕ್ಕೆ ವಿದ್ಯಾರ್ಥಿ ಬಲಿ

ಮಂಗಳೂರಿನ ಸುರತ್ಕಲ್ ಬಳಿ ಹೃದಯಾಘಾತದಿಂದ ಡಿಪ್ಲೋಮಾ ವಿದ್ಯಾರ್ಥಿ ಅಫ್ತಾಬ್ (18)ಮೃತಪಟ್ಟಿದ್ದಾರೆ. ಸುರತ್ಕಲ್ ಕೃಷ್ಣಾಪುರದಲ್ಲಿ ಅಫ್ತಾಬ್ ಕುಟುಂಬ ನೆಲೆಸಿದ್ದು, ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಫ್ತಾಬ್ ಸುರತ್ಕಲ್ ಸೆಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದರು.

Suicide Death- ಬಂಟ್ವಾಳದಲ್ಲಿ ಪ್ರೇಯಸಿಯ ಕೊಲೆಗೆ ಯತ್ನಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಾರಿಪಳ್ಳದಲ್ಲಿ ಪ್ರಿಯತಮೆಯ ಕೊಲೆಗೆ ಯತ್ನಿಸಿದ ಬಳಿಕ ಆಕೆಯ ಮನೆಯಲ್ಲೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಡ್ಮಣ್ ಗ್ರಾಮದ ನಿವಾಸಿ ಸುಧೀರ್(30) ಆತ್ಮಹತ್ಯೆ ಮಾಡಿಕೊಂಡಾತ. ಆತ ದಿವ್ಯಾ ಎಂಬ ಯುವತಿಯನ್ನು 8 ವರ್ಷಗಳಿಂದ ಪ್ರೀತಿಸುತ್ತಿದ್ದ. ಕೆಲವು

ಭದ್ರಾವತಿಯಲ್ಲಿ ದೆವ್ವ ಬಿಡಿಸುವುದಾಗಿ ಥಳಿತ: ಮಹಿಳೆ ಸಾವು

ದೆವ್ವ ಬಿಡಿಸುತ್ತೇನೆಂದು ಹೇಳಿ ಥಳಿಸಿದ್ದರಿಂದ ಅಸ್ವಸ್ಥಗೊಂಡ ಮಹಿಳೆ ಮೃತಪಟ್ಟ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ನಡೆದಿದೆ. ಜಂಬರಗಟ್ಟೆ ನಿವಾಸಿ ಗೀತಮ್ಮ (50) ಮೃತಪಟ್ಟವರು. ತಾಯಿಗೆ ಹುಷಾರಿಲ್ಲದ ಕಾರಣ ಮಗ ಮಗ ದೆವ್ವ ಬಿಡಿಸಲು ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದ. ದೆವ್ವ

Yettinahole-ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ವಿರೋಧಿಸಿ ರೈತರ ಪ್ರತಿಭಟನೆ

ದೊಡ್ಡಬಳ್ಳಾಪುರದ ರೈತರು ಎತ್ತಿನಹೊಳೆ ಯೋಜನೆಯ ಭಾಗವಾಗಿ ಲಕ್ಕೇನ ಹಳ್ಳಿಯಲ್ಲಿ ಜಲಾಶಯ ನಿರ್ಮಾಣ  ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಅಣೆಕಟ್ಟೆ ನಿರ್ಮಾಣದಿಂದಾಗಿ ಕೃಷಿ ಭೂಮಿ ಮುಳುಗಡೆಯಾಗುವ ಮತ್ತು ಸ್ಥಳಾಂತರಗೊಳ್ಳುವ ಭಯದಿಂದ ಸಸರಪಾಳ್ಯ, ಶ್ರೀರಾಮನಹಳ್ಳಿ ಮತ್ತು ಇತರ ಗ್ರಾಮಗಳ ಸ್ಥಳೀಯರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಈ ಯೋಜನೆಯಿಂದ

ನೊಬೆಲ್‌ ಪ್ರಶಸ್ತಿಗೆ ಟ್ರಂಪ್‌ ನಾಮನಿರ್ದೇಶನ ಮಾಡಿದ ಇಸ್ರೇಲ್‌

ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. ಶ್ವೇತಭವನದಲ್ಲಿ ನಡೆದ ಭೋಜನಕೂಟದ ಸಂದರ್ಭದಲ್ಲಿ, ನೆತನ್ಯಾಹು ಅವರು ನೊಬೆಲ್‌ ಸಮಿತಿಗೆ ಕಳುಹಿಸಿದ ನಾಮನಿರ್ದೇಶನ ಪತ್ರದ ಪ್ರತಿಯನ್ನು ಹಸ್ತಾಂತರಿಸಿದರು. ಟ್ರಂಪ್‌ ಅವರು ಜಗತ್ತಿನಲ್ಲಿ

Yettinahole-ಎತ್ತಿನಹೊಳೆ: ಹೆಚ್ಚುವರಿ 423 ಎಕರೆ ಅರಣ್ಯ ಬಳಕೆಗೆ ಕೇಂದ್ರ ನಿರಾಕರಣೆ

23 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಹೆಚ್ಚುವರಿಯಾಗಿ 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ ಪ್ರಸ್ತಾವಕ್ಕೆ ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಅನುಮತಿ ನೀಡಲು ನಿರಾಕರಿಸಿದೆ. ಹಾಸನ ಹಾಗೂ