ಬಂಕಾಪುರ ವನ್ಯಧಾಮದಲ್ಲಿ 8 ಮರಿಗಳಿಗೆ ಜನ್ಮ ನೀಡಿದ ತೋಳ
ಕರ್ನಾಟಕ ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ಕೊಪ್ಪಳ ಜಿಲ್ಲೆ ಬಂಕಾಪೂರ ತೋಳಧಾಮದಲ್ಲಿ ಇತ್ತೀಚೆಗೆ ಹೆಣ್ಣು ತೋಳವೊಂದು 8 ಮರಿಗಳಿಗೆ ಜನ್ಮ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. ಮಾದ್ಯಮ ಹೇಳಿಕೆ ನೀಡಿರುವ ಖಂಡ್ರೆ, ಗಂಗಾವತಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿ 332 ಹೆಕ್ಟರ್ ಪ್ರದೇಶದಲ್ಲಿರುವ ಬಂಕಾಪೂರ ತೋಳಧಾಮವು ಕುರುಚಲು ಅರಣ್ಯದೊಳಗೆ ಗುಡ್ಡಗಳು, ಸ್ವಾಭಾವಿಕ ಗುಹೆಗಳನ್ನೂ ಹೊಂದಿದ್ದು, ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ,
ನಟ ಸೈಫ್ ಹತ್ಯೆಗೆ ಯತ್ನಿಸಿದ್ದ ಬಾಂಗ್ಲಾದೇಶಿ ಅರೆಸ್ಟ್
ನಟ ಸೈಫ್ ಅಲಿ ಖಾನ್ ಹತ್ಯೆಗೆ ಯತ್ನಿಸಿ ಹಲವು ಬಾರಿ ಚಾಕುವಿನಿಂದ ಇರಿದಾತ ಬಾಂಗ್ಲಾದೇಶಿ ಎಂಬ ಅನುಮಾನವಿದೆ ಎಂದು ಮುಂಬೈ ಮಹಾನಗರ ವಿಭಾಗ-9ರ ಡಿಸಿಪಿ ದೀಕ್ಷಿತ್ ಗೆಡಾಮ್ ಮಾಹಿತಿ ನೀಡಿದ್ದಾರೆ. ಚಾಕು ಇರಿದ ವ್ಯಕ್ತಿಯನ್ನು ಘಟನೆ ನಡೆದ 70 ಗಂಟೆ ಬಳಿಕ
ಹೊಸ ಸಿಮ್ ಖರೀದಿಗೆ ಗಿಫ್ಟ್ ಆಗಿ ಮೊಬೈಲ್ ಕಳಿಸಿ 2.80 ಕೋಟಿ ರೂ. ಎಗರಿಸಿದ್ರು
ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಸೈಬರ್ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ, ಅದಕ್ಕೆ ಗಿಫ್ಟ್ ಎಂದು ಹೊಸ ಮೊಬೈಲ್ ಕಳಿಸಿ 2.80 ಕೋಟಿ ರೂ. ದೋಚಿದ್ದಾರೆ. ಗಿಫ್ಟ್ ಸ್ವೀಕರಿಸಿದ ಟೆಕ್ಕಿ ಸಿಮ್ ಅನ್ನು ಮೊಬೈಲ್ನಲ್ಲಿ ಹಾಕಿದ್ದಾರೆ. ಸಿಮ್ ಹಾಕಿದ ಕೆಲವೇ ಗಂಟೆಗಳಲ್ಲಿ
ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ಡಿಕೆಶಿ ಅಭಿನಂದನೆ
ಐದನೇ ಬಾರಿಗೆ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿಯನ್ನು ಗೆದ್ದ ಕರ್ನಾಟಕ ತಂಡಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಗುಜರಾತಿನ ವಡೋದರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ 36 ರನ್
ಗೋವಾ ಪ್ಯಾರಾಗ್ಲೈಡಿಂಗ್: ಮಹಿಳಾ ಪ್ರವಾಸಿ, ಇನ್ಸ್ಟ್ರಕ್ಟರ್ ಸಾವು
ಉತ್ತರ ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತದಲ್ಲಿ ಪ್ಯಾರಾಗ್ಲೈಡಿಂಗ್ ಮಹಿಳಾ ಪ್ರವಾಸಿ ಹಾಗೂ ಇನ್ಸ್ಟ್ರಕ್ಟರ್ ಮೃತಪಟ್ಟಿದ್ದಾರೆ. ಶನಿವಾರ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಣೆ ನಿವಾಸಿ ಶಿವಾನಿ ಡೇಬಲ್ ಮತ್ತು ಆಕೆಯ ಇನ್ಸ್ಟ್ರಕ್ಟರ್ ಸುಮಲ್ ನೇಪಾಲಿ ಮೃತಪಟ್ಟವರು. ಪ್ಯಾರಾಗ್ಲೈಡಿಂಗ್‌ಗಾಗಿ ಶಿವಾನಿ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸುನಿಲ್ ಕುಮಾರ್ ರಾಜೀನಾಮೆ?
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಲು ಮುಂದಾಗಿ, ತಮ್ಮನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಹೈಕಮಾಂಡ್ಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಬೆನ್ನಲ್ಲೇ ಸುನಿಲ್ ಅವರ
ರಾಜ್ಯಾದ್ಯಂತ ಸಮಗ್ರ ಆರೋಗ್ಯ ಸೇವೆಗೆ ರೋಟರಿ- ರಾಮಯ್ಯ ಆಸ್ಪತ್ರೆ ಒಪ್ಪಂದ
ಬೆಂಗಳೂರು: ಕರ್ನಾಟಕದಾದ್ಯಂತ ಬಿಪಿಎಲ್ ಕಾರ್ಡ್ ಹೊಂದಿರುವವರು, ಹಿಂದುಳಿದವರು, ನಿರ್ಗತಿಕರು ಮತ್ತು ಹಿರಿಯ ನಾಗರಿಕರಿಗೆ ಸಮಗ್ರ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಒದಗಿಸಲು 2 ವರ್ಷಗಳ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ರೋಟರಿ ಬೆಂಗಳೂರು ಗುಲ್‍ಮೊಹರ್ ಮತ್ತು ಬೆಂಗಳೂರಿನ ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆ
ಗೋಡ್ಸೆ ವಂಶಸ್ಥರಿಂದ ಗಾಂಧಿ ವಿಚಾರಧಾರೆಗಳ ಹತ್ಯೆ: ರಣದೀಪ್ ಸಿಂಗ್ ಸುರ್ಜೆವಾಲ
ಹುಬ್ಬಳ್ಳಿ: ಗೋಡ್ಸೆ ವಂಶಸ್ಥರು ನಿರಂತರವಾಗಿ ಗಾಂಧಿ ಅವರ ವಿಚಾರಧಾರೆಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪಕ್ಷದ ನಾಯಕರೊಂದಿಗೆ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ನಂತರ ಸುರ್ಜೆವಾಲ ಅವರು ಡಿಸಿಎಂ ಡಿ.ಕೆ. ಶಿವಕುಮಾರ್
ವಿಜಯೇಂದ್ರ ನಿಮ್ಮಪ್ಪನ ದುಡ್ಡಲ್ಲಿ ಮೆರೆಯುತ್ತಿದ್ದಿಯ: ರಮೇಶ್ ಜಾರಕಿಹೊಳಿ ತಿರುಗೇಟು
ನಿಮ್ಮಪ್ಪನನ್ನು ಸಿಎಂ ಮಾಡಲು ನಾನು ಶಾಸಕ ಸ್ಥಾನ ತ್ಯಾಗ ಮಾಡಿದೆ. ನೀನು ನಿಮ್ಮಪ್ಪನ ದುಡ್ಡಲ್ಲಿ ಓಡಾಡಿಕೊಂಡು ಮಜ ಮಾಡ್ತಾ ಇದ್ದಿಯಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ. ಬೆಳಗಾವಿಯ ಅಂಕಲಗಿ ಗ್ರಾಮದಲ್ಲಿ ಶನಿವಾರ ನಡೆದ ಸಭೆಯಲ್ಲಿ
ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 57 ದಿನದಲ್ಲೇ ತೀರ್ಪು ಪ್ರಕಟಿಸಿದ ಕೋಲ್ಕತಾ ಕೋರ್ಟ್
ಕೋಲ್ಕತ್ತಾದ ಆರ್‌ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ. ಕಳೆದ ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ