Menu

ಕಬಡ್ಡಿ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿದು ಬಿದ್ದು ಓರ್ವ ಸಾವು 13 ಮಂದಿಗೆ ಗಾಯ

ಮಂಡ್ಯ: ಕಬಡ್ಡಿ ಪಂದ್ಯಕ್ಕಾಗಿ ಹಾಕಲಾಗಿದ್ದ ಪ್ರೇಕ್ಷಕರ ಗ್ಯಾಲರಿ ದಿಢೀರ್ ಕುಸಿದು ಬಿದ್ದು ಓರ್ವ ಸಾವನ್ನಪ್ಪಿ13 ಕ್ಕೂ ಹೆಚ್ಚು ಮಂದಿ‌ ಗಾಯಗೊಂಡಿರುವ ದುರ್ಘಟನೆ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಮಲ್ಲನಾಯಕನಕಟ್ಟೆಯ ಪಾಪಣ್ಣಚಾರಿ ಮೃತಪಟ್ಟವರು,ಕಬಡ್ಡಿ ಪಂದ್ಯವನ್ನು ಸಾಕಷ್ಟು ವೀಕ್ಷಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಶ್ರೀ ಭೈರವ ಕಪ್ ಹೆಸರಿನಲ್ಲಿ ಮೈಸೂರು ವಿಭಾಗ ಮಟ್ಟದ

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ಅಪಹರಿಸಿ ಕಗ್ಗೊಲೆ

ಬೆಂಗಳೂರು:ಕ್ಯಾಬ್‌ ಚಾಲಕರೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸಾತನೂರಿನ ಕಬ್ಬಾಳು ಸಮೀಪದ ಅರೆಕಟ್ಟೆದೊಡ್ಡಿ ಬಳಿ ಶನಿವಾರ ರಾತ್ರಿ ನಡೆದಿದೆ. ಸೋಲದೇವನಹಳ್ಳಿಯ ಚಿಕ್ಕಬ್ಯಾಲಕೆರೆಯ ಚಂದ್ರಶೇಖರ (39) ಕೊಲೆಯಾದವರು, ನಗರದಲ್ಲಿ ಕ್ಯಾಬ್‌ ಚಾಲಕರಾಗಿದ್ದ ಚಂದ್ರಶೇಖರ ಅವರನ್ನು ರಾತ್ರಿ ದುಷ್ಕರ್ಮಿಗಳು ವಾಹನವೊಂದರಲ್ಲಿ

ಮುಂಬೈಗೆ ಸತತ 5ನೇ ಜಯ, ಲಕ್ನೋ ಸೂಪರ್ ಜೈಂಟ್ಸ್ ಗೆ 54 ರನ್ ಆಘಾತ

ಮುಂಬೈ: ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಅರ್ಧಶತಕ ಮತ್ತು ಜಸ್ ಪ್ರೀತ್ ಬುಮ್ರಾ ಮಾರಕ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್ 54 ರನ್ ಗಳ ಭಾರೀ ಅಂತರದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಮಗಳ ಕೊಂದು ನದಿಗೆ ಶವ ಎಸೆದ ಅಪ್ಪ: 8 ತಿಂಗಳ ನಂತರ ಪ್ರಕರಣ ಬೆಳಕಿಗೆ

ಕಲಬುರಗಿ: ಪ್ರೀತಿಸಿದ ಅನ್ಯ ಕೋಮಿನ ಯುವಕನನ್ನು ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದ ಮಗಳನ್ನು ಕೊಂದು ನದಿಗೆ ಎಸೆದ ಪ್ರಕರಣ 8 ತಿಂಗಳ ನಂತರ ಬೆಳಕಿಗೆ ಬಂದಿರುವ ಘಟನೆ ಕಲಬುರಗಿಯ ಲಿಂಗಸೂರಿನಲ್ಲಿ ನಡೆದಿದೆ. ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಲಕ್ಕಪ್ಪ ಕಂಬಳಿ ಎನ್ನುವಾತ ತನ್ನ

ಕಾಶ್ಮೀರ ಅಭಿವೃದ್ಧಿ ಸಹಿಸದ ಉಗ್ರರಿಂದ ದಾಳಿ: ಮನ್ ಕೀ ಬಾತ್ ನಲ್ಲಿ ಮೋದಿ ಕಿಡಿ

ಕಾಶ್ಮೀರ ಅಭಿವೃದ್ಧಿ ಸಹಿಸದ ಉಗ್ರರು ದಾಳಿ ಮಾಡಿ ಮುಗ್ಧರನ್ನು ಹತ್ಯೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಿಡಿಕಾರಿದ್ದಾರೆ. ಭಾನುವಾರ 121ನೇ ಮನ್ ಕೀ ಬಾತ್ ನಲ್ಲಿ ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರಸ್ತಾಪಿಸಿದ ಅವರು,

ಶಾಸಕ ವಿನಯ್ ಕುಲಕರ್ಣಿ- ಐಶ್ವರ್ಯ ಗೌಡ ಕೋಟ್ಯಂತರ ರೂ. ವ್ಯವಹಾರ: ಇಡಿ ತನಿಖೆಯಲ್ಲಿ ಬಯಲು

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ (DK Suresh) ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ ಪ್ರಕರಣದ ತನಿಖೆಯನ್ನು ಇಡಿ ಚುರುಕುಗೊಳಿಸಿದ್ದು, ತನಿಖೆ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇಡಿ ಅಧಿಕಾರಿಗಳು ಐಶ್ವರ್ಯಾ ಗೌಡ, ಶಾಸಕ ವಿನಯ್ ಕುಲಕರ್ಣಿ ಹಾಗೂ ಶಿಲ್ಪಾಗೌಡ

ಬಿಜೆಪಿ, ಆರ್ ಎಸ್ ಎಸ್ ಗೆ ಸಂವಿಧಾನದ ಮಹತ್ವ ಗೊತ್ತಿಲ್ಲ: ಸಚಿವ ಎನ್. ಚೆಲುವರಾಯಸ್ವಾಮಿ

ಮಂಡ್ಯ : ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಇವರ ಬೆಂಬಲಕ್ಕೆ ನಿಂತಿರುವ ರಾಷ್ಟ್ರೀಯ ಸ್ವಯಂಸೇವಾ ಸಂಘದವರು ಸಂವಿಧಾನ ಒಪ್ಪುತ್ತಾರೆ, ವಿರೋಧವನ್ನು ಮಾಡುತ್ತಾ ಬರುತ್ತಾರೆ ಇದನ್ನು ನೋಡಿದರೆ ಇವರಿಗೆ ಸಂವಿಧಾನದ ಮಹತ್ವ ಗೊತ್ತಿದೆಯೋ ಗೊತ್ತಿಲ್ಲವೊ ಎಂದು

ಯುದ್ಧವೇ ಬೇಡ ಎಂದು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತಾಕಬೇಕು: ದೇಶದ ಸಾರ್ವಭೌಮತೆ ಧಕ್ಕೆ ಬಂದಾಗ ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ: ಇದನ್ನು ಪ್ರತೀ ಸಂದರ್ಭದಲ್ಲೂ ಭಾರತ ಸಾಬೀತು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು. ದೇವನಹಳ್ಳಿಯಲ್ಲಿ ಭಾನುವಾರ

ಭಾರತದ ರಕ್ಷಣೆ ಮುಖ್ಯ, ಪಾಕಿಸ್ತಾನದ ವಿರುದ್ಧ ತೀರ್ಮಾನಗಳಿಗೆ ಬದ್ಧ: ಡಿಕೆಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ನಾವೆಲ್ಲರೂ ಭಾರತೀಯರು, ಎಲ್ಲರ ಪ್ರಾಣ ಕೂಡ ಮುಖ್ಯ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ತೀರ್ಮಾನಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಕೇಂದ್ರ‌ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳಿಗೆ ಬದ್ಧ ಎಂದು ತಿಳಿಸಿದೆ ಎಂದು ಡಿಸಿಎಂ

ಕಸ್ತೂರಿ ರಂಗನ್ ನಿಧನದಿಂದ ಅಪಾರ ಜ್ಞಾನ ಸಂಪತ್ತು ಮರೆಯಾದತಾಂಗಿದೆ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: “ಖ್ಯಾತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರ ನಿಧನದಿಂದ ಅಪಾರ ಜ್ಞಾನ ಸಂಪತ್ತನ್ನು ಕಳೆದುಕೊಂಡಿದ್ದೇವೆ. ಇವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ