Saturday, February 01, 2025
Menu

ಗಂಡನ ಕೊಲೆಗೈದು ಆತನ ಜೇಬಲ್ಲಿಟ್ಟಳು ವಯಾಗ್ರ ಪ್ಯಾಕ್‌

ಕಾನ್ಪುರದಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ಗಂಡನನ್ನು ಕೊಲೆ ಮಾಡಿ, ಗಂಡನ ಶರ್ಟ್‌ ಜೇಬಿನಲ್ಲಿ 8 ವಯಾಗ್ರ ಪ್ಯಾಕ್​ಗಳನ್ನು ಇಟ್ಟು, ಈ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ಸತ್ತಿದ್ದಾನೆ ಎಂದು ಬಿಂಬಿಸಿದ್ದಳು. ಪೊಲೀಸರು ಸತ್ಯ ಎಂದು ನಂಬಿದ್ದರು. ಶವಪರೀಕ್ಷೆಯ ವರದಿ ಬಂದಾಗ ಆತ ಸತ್ತಿದ್ದು ಕತ್ತು ಹಿಚುಕಿದ್ದರಿಂದ ಎಂಬುದು ಬಯಲಾಗಿದೆ. ಅಬಿದ್ ಅಲಿ ಎಂಬಾತ ಪತ್ನಿ ಶಬಾನಾ ಮತ್ತು ಮಗನೊಂದಿಗೆ ಕಾನ್ಪುರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಶಬಾನಾ ಪೊಲೀಸ್ ಠಾಣೆಗೆ ಹೋಗಿ ಪತಿ ವಯಾಗ್ರದ

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದ ಕೇಂದ್ರ: ಡಿಕೆಶಿ ವಾಗ್ದಾಳಿ

ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಅನುದಾನ ನೀಡುವುದಾಗಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಬಸವರಾಜ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್ ನಲ್ಲಿ ಈ ವಿಚಾರ ಸೇರಿಸಿದ್ದರು. ಆದರೆ ಇದುವರೆಗೂ

ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳ ನೇಮಕ: ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಲೈನ್ ಮೆನ್ ಗಳ ಕೊರತೆ ನೀಗಿಸಲು ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳನ್ನು ನೇಮಕ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಬೀದರ್‌   ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಪತಿನಿಧಿಗಳು ಮತ್ತು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ

ರಣಜಿ ಟ್ರೋಫಿ: ಕರ್ನಾಟಕ ಮೊದಲ ದಿನವೇ ಭಾರೀ ಮುನ್ನಡೆ

ಬೌಲರ್ ಗಳ ಪ್ರಾಬಲ್ಯದಿಂದ ಪಂಜಾಬ್ ತಂಡವನ್ನು ಕಳಪೆ ಮೊತ್ತಕ್ಕೆ ಆಲೌಟ್ ಮಾಡಿದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಭಾರೀ ಮುನ್ನಡೆಯತ್ತ ದಾಪುಗಾಲಿರಿಸಿದೆ. ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ

ಯಂತ್ರೋಪಕರಣ ಉದ್ಯಮದಲ್ಲಿ ಶೇ.50 ಕರ್ನಾಟಕದ ಪಾಲು: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಯಂತ್ರೋಪಕರಣ ಕ್ಷೇತ್ರವು ಉತ್ಪಾದನಾ ವಲಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದು, ಕರ್ನಾಟಕವು ಭಾರತದ ಯಂತ್ರೋಪಕರಣಗಳಲ್ಲಿ ಶೇ.50ರಷ್ಟು ಉತ್ಪಾದನೆ ಪಾಲು ಹೊಂದಿದೆ. ಈ ರಾಜ್ಯವು ದೇಶದ ಯಂತ್ರೋಪಕರಣಗಳ ರಾಜಧಾನಿ ಎಂದು ಪ್ರಖ್ಯಾತಿ ಆಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ

ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿಗಳು ಸ್ಥಗಿತವಾಗಿಲ್ಲ ಆದರೆ ಶೀಘ್ರಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರಿಗೆ ಈ ವರ್ಷ 800 ಕೋಟಿಗಳನ್ನು ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನೀಡುವುದಾಗಿ

ನೀರಾವರಿಗೆ ಸರ್ಕಾರ 1274 ಕೋಟಿ ವೆಚ್ಚದ ಯೋಜನೆ ಸಿದ್ದಪಡಿಸಿದೆ: ಸಿಎಂ ಸಿದ್ದರಾಮಯ್ಯ

ಹಿರಿಯೂರು: ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, 1274 ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೊಂದು ಯೋಜನೆಯನ್ನು ಸರ್ಕಾರ ಸಿದ್ದಪಡಿಸಿದೆ. ಇದು ಜಾರಿ ಆದರೆ ಈ ಭಾಗದ ಕಟ್ಟ ಕಡೆಯ ಜಮೀನಿಗೂ ನೀರು ಒದಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ರಾಜ್ಯ ಚಲನಚಿತ್ರ ಶ್ರೇಷ್ಠ ನಟ ಪ್ರಶಸ್ತಿ ತಿರಸ್ಕರಿಸಿದ ಸುದೀಪ್!

ಕಿಚ್ಚು ಸುದೀಪ್ ರಾಜ್ಯ ಸರ್ಕಾರ ಪ್ರಕಟಿಸಿದ್ದ ೨೦೧೯ನೇ ಸಾಲಿನ ರಾಜ್ಯ ಚಲನಚಿತ್ರ ಶ್ರೇಷ್ಠ ನಟ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಬುಧವಾರ ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ಸುದೀಪ್ ಅವರಿಗೆ ಪೈಲ್ವಾನ್ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಪ್ರಕಟಿಸಿತ್ತು. ಚಲನಚಿತ್ರ ಪ್ರಶಸ್ತಿ

ಟ್ರ್ಯಾಕ್ಟರ್ -ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಗರ್ಬಿಣಿ ಸೇರಿ ಇಬ್ಬರ ಸಾವು

ಸಾರಿಗೆ ಬಸ್ ಮತ್ತು ರೈತರ ಟ್ರ್ಯಾಕ್ಟರ್ ನಡುವೆ ಸಂಭವಿಸಿದ  ಡಿಕ್ಕಿಯಲ್ಲಿ ಗರ್ಭಿಣಿ ಸೇರಿ ಇಬ್ಬರು ಸಾವಿಗಿಡಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಸಂಭವಿಸಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಗೋಳ ಸಮೀಪ ಗುರುವಾರ ಮುಂಜಾನೆ ಜರುಗಿದ್ದು, ಶ್ರೀದೇವಿ ರಾಮಣ್ಣ (18)

ಬಿಜೆಪಿಯಲ್ಲಿ ಭಿನ್ನಮತವಿಲ್ಲ: ಬಸವರಾಜ ಬೊಮ್ಮಾಯಿ

ಗದಗ(ಲಕ್ಷ್ಮೇಶ್ವರ): ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಇಲ್ಲಿ ಪ್ರಜಾಪ್ರಭುತ್ವ ಇದೆ ಇದು ಅಣ್ಣ-ತಮ್ಮರ ಜಗಳ ಹಿರಿಯರು‌ ಕುಳಿತುಕೊಂಡು ಬಗೆ ಹರಿಸುವ ವಿಶ್ವಾಸ ಇದೆ. ಬಗೆ ಹರಿಸುವ ಎಲ್ಲಾ ಪ್ರಯತ್ನಗಳು ಆಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಗದಗ