Menu

ಸಿಂಧನೂರು ಪ್ರಾಧಿಕಾರ ಕಚೇರಿಯಲ್ಲಿ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

sindhanoor

ಸಿಂಧನೂರು : ನಗರ ಯೋಜನಾ ಪ್ರಾಧಿಕಾರದ ಕಚೇರಿ ಒಳಗಡೆ ವ್ಯಕ್ತಿ ಓರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಜರುಗಿದೆ.

ವಾರ್ಡ್ ನಂಬರ್ 13ರ ವ್ಯಕ್ತಿಯಾದ ಶಂಕರಪ್ಪ ಎನ್ನುವವರು ಕೆ.ಕರಿಯಪ್ಪ ಲೇಔಟ್ ಎದುರಿಗೆ ಇರುವ ಸರ್ವೆ ನಂಬರ್ 965/10 ತಮ್ಮ ಖಾಲಿ ಜಾಗವನ್ನು ಲೇಔಟ್ ಮಾಡಲು 2017 ರಲ್ಲಿ ನಗರ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ, 6 ವರ್ಷ ಕಳೆದರು ಪ್ರಾಧಿಕಾರದಿಂದ ಸಲ್ಲಿಸಿದ ಅರ್ಜಿಗೆ ಉತ್ತರ ಬರೆದೆ ಇದ್ದಿದ್ದಕ್ಕೆ ಹಾಗೂ ಅಧಿಕಾರಿಗಳ ಬೇಸರಕ್ಕೆ ಶಂಕರಪ್ಪ ಆತ್ಮಹತ್ಯೆಗೆ ಮುಂದಾದ ಘಟನೆ ನಡೆದಿದೆ.

ಶಂಕರಪ್ಪ ಅವರ ಜಾಗದ ಪಕ್ಕದಲ್ಲಿರುವ ಮತ್ತೊಂದು ಖಾಲಿ ಜಾಗವನ್ನು 2024 ರಲ್ಲಿ ಲೇಔಟ್ ಮಾಡಲು ಅಜ್ಜಿ ಸಲ್ಲಿಸಿದ ನಾಗರಾಜ ಹಾಗೂ ಅಮರೇಶ ಎಂಬುವರಿಗೆ ಲೇಔಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ, ಮುಂಚೆ ಸಲ್ಲಿಸಿದ ಅರ್ಜಿಯ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾರೆ.

ಪಕ್ಕದಲ್ಲಿ ಇರುವ ಮತ್ತೊಬ್ಬರ ಜಾಗವನ್ನು ಲೇಔಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ, ನಕ್ಷೆಯ ಪ್ರಕಾರ ಎಲ್ಲಾ ರೀತಿಯಿಂದಲೂ ನನ್ನ ಸರ್ವೇ ನಂಬರ್ 965/10 ಜಾಗ ಇದೆ ಆದರೂ ಅಧಿಕಾರಿಗಳು ಲೇಔಟ್ ಮಾಡಲು ಹಿಂದೇಟು ಹಾಕಿದ್ದಾರೆ ಎಂದು ಶಂಕರಪ್ಪ ಆರೋಪಿಸಿದರು.

ಶಾಸಕರು, ಪ್ರಾಧಿಕಾರದ ಅಧ್ಯಕ್ಷರು ಭೇಟಿ :

ಘಟನೆ ಸ್ಥಳಕ್ಕೆ ದಿಡೀರನೆ ಶಾಸಕ ಹಂಪನಗೌಡ ಬಾದರ್ಲಿ, ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ಹಾಗೂ ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಭೇಟಿ ನೀಡಿ ಮನನೊಂದ ಶಂಕರಪ್ಪ ಅವರೊಂದಿಗೆ ಚರ್ಚಿಸಿದರು.

ನಂತರ ಶಾಸಕರು ಮಾತನಾಡಿ ಇದು ಸೂಡಾ ಆಗೋದಕ್ಕಿಂತ ಮುಂಚೆ ಅರ್ಜಿ ಸಲ್ಲಿಸಿದ್ದಾರೆ, ಮುಂಚೆ ಸಲ್ಲಿಸಿದವರ ಲೇಔಟ್ ಅರ್ಜಿ ಆಗಿಲ್ಲ, ಇತ್ತೀಚಿಗೆ ಅರ್ಜಿ ಸಲ್ಲಿಸಿದವರ ಲೇಔಟ್ ಆಗುತ್ತಿದೆ ಎಂದು ಶಂಕರಪ್ಪ ಎಂಬ ವ್ಯಕ್ತಿ ಆತ್ಮಹತ್ಯೆಗೆ ಮುಂದಾಗಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವುದು ಕಾನೂನು ಪ್ರಕಾರ ತಪ್ಪು ಏನೇ ಸಮಸ್ಯೆ ಇದ್ದರೂ ಮೇಲೆ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು, ಶಂಕ್ರಪ್ಪನವರು 20 ಅರ್ಜಿ ಸಲ್ಲಿಸಿದ್ದಾರೆ.

ತಕರಾರು ಅರ್ಜಿಗಳು ಬಂದಿದ್ದಾವೆ, ಅರ್ಜಿಗಳನ್ನು ಪರಿಶೀಲಿಸುವ ಕೆಲಸ ಮಾಡಿ ಮುಂದಿನ ಸರಿ ತಪ್ಪು ತಿಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಡಿ ವೈ ಎಸ್ ಪಿ ಜಿ ಚಂದ್ರಶೇಖರ, ಸಿ ಪಿ ಐ ವೀರಾರೆಡ್ಡಿ, ಪ್ರಾಧಿಕಾರದ ಸದಸ್ಯರಾದ ವೈ. ನರೇಂದ್ರನಾಥ, ಖಾಜಾ ಮಲಿಕ್ ಇತರರು ಇದ್ದರು.

Related Posts

Leave a Reply

Your email address will not be published. Required fields are marked *