ದೆಹಲಿ ಕೆಂಪು ಕೋಟೆ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಬಾಂಗ್ಲಾದೇಶದ ಐವರು ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 10 ದಿನ ಬಾಕಿಯಿದ್ದು, ದೆಹಲಿಯಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕೆಂಪು ಕೋಟೆಯ ಪ್ರವೇಶ ನಿಯಂತ್ರಣ ಬಿಂದುವಿನ ಬಳಿ ಆ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸ್ ತಂಡವು ಆರೋಪಿಗಳನ್ನು ವಿಚಾರಿಸಿ ಬಂಧಿಸಿದೆ. 20 ರಿಂದ 25 ವರ್ಷದ ಇಬ್ಬರು ಆರೋಪಿಗಳು ತಪಾಸಣೆಯ ಸಮಯದಲ್ಲಿ ಸರಿಯಾದ ದಾಖಲೆಗಳನ್ನ ತೋರಿಸುವಲ್ಲಿ ವಿಫಲರಾಗಿದ್ದಾರೆ. ಹೆಚ್ಚಿನ ತಪಾಸಣೆ ನಡೆಸಿದಾಗ ಅವರು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ.
ಉಪ ಪೊಲೀಸ್ ಆಯುಕ್ತ (ಉತ್ತರ ಜಿಲ್ಲೆ) ರಾಜ ಬಂಥಿಯಾ, ಇವರೆಲ್ಲರೂ ಬಾಂಗ್ಲಾದೇಶದ ಅಕ್ರಮ ವಲಸಿಗರಾಗಿದ್ದು, ಕೆಂಪು ಕೋಟೆ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಹೀಗಾಗಿ ಐವರನ್ನು ಬಂಧಿಸಲಾಗಿದೆ. ಅವರು 3-4 ತಿಂಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ದೆಹಲಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ವಿಚಾರಣೆಯ ಸಮಯದಲ್ಲಿ ತಿಳಿದು ಬಂದಿರುವುದಾಗಿ ತಿಳಿಸಿದ್ದಾರೆ.