ಶಿವಮೊಗ್ಗದ ಮಾರ್ನಮಿ ಬೈಲ್‌ನಲ್ಲಿ ಸ್ಥಳೀಯ ನಿವಾಸಿ ಹರೀಶ್ ಎಂಬವರ ಮೇಲೆ ನೀ ಹಿಂದೂನಾ, ಮುಸ್ಲಿಮನಾ ಎಂದು ಪ್ರಶ್ನಿಸಿ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ.
ರಾತ್ರಿ ಮನೆ ಪಕ್ಕದಲ್ಲೇ ವಾಕ್ ಮಾಡುತ್ತಿದ್ದಾಗ ಬಂದ ದುಷ್ಕರ್ಮಿಗಳು ಅಟ್ಟಾಡಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಿಂದೂ ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಹರೀಶ್ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಹರೀಶ್ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಡ ರಾತ್ರಿ ಊಟ ಮುಗಿಸಿ ವಾಕಿಂಗ್ ಮಾಡುವಾಗ ತಡೆದು ನೀನು ಹಿಂದುನಾ, ಮುಸ್ಲಿಮನಾ ಎಂದು ಪ್ರಶ್ನೆ ಮಾಡಿದಾಗ ಹಿಂದೂ ಎಂದು ಹೇಳುತ್ತಿದ್ದಂತೆ ಏಕಾಏಕಿ ಮೂವರು ಹಲ್ಲೆ ನಡೆಸಿದ್ದಾಗಿ ಹರೀಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿ ದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಚನ್ನಬಸಪ್ಪ ಸ್ಥಳಕ್ಕೆ ಧಾವಿಸಿದ್ದಾರೆ. ಮಾರ್ನಮಿ ಬೈಲ್, ಜೆಸಿ ನಗರ, ಆರ್‌ಎಂಎಲ್ ನಗರ ಪ್ರದೇಶಗಳಲ್ಲಿ ಗಾಂಜಾ ಸೇವನೆಯಿಂದ ಹಲ್ಲೆಗಳಾಗುತ್ತಿವೆ. ಭಯದ ವಾತಾವರಣವಿದೆ ಪೊಲೀಸರಿಗೆ ದೂರು ನೀಡಿ ದರೂ ಪ್ರಯೋಜನ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಚನ್ನಬಸಪ್ಪ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಶಿವಮೊಗ್ಗದಲ್ಲಿ ಅಮಾಯಕರ ಮೇಲೆ ಹಲ್ಲೆಗಳಾಗುತ್ತಿದೆ ಪೊಲೀಸರು ಏನು ಮಾಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಮನೆಯಿಂದ ವಾಕ್ ಹೊರಟ ಹತ್ತೇ ನಿಮಿಷದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಹರೀಶ್ ಪತ್ನಿ ಲಕ್ಷ್ಮಿ ಹೇಳಿದ್ದಾರೆ. ಹಲ್ಲೆ ನಡೆಯುತ್ತಿದ್ದರೂ ಯಾರು ಸಹಾಯಕ್ಕೆ ಬರಲಿಲ್ಲ. ನಮ್ಮ ಬಡಾವಣೆಯಲ್ಲಿ ಎಲ್ಲರೂ ಹೆದರುತ್ತಾರೆ ಎಂದು ತಿಳಿಸಿದ್ದಾರೆ.


