ಉಜಿರೆಯಲ್ಲಿ ಯುಟ್ಯೂಬರ್‌ಗಳ ಮೇಲೆ ಹಲ್ಲೆ ಜೊತೆಗೆ ಬೆನಕ ಆಸ್ಪತ್ರೆಯಲ್ಲಿ ದೃಶ್ಯ ಮಾಧ್ಯಮ ವರದಿಗಾರನ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದಂತೆ ವೀಡಿಯೊ ನೋಡಿ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಧರ್ಮಸ್ಥಳ ದಲ್ಲಿ ಎಸ್ಪಿ ಅರುಣ್ ಕುಮಾರ್ ಹೇಳಿದ್ದಾರೆ.
ಸಂಜೆ ಯೂಟ್ಯೂಬರ್ ಗಳ ಮೇಲೆ ಒಂದು ತಂಡ ಹಲ್ಲೆ ಮಾಡಿದೆ, ಬೆನಕ ಆಸ್ಪತ್ರೆ ಬಳಿ ದೃಶ್ಯ ಮಾಧ್ಯಮ ವರದಿಗಾರನಿಗೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಎರಡೂ ಕಡೆಯಿಂದ ದೂರು ಸ್ವೀಕಾರ ಮಾಡಲಾಗಿದೆ. ವೈದ್ಯರು ಕೊಟ್ಟಂಥ ಮಾಹಿತಿ ಹಿನ್ನಲೆ ಯಾರಿಗೂ ಗಂಭೀರ ಸ್ವರೂಪದ ಗಾಯವಾಗಿಲ್ಲ, ಅಲ್ಪ ಪ್ರಮಾಣದ ಗಾಯವಾಗಿದೆ. ಎರಡು ವಾಹನಗಳು ಜಖಂ ಆಗಿವೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಅಪಪ್ರಚಾರ ಮಾಡುವ ಬಗ್ಗೆ ದೂರಿದ್ದರೆ ಪೊಲೀಸ್ ಠಾಣೆಗೆ ನೀಡಿ, ಕಾನೂನು ಕೈಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡಬಾರದು, ಹಲ್ಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ . ಎರಡೂ ತಂಡಗಳಿಗೆ ಸೂಚನೆ ಕೊಟ್ಟಿರುವುದಾಗಿ ಎಸ್ಪಿ ಹೇಳಿದ್ದಾರೆ.
ಆರೋಪಗಳಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಿದರೆ, ತಪ್ಪಿದ್ದರೆ ಕಾನೂನು ಪ್ರಕಾರ ವಾಗಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎಸ್ ಐಟಿ ತನಿಖೆಯ ಬಗ್ಗೆ ಗೊಂದಲ ಇದ್ದರೆ ಕಾನೂನು ಮೂಲಕ ಗೊಂದಲವನ್ನು ಬಗೆಹರಿಸಲಾಗುವುದು ಎಂದಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದವರ ವಿರುದ್ದ ಎಫ್ಐಆರ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎಂ.ಡಿ, ಜಯಂತ್ ಟಿ ಸೇರಿ ಹಲವರ ವಿರುದ್ದ ಎಫ್ಐಆರ್ ದಾಖಲಾಗಿದೆ. ವರದಿಗಾರ ಹರೀಶ್ ಹಾಗೂ ಕ್ಯಾಮರಾಮೆನ್ ನವೀನ್ ಪೂಜಾರಿ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಹಲ್ಲೆ ನಡೆಸಿರುವ ಆರೋಪವಿದೆ.