Menu

ವೃದ್ಧಾಶ್ರಮದ ಮೇಲೆ ದಾಳಿ: ಮಲ ಮೂತ್ರದ ಬಟ್ಟೆಯಲ್ಲಿ ವೃದ್ಧರು!

old age home

ನೋಯ್ಡಾ: ಮಲ ಮೂತ್ರ ಅಂಟಿದ ಬಟ್ಟೆಗಳನ್ನು ಧರಿಸಿದ್ದ ವೃದ್ಧರು, ಒಬ್ಬರನ್ನು ಕಟ್ಟಿ ಹಾಕಿದ್ದರೆ ಮತ್ತೊಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿರುವುದು, ನಕಲಿ ನರ್ಸ್…

ಇದು ದೆಹಲಿಯ ನೋಯ್ಡಾದ ವೃದ್ಧಾಶ್ರಮದ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಕಂಡು ಬಂದ ಆಘಾತಕಾರಿ ದೃಶ್ಯಗಳು.

ನೋಯ್ಡಾದ ಸೆಕ್ಟರ್ 55 ರಲ್ಲಿರುವ ವೃದ್ಧಾಶ್ರಮದ ಮೇಲೆ ರಾಜ್ಯ ಮಹಿಳಾ ಆಯೋಗ ಮತ್ತು ನೋಯ್ಡಾ ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಪ್ರೊಬೇಷನ್ ಕಚೇರಿ ಸಿಬ್ಬಂದಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 40 ವೃದ್ಧರನ್ನು ರಕ್ಷಿಸಲಾಯಿತು.

ವೃದ್ಧ ಮಹಿಳೆಯನ್ನು ಕಟ್ಟಿಹಾಕಿ ಕೋಣೆಯಲ್ಲಿ ಬಂಧಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಲಕ್ನೋದ ಸಮಾಜ ಕಲ್ಯಾಣ ಇಲಾಖೆಗೆ ಈ ವೀಡಿಯೋ ಗಮನಿಸಿ ದಾಳಿ ನಡೆಸಿ ವೃದ್ಧರನ್ನು ರಕ್ಷಿಸಿದರು.

ಅಧಿಕಾರಿಗಳು ಶುಕ್ರವಾರ ದಿಢೀರನೆ ದಾಳಿ ನಡೆಸಿದಾಗ ಒಬ್ಬ ವೃದ್ಧೆಯನ್ನು ಬಟ್ಟೆಯಿಂದ ಕಟ್ಟಿ ಕೋಣೆಯಲ್ಲಿ ಬೀಗ ಹಾಕಲಾಗಿತ್ತು, ವೃದ್ಧರೊಬ್ಬರನ್ನು ಕತ್ತಲೆಯ, ನೆಲಮಾಳಿಗೆಯಂತಹ ಕೋಣೆಗಳಲ್ಲಿ ಕೂಡಿಹಾಕಲಾಗಿತ್ತು.

ಅನೇಕ ವೃದ್ಧರಿಗೆ ಸರಿಯಾದ ಬಟ್ಟೆಗಳೇ ಇರಲಿಲ್ಲ, ಕೆಲವರು ಮಲಮೂತ್ರ ಅಂಟಿದ ಬಟ್ಟೆಯಲ್ಲೇ ಇದ್ದರು. ಇನ್ನು ಕೆಲವರಿಗೆ ನಡೆಯಲು ಆಗದ ಸ್ಥಿತಿಯಲ್ಲಿದ್ದರೂ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ ಎಂದು ಹಿಂಸೆ ನೀಡಲಾಗುತ್ತಿತ್ತು. ಅದರಲ್ಲೂ ವೃದ್ಧ ಮಹಿಳೆಯರ ಸ್ಥಿತಿಯಂತೂ ಶೋಚನೀಯವಾಗಿತ್ತು.

ದಾಳಿಯ ವೇಳೆ ಕರ್ತವ್ಯದಲ್ಲಿದ್ದ ನರ್ಸ್ ಕೂಡ ನಕಲಿ ಎಂಬುದು ತಿಳಿದು ಬಂದಿದೆ. ಆಕೆಯ ವಿಧ್ಯಾಭ್ಯಾಸ ಪರಿಶೀಲಿಸಿದಾಗ 12ನೇ ತರಗತಿ ಎಂಬುದು ಬೆಳಕಿಗೆ ಬಂದಿದೆ.

Related Posts

Leave a Reply

Your email address will not be published. Required fields are marked *