Menu

ಬಾಹ್ಯಕಾಶ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿದ ಆಕ್ಸಿಯಮ್-4 ನೌಕೆ: ಇತಿಹಾಸ ಬರೆದ ಶುಭಾಂಶು!

shubamshu shukla

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್ 4 ಮಿಷನ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿದಿದೆ.

ಗುರುವಾರ ಸಂಜೆ 4.30ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದಲ್ಲಿ ನೌಕೆ ಯಶಸ್ವಿಯಾಗಿ ಇಳಿದಿದೆ. ಈ ಮೂಲಕ ಭೂಮಿಯಿಂದ ಚಿಮ್ಮಿದ 28 ಗಂಟೆಗಳ ನಂತರ ಬಾಹ್ಯಕಾಶ ನಿಲ್ದಾಣವನ್ನು ನೌಕೆ ತಲುಪಿದೆ.

ಶುಭಾಂಶು ಶುಕ್ಲಾ ಮತ್ತು ತಂಡವು ಬುಧವಾರ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್ 9 ರಾಕೆಟ್‌ನಿಂದ ನಡೆಸಲ್ಪಡುವ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹಾರಿತು. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಲು ಈ ಸಿಬ್ಬಂದಿ ISSನಲ್ಲಿ 14 ದಿನಗಳನ್ನು ಕಳೆಯಲಿದ್ದಾರೆ.

ಭಾರತೀಯ ಶುಭಾಂಶು ಶುಕ್ಲಾ ಸೇರಿ ಫಾಲ್ಕನ್​ 9 ರಾಕೆಟ್​​ನಲ್ಲಿ ನಾಲ್ವರಿಂದ ಬಾಹ್ಯಾಕಾಶಯಾನ ನಡೆದಿದೆ. ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದು, 14 ದಿನಗಳ ಕಾಲ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿರಲಿದ್ದಾರೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಈ ನಾಲ್ವರು 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ. ಬಾಹ್ಯಾಕಾಶದ ಗುರುತ್ವಾಕರ್ಷಣೆ, ಬಯೋಲಾಜಿಕಲ್​​, ಮೆಟಿರಿಯಲ್​ ಸೈನ್ಸ್​ ಬಗ್ಗೆ ಅಧ್ಯಯನ, ಸಂಶೋಧನೆ, ಭೂಮಿ ವೀಕ್ಷಣೆ ಮಾಡಲಿರುವ ನಾಲ್ವರು ಗಗನಯಾನಿಗಳು ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಭಾರತೀಯ ಶುಭಾಂಶು ಶುಕ್ಲಾ, ಪೋಲೆಂಡ್​ನ ಸ್ಲವೋಜ್​​ ಉಝ್​ನಾಸ್ಕಿ​​, ಅಮೆರಿಕ ಪೆಗ್ಗಿ ವಿಟ್ಸನ್​​​, ಹಂಗೇರಿಯಾದ ಟಿಬರ್​​ ಅಂತರಿಕ್ಷಯಾನ ಕೈಗೊಂಡಿದ್ದಾರೆ.

ಆಕ್ಸಿಯಮ್-4 ಮಿಷನ್‌ನಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದ ಶುಭಾಂಶು ಶುಕ್ಲಾ, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಮತ್ತು ಖಾಸಗಿ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕ್ಸ್-4 ಮಿಷನ್ ಅಡಿಯಲ್ಲಿ ನಾಲ್ಕು ಗಗನಯಾತ್ರಿಗಳನ್ನು ಹೊತ್ತೊಯ್ದ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್, ಇಂದು (ಜೂನ್ 26) ಸಂಜೆ ಯಶಸ್ವಿಯಾಗಿ ಡಾಕ್ ಆಗಿದೆ.

Related Posts

Leave a Reply

Your email address will not be published. Required fields are marked *