ಹೈದರಾಬಾದ್ನ ಜೀಡಿಮೆಟ್ಲಾದ ಶಾಪುರ್ ನಗರದಲ್ಲಿ ಮಹಿಳಾ ಸಹಾಯಕ ಸಿಬ್ಬಂದಿ ಶಾಲೆಯಲ್ಲಿ 4 ವರ್ಷದ ನರ್ಸರಿ ಮಗುವನ್ನು ನೆಲಕ್ಕೆ ತಳ್ಳಿ ಹೊಡೆದು ತುಳಿದು ಕೊಲೆ ಮಾಡಿದ್ದಾಳೆ. ಈ ಘಟನೆಯು ಎಲ್ಲ ಪೋಷಕರನ್ನು ಬೆಚ್ಚಿ ಬೀಳಿಸಿದ್ದು, ಶಾಲೆಯೊಳಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕವೊಡ್ಡಿದೆ.
ಮಗುವನ್ನು ಆರೋಪಿ ಶೌಚಾಲಯಕ್ಕೆ ಕರೆದೊಯ್ದ ವೇಳೆ ಆಕೆ ಮಗುವಿನ ಮೇಲೆ ಹಲ್ಲೆ ನಡೆಸಿ ಕಾಲಿನಿಂದ ತುಳಿದು ತಲೆಗೆ ಹೊಡೆದು, ಕತ್ತು ಹಿಸುಕಿ ಕೊಂದಿದ್ದಾಳೆ. ಲಕ್ಷ್ಮಿ ಕೊಲೆಗಾರ್ತಿ.
ಅದೇ ಶಾಲೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಗುವಿನ ತಾಯಿ ಮಕ್ಕಳನ್ನು ಬಿಡಲು ಹೋದಾಗ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ಮಾಡಿ ಥಳಿಸಿ ಕೊಂದಿರುವ ವೀಡಿಯೊ ವೈರಲ್ ಆಗಿದೆ. ಮಗುವಿನ ಪೋಷಕರು ನೀಡಿದ ದೂರಿನ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಯತ್ನ
ಎಂಟನೇ ತರಗತಿಯ ಬಾಲಕನೊಬ್ಬ ನಾಲ್ಕು ನಿಮಿಷಗಳಲ್ಲಿ 52 ಬಾರಿ ಕ್ಷಮೆ ಕೇಳಿ ಶಾಲಾ ಕಟ್ಟಡದಿಂದ ಜಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ, ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿ ಮೊಬೈಲ್ ಶಾಲೆಗೆ ತಂದಿದ್ದ, ತರಗತಿಯ ವೀಡಿಯೊ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಿದ್ದ.
ಶಾಲಾ ಆಡಳಿತ ಮಂಡಳಿಯು ವೀಡಿಯೊ ನೋಡಿ ಅವನ ಪೋಷಕರಿಗೆ ಕರೆ ಮಾಡಿ ಶಾಲಾ ನಿಯಮಗಳ ಉಲ್ಲಂಘಿಸಿದ್ದಾನೆಂದು ದೂರು ನೀಡಿದೆ. ನಾಲ್ಕು ನಿಮಿಷ ತಪ್ಪಿಗೆ ಕ್ಷ ಮೆಯಾಚಿಸುತ್ತಾ ಕಟ್ಟಡದಿಂದ ಜಿಗಿದಿದ್ದಾನೆ. ಪ್ರಾಂಶುಪಾಲರು ಅವನನ್ನು ಶಾಲೆಯಿಂದ ಅಮಾನತುಗೊಳಿಸಿ ಪಡೆದಿರುವ ಪದಕಗಳನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಬೆದರಿಸಿದ್ದರಿಂದ ಭಯಗೊಂಡು ಹೀಗೆ ಮಾಡಿದ್ದಾನೆ ಎನ್ನಲಾಗಿದೆ.


