ಆಷಾಢ ಏಕಾದಶಿ ಪ್ರಯುಕ್ತ ಪಂಡರಾಪುರ ವಿಠ್ಠಲನ ದರ್ಶನಕ್ಕೆ ಭಕ್ತರ ಪ್ರವಾಹವೇ ಹರಿದ ಬರುತ್ತಿದೆ. ಪಂಢರಪುರ ಏಕಾದಶಿ, ಶಯನಿ ಏಕಾದಶಿ ಎಂದೂ ಕರೆಯಲಾಗುವ ಇಂದಿನ ಆಷಾಢ ಏಕಾದಶಿಯಂದು ದೇವರ ಸನ್ನಿಧಿಗಳಲ್ಲಿ ವಿಶೇಷ ಪೂಜೆ, ವ್ರತಗಳೊಂದಿಗೆ ನಡೆಯುತ್ತದೆ.
ಮಹಾರಾಷ್ಟ್ರದ ಪಂಢರಾಪುರದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬ ಇದಾಗಿದ್ದು, ಪಂಢರಾಪುರದ ವಿಠ್ಠಲ-ರುಕ್ಮಿಣಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ವಿಜಯಪುರ, ಬೆಳಗಾವಿ, ಬೀದರ, ಗುಲ್ಬರ್ಗ ಹೀಗೆ ಹಲವು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಾರಿಗಳಾಗಿ ಪಾದಯಾತ್ರೆ ಮೂಲಕ ಬಂದು ವಿಠ್ಠಲನ ದರ್ಶನ ಪಡೆದು ಸೇವೆ ಸಲ್ಲಿಸುತ್ತಾರೆ.
ಏಕಾದಶಿಯಂದು ಪಂಡರಾಪುರದಲ್ಲಿ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಭಕ್ತರು ಭೀಮಾ ನದಿಯಲ್ಲಿ ಸ್ನಾನ ಮಾಡಿ ವಿಠ್ಠಲನ ದರ್ಶನ ಪಡೆಯುತ್ತಾರೆ. ಪಂಡರಾಪುರ ವಾರಿ ಎಂಬುದು ಸಂತ ಜ್ಞಾನೇಶ್ವರ ಮತ್ತು ಸಂತ ತುಕಾರಾಂ ಅವರಂಥ ಸಂತರು ಪಂಢರಪುರಕ್ಕೆ ಕೈಗೊಳ್ಳುವ ಯಾತ್ರೆಯಾಗಿದೆ. ಈ ಯಾತ್ರೆಯಲ್ಲಿ ಅನೇಕ ಭಕ್ತರು ಪಾಲ್ಗೊಳ್ಳುತ್ತಾರೆ.
ಪಂಡರಾಪುರ ಏಕಾದಶಿಯಂದು ಭಕ್ತರು ಭಜನೆಗಳನ್ನು ಹಾಡುತ್ತಾರೆ, ದೇವರ ನಾಮ ಸ್ಮರಣೆ ಮಾಡುತ್ತಾರೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದು ಮಹಾರಾಷ್ಟ್ರ ಹಾಗೂ ಕರ್ನಾಟಕ ಜನರ ನಡುವಿನ ಭಕ್ತಿ ಮತ್ತು ಬಾಂಧವ್ಯದ ದ್ಯೋತಕವಾದ ಹಬ್ಬಗಳಲ್ಲಿ ಒಂದಾಗಿದೆ.