18 ವರ್ಷದ ಗರ್ಭಿಣಿ ಗೆಳತಿಯನ್ನು ಹೊಲಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಂದು, ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಪ್ರಕರಣದ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ. ಶಕೀಲ್ ಮುಸ್ತಫಾನಿಗೆ ಗೆಳತಿಯೊಂದಿಗೆ ಕೆಲವು ತಿಂಗಳಿನಿಂದ ಸಂಬಂಧವಿತ್ತು, ಆಕೆ ಗರ್ಭಿಣಿಯಾದ ಬಳಿಕ ಅವನೊಂದಿಗೆ ಇರಬೇಕು ಎಂದು ಹಠ ಹಿಡಿದಿದ್ದಳು, ಅಲ್ಲಿಂದ ಆಕೆಯನ್ನು ಓಡಿಸಲಾಗದೆ ಕೊಲೆ ಮಾಡಲು ನಿರ್ಧರಿಸಿ ಅದೇ ರೀತಿ ಮಾಡಿದ್ದ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅರೆ ಬೆಂದಿದ್ದ ಬೆತ್ತಲೆ ಶವ ಇತ್ತು, ಪೊಲೀಸರು ತನಿಖೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿ ಶಕೀಲ್‌ನನ್ನು ಪತ್ತೆಹಚ್ಚಿದರು. ತನಿಖೆಯ ಸಮಯದಲ್ಲಿ ಆರೋಪಿಯು ತಾನು ಎಸಗಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಆರೋಪಿ ಶಕೀಲ್ ಆಕೆಯನ್ನು ದೇವುತೋಲಾ ಹೊಲಕ್ಕೆ ಕರೆದುಕೊಂಡು ಹೋಗಿ ದುಪಟ್ಟಾದಿಂದ ಕತ್ತು ಹಿಸುಕಿ ಕೊಂದಿದ್ದಾನೆ. ದೇಹವನ್ನು ಹಾಳೆ ಮತ್ತು ಒಣಹುಲ್ಲಿನಿಂದ ಮುಚ್ಚಿ ಸಾಕ್ಷ್ಯ ನಾಶಮಾಡಲು ದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.