ಭಾರತದ ವಿರುದ್ಧ ಉಗ್ರರ ಕಾರ್ಯಾಚರಣೆಯನ್ನು ಬೆಂಬಲಿಸುತ್ತ ಬಂದಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಕೆಲಸ ಮಾಡುತ್ತಿದ ಇಬ್ಬರನ್ನು ಪಂಜಾಬ್‌ನ ಅಮೃತಸರ ಪೊಲೀಸರು ಬಂಧಿಸಿದ್ದಾರೆ.
ಅಮೃತಸರ ಗ್ರಾಮೀಣ ಪೊಲೀಸರು ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ಅಮೃತಸರದಲ್ಲಿರುವ ಸೇನಾ ಅಂಟಾನ್ಮೆಂಟ್ ಪ್ರದೇಶ, ವಾಯುನೆಲೆಗಳ ಸೂಕ್ಷ್ಮ ಮಿಲಿಟರಿ ಮಾಹಿತಿ ಮತ್ತು ಫೋಟೋಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಕಳುಹಿಸಿದ್ದರು. ಶೇರ್ ಮಾಸಿಹ್ ಮತ್ತು ಸೂರಜ್ ಮಾಸಿಹ್ ಬಂಧಿತರು. ಅವರಿಬ್ಬರನ್ನೂ ಅಮೃತಸರ ಕೇಂದ್ರ ಜೈಲಿಗೆ ಕಳುಹಿಸಲಾಗಿದೆ.
ಪ್ರಾಥಮಿಕ ತನಿಖೆಯ ವೇಳೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಜೊತೆ ಇವರು ಸಂಪರ್ಕ ಹೊಂದಿದ್ದರು. ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸ ಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಪ್ರತಿಕ್ರಿಯಿಸಿದ್ದಾರೆ.