ಆರೋಗ್ಯ
Covid: ಆಮ್ಲಜನಕ,ವೆಂಟಿಲೇಟರ್, ಅಗತ್ಯ ಔಷಧಿ ಲಭ್ಯತೆ ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚನೆ
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ, ಐಸೋಲೇಷನ್ ಹಾಸಿಗೆಗಳು, ವೆಂಟಿಲೇಟರ್ಗಳು ಮತ್ತು ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಆರೋಗ್ಯ ಸೇವೆಗಳ ಮಹಾನಿರ್ದೇಶಕಿ ಡಾ. ಸುನೀತಾ ಶರ್ಮಾ ಅಧ್ಯಕ್ಷತೆಯಲ್ಲಿ ತಾಂತ್ರಿಕ ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ. ವಿಪತ್ತು ನಿರ್ವಹಣಾ ಸೆಲ್, ತುರ್ತು ನಿರ್ವಹಣಾ ಪ್ರತಿಕ್ರಿಯೆ ಸೆಲ್, ರಾಷ್ಟ್ರೀಯ ರೋಗ
Covid: ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚಳ, ಮತ್ತೆ ಏಳು ಸಾವು
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ನಿನ್ನೆಯಿಂದ ಇವತ್ತಿಗೆ 276 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ 4,302 ಕ್ಕೆ ತಲುಪಿದೆ. ಇದರಿಂದಾಗಿ ಏಳು ಸಾವುಗಳಾಗಿವೆ. ಆರೋಗ್ಯ ಸಚಿವಾಲಯ ಇತ್ತೀಚಿನ ಅಂಕಿಅಂಶಗಳನ್ನು ಬಿಡುಗಡೆ ಮಾಡಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆರೋಗ್ಯ
ಮಕ್ಕಳಲ್ಲಿ ಸ್ಮರಣ ಶಕ್ತಿ ವೃದ್ಧಿಗೆ ಒಂದೆಲಗ ಬಳಕೆ ಹೇಗೆ
ಗದ್ದೆಗಳ ಬದುಗಳಲ್ಲಿ ಸಹಜವಾಗಿಯೇ ಬೆಳೆಯುವ ಅಥವಾ ನೆಟ್ಟು ಬೆಳೆಸಬಹುದಾದ ಬ್ರಾಹ್ಮಿ ಅಥವಾ ಒಂದೆಲಗ ಆರೋಗ್ಯದ ಆಗರವಾಗಿ ಗುರುತಿಸಿಕೊಂಡಿದೆ. ಇದರ ಎರಡು ಎಲೆ ಮತ್ತು ಎರಡು ಕಾಳುಮೆಣಸನ್ನು ಪ್ರತಿದಿನ ಬೆಳಗ್ಗೆ ಜಗಿದು ನುಂಗುವುದು ಸ್ಮರಣಶಕ್ತಿ ವೃದ್ಧಿಗೆ ಬಹಳ ಸಹಕಾರಿ, ಆದರೆ ಇದು ಕಹಿಮಿಶ್ರಿತ
ಮಳೆಗಾಲದಲ್ಲಿ ಮಿಸ್ ಮಾಡದೆ ಆಹಾರದಲ್ಲಿ ಒಮ್ಮೆಯಾದರೂ ಕೆಸು ಬಳಸಿ
ಆರೋಗ್ಯಕರ ಕಳೆ ಗಿಡಗಳಲ್ಲಿ ಮಳೆಗಾಲದಲ್ಲಿ ತಾನಾಗಿಯೇ ಬೆಳೆಯುವ ಕೆಸು ಕೂಡ ಒಂದು. ಕರಾವಳಿ ಮತ್ತು ಮಲೆನಾಡುಗಳ ಆಹಾರದಲ್ಲಿ ಕೆಸುವಿನ ಬಳಕೆ ಸ್ವಲ್ಪ ಹೆಚ್ಚು. ಈ ಕೆಸುವಿನಿಂದ ಪತ್ರೊಡೆ ಮಾಡುವುದು ಹೆಚ್ಚು ಮಂದಿಗೆ ಗೊತ್ತು. ಅದೇ ರೀತಿ ಕೆಸು ದಂಟಿನಿಂದ ರುಚಿಕರ ಸಾಂಬಾರ್
Covid: ಹುಬ್ಬಳ್ಳಿ, ಮಂಡ್ಯದಲ್ಲೂ ಕೋವಿಡ್ ಸೋಂಕು ಪತ್ತೆ
ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೋನ ದೃಢಪಟ್ಟಿದೆ. ಮಂಡ್ಯದಲ್ಲೂ ಈ ಬಾರಿಯ ಮೊದಲ ಸೋಂಕು ಪತ್ತೆಯಾಗಿದೆ. ಹುಬ್ಬಳ್ಳಿಯ ಬೈರಿದೇವರಕೊಪ್ಪ ಗ್ರಾಮದ 11 ತಿಂಗಳ ಮಗುವಿಗೆ ಸೋಂಕು ಕಾಣಿಸಿಕೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ
ಮಂಡ್ಯ ಮಿಮ್ಸ್ನಲ್ಲಿ ಬಾಲಕಿ ಸಾವು: ವೈದ್ಯರ ನಿರ್ಲಕ್ಷ್ಯವೆಂಬ ಆರೋಪ
ಏಳು ವರ್ಷದ ಬಾಲಕಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಆರೋಪ ಕೇಳಿಬಂದಿದೆ. ಮಂಡ್ಯ ನಗರದಲ್ಲಿ ಮಿಮ್ಸ್ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಮಳವಳ್ಳಿಯ ನೆಲ್ಲೂರು ಗ್ರಾಮದ ಸಾನ್ವಿ (7) ಮೃತ ಬಾಲಕಿ. ಪಾದದ ಮೂಳೆ ಮುರಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಅಸು ನೀಗಿದ್ದು, ಮಿಮ್ಸ್
Covid: ಬೆಳಗಾವಿಯಲ್ಲಿ ಕೊರೋನಗೆ ವ್ಯಕ್ತಿ ಬಲಿ
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಬುಧವಾರ ತಪಾಸಣೆಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ರೋಗಿಯು ಚಿಕಿತ್ಸೆ ಫಲಿಸದೆ ತಡ ರಾತ್ರಿ ಮೃತಪಟ್ಟಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆಂದು
Heart Attack: ಹಾಸನದಲ್ಲಿ ಪದವಿ ವಿದ್ಯಾರ್ಥಿನಿ ಕುಸಿದು ಸಾವು
ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಮೃತ ಯುವತಿ ೨೧ ವರ್ಷದ ಕವನ ಅಂತಿಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ರಾಜ್ಯದಲ್ಲಿ ಇತ್ತೀಚೆಗೆ ಯುವ ಸಮೂಹದಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆ ವರದಿಯಾಗುತ್ತಲೇ ಇದೆ. ನಿಂತಲ್ಲ,
ಬಿಬಿಎಂಪಿ ವ್ಯಾಪ್ತಿಯಲ್ಲಿ 700 ದಾಟಿದ ಡೆಂಗ್ಯು ಕೇಸ್
ಸಿಲಿಕಾನ್ ಸಿಟಿ ಬೆಂಗಳೂರು ಡೆಂಗ್ಯು ಹಾಟ್ಸ್ಪಾಟ್ ಆಗುತ್ತಿದ್ದು, ಆತಂಕ ಸೃಷ್ಟಿಸಿದೆ. ಕೋವಿಡ್ ಆತಂಕದ ಮಧ್ಯೆ ರಾಜ್ಯದಲ್ಲಿ ಡೆಂಗ್ಯು ಕೇಸ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದ ಡೆಂಗ್ಯು ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ ಅರ್ಧದಷ್ಟು ಪ್ರಕರಣಗಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯ ಕೇಸ್ 700 ದಾಟಿದ್ದು,
ರಾಜ್ಯದಲ್ಲಿ ಕೋವಿಡ್ ಭೀತಿ: ಆರೋಗ್ಯ ಇಲಾಖೆಯಲ್ಲಿ ರಜೆ ಕಟ್
ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯ ರಜೆಯನ್ನು ಮೊಟಕುಗೊಳಿಸಲಾಗಿದೆ. ಪರಿಸ್ಥಿತಿ ತಿಳಿ ಆಗುವ ತನಕ ಯಾರಿಗೂ ರಜೆ ಕೊಡದಂತೆ ಆರೋಗ್ಯ ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ಯಾವ ಸಿಬ್ಬಂದಿಯೂ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚಿಸಲಾಗಿದೆ.