ಇಸ್ಲಮಾಬಾದ್: ಭಾರತ ನಡೆಸಿದ ದಾಳಿಗೆ ಪ್ರತಿದಾಳಿ ನಡೆಸಲು ಪಾಕಿಸ್ತಾನ ಸೇನೆಗೆ ಪರಮಾಧಿಕಾರ ನೀಡಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಆದೇಶ ನೀಡಿದ್ದಾರೆ.
ಭಾರತ ಸೇನೆ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ 70 ಮಂದಿಯನ್ನು ಬಲಿ ಪಡೆದ ಬೆನ್ನಲ್ಲೇ ಸಭೆ ನಡೆಸಿದ ಶೆಹಬಾಜ್ ಷರೀಫ್ ಭಾರತಕ್ಕೆ ತಿರುಗೇಟು ನೀಡಲು ಆದೇಶ ನೀಡಿದ್ದಾರೆ.
ಭಾರತದ ಮೇಲೆ ಯಾವ ರೀತಿಯ ದಾಳಿ ನಡೆಸಬೇಕು ಎಂಬುದು ಸೇರಿದಂತೆ ಪರಮಾಧಾರ ನೀಡಲಾಗಿದ್ದು, ಇದೀಗ ಪಾಕಿಸ್ತಾನ ಸೇನೆ ಪ್ರತಿದಾಳಿಗೆ ನೀಲನಕ್ಷೆ ರೂಪಿಸುತ್ತಿದೆ ಎಂದು ತಿಳಿದು ಬಂದಿದೆ.
ಭಾರತ ದಾಳಿ ನಡೆಸಿರುವುದು ಉಗ್ರರ ಮೇಲೆ ಅಲ್ಲ ನನ್ನ ಮೇಲೆ. ದೇಶದೊಳಗೆ ಯಾರೇ ದಾಳಿ ಮಾಡಿದರೂ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕು. ಈ ಬಾರಿ ತಕ್ಕ ಪ್ರತ್ಯುತ್ತರ ನೀಡಿ ಎಂದು ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.