ಅಪರಾಧ
ಬಿಎಂಟಿಸಿ ಟಿಕೆಟ್ ರೋಲ್ ಕದ್ದು ತರಕಾರಿ ಅಂಗಡಿಗೆ ಮಾರಾಟ
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ನ ಪೇಪರ್ ಟಿಕೆಟ್ ರೋಲ್ ಹಣ್ಣು ಹಾಗೂ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಬಿಲ್ ಕೊಡಲು ಬಳಕೆಯಾಗುತ್ತಿದೆ. ಯಲಹಂಕದ ಅಟ್ಟೂರು ಲೇಔಟ್ನ ಎಸ್ಆರ್ಎಸ್ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಳಿಗೆಯಲ್ಲಿ ಟಿಕೆಟ್ ರೋಲ್ ಉಪಯೋಗಿಸಿ ತರಕಾರಿ ಹಾಗೂ ಹಣ್ಣಿನ ರೇಟ್ ಮುದ್ರಿಸಿ ಕೊಡಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಬಿಎಂಟಿಸಿಗೆ ಮಾಹಿತಿ ನೀಡಿದ ಬಳಿಕ ಬಿಎಂಟಿಸಿ ಅಧಿಕಾರಿಗಳು ಅಂಗಡಿಗೆ ಹೋಗಿ ಪರಿಶೀಲಿಸಿದಾಗ ಎರಡು ಟಿಕೆಟ್ ರೋಲ್ ಪತ್ತೆಯಾಗಿದೆ.
ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆಗೈದು ನಾಪತ್ತೆ ಪ್ರಕರಣ ದಾಖಲಿಸಿದಾಕೆ ಪೊಲೀಸ್ ಬಲೆಗೆ
ಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿ ಶವವನ್ನು ಬಿಸಾಡಿ ಪತಿ ನಾಪತ್ತೆ ಎಂದು ನಾಟಕವಾಡಿರುವ ಪ್ರಕರಣವೊಂದು ಬಯಲಾಗಿದೆ. ಜನ್ನೂರು ಗ್ರಾಮದ ರಮೇಶ್ (45) ಕೊಲೆಯಾದವರು, ಪತ್ನಿ ಗೀತಾ ಹಾಗೂ ಪ್ರಿಯಕರ ಗುರುಪಾದಸ್ವಾಮಿ ಬಂಧಿತ ಆರೋಪಿಗಳು. ದಂಪತಿಗೆ
ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ಅಟ್ಟಾಡಿಸಿ ಹಲ್ಲೆ
ಬೆಂಗಳೂರಿನ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯ ಎದುರಿನಲ್ಲಿರುವ ಗಬ್ರು ಬಿಸ್ಟ್ರೋ ಅಂಡ್ ಕೆಫೆಯಲ್ಲಿ ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ಹಲ್ಲೆ ಮಾಡಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಹಕರು ಆರ್ಡರ್ ಮಾಡಿದ್ದ ಫುಡ್ ನೀಡಲು ರೆಸ್ಟೋರೆಂಟ್ ಸಿಬ್ಬಂದಿ
ಬ್ಯಾಂಕ್ ಸಹಾಯವಾಣಿ ಹೆಸರಲ್ಲಿ ಬೆಂಗಳೂರಿನ ಮಹಿಳೆಗೆ 2 ಲಕ್ಷ ರೂ. ನಾಮ
ಬ್ಯಾಂಕ್ ಸಹಾಯವಾಣಿ ಹೆಸರಿನಲ್ಲಿ ಕರೆ ಮಾಡಿ ಮಹಿಳೆಯೊಬ್ಬರಿಗೆ 2 ಲಕ್ಷ ರೂ. ವಂಚಿಸಿರುವ ಪ್ರಕರಣ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ 58 ವರ್ಷದ ಮಹಿಳೆಯೊಬ್ಬರಿಗೆ ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ವಂಚಕ ಕರೆ ಮಾಡಿ, ನಿಮ್ಮ ಖಾತೆಯಿಂದ ಬೇರೆ ಖಾತೆಗೆ
ಜಿಮೇಲ್ ಖಾತೆ ಎಐ ಮೂಲಕ ಹ್ಯಾಕ್ ಎಚ್ಚರಿಕೆ ನೀಡಿದ ಗೂಗಲ್
2.5 ಬಿಲಿಯನ್ (250 ಕೋಟಿ) ಬಳಕೆದಾರರ ಜಿಮೇಲ್ ಖಾತೆಗಳನ್ನು ಎಐ ಮೂಲಕ ಹ್ಯಾಕ್ ಮಾಡಬಹುದಾಗಿದೆ ಎಂದು ಗೂಗಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಫೋರ್ಬ್ಸ್ ವರದಿಯ ಪ್ರಕಾರ, ಸೈಬರ್ ವಂಚಕರು ಗೂಗಲ್ ಬೆಂಬಲದ ಹೆಸರಿನಲ್ಲಿ ಕರೆ ಮಾಡುವ ಮೂಲಕ ವಂಚನೆ ಮಾಡುತ್ತಿದ್ದಾರೆ. ಯಾವುದೇ
ವಿಧವೆಯ ಮದುವೆಯಾಗಿದ್ದ ಪೊಲೀಸ್ ವಿರುದ್ಧ ಡೌರಿ ಕೇಸ್
ಶೇಷಾದ್ರಿಪುರಂ ಠಾಣೆ ಕಾನ್‌ಸ್ಟೇಬಲ್ ಮನೋಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ವಿಧವೆಯಾಗಿದ್ದ ಸಂತ್ರಸ್ತೆಯನ್ನು ಮನೋಜ್ 2024ರ ನ.28 ರಂದು ಮದುವೆ ಆಗಿದ್ದರು. ಮದುವೆಯಾಗಿ ಕ್ವಾಟ್ರಸ್‌ಗೆ ಆಕೆಯನ್ನು ಕರೆ ತಂದಾಗ ಕುಟುಂಬಸ್ಥರು ಅವಾಚ್ಯವಾಗಿ ನಿಂದಿಸಿದ್ದರು. ಬೇರೆಯವರನ್ನು ಮದುವೆಯಾಗಿದ್ದರೆ
ಶಾಲಾ ಆವರಣದಲ್ಲೇ ಬಾಲಕಿಯ ಗ್ಯಾಂಗ್ ರೇಪ್: ಸರ್ಕಾರದ ವಿರುದ್ಧ ಅಶೋಕ್ ಕಿಡಿ
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ. ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ರಾಜ್ಯದಲ್ಲಿ
ಕೋಲ್ಕೊತಾ ಇಎಸ್‌ಐ ಆಸ್ಪತ್ರೆ ಕ್ವಾರ್ಟರ್ಸ್‌ನಲ್ಲಿ ಆರ್‌ಜಿ ಕರ್ ಕಾಲೇಜಿನ ಟ್ರೈನಿ ವೈದ್ಯೆಯ ಶವ ಪತ್ತೆ
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಕಮರ್ಹಟಿಯಲ್ಲಿರುವ ಇಎಸ್‌ಐ ಆಸ್ಪತ್ರೆ ಕ್ವಾರ್ಟರ್ಸ್‌ನಲ್ಲಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾರೆ. ವಿದ್ಯಾರ್ಥಿನಿಯ ತಾಯಿ ತನ್ನ ಮಗಳಿಗೆ ಕರೆ ಮಾಡಿದರೂ ಉತ್ತರಿಸದ ಕಾರಣ ಭಯಭೀತರಾಗಿದ್ದರು. ಬಳಿಕ
ಕುಡಿದ ಮತ್ತಿನಲ್ಲಿ ಕೋಲಾರ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ ಭೂಪ
ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕೋಲಾರ ರೈಲು ನಿಲ್ದಾಣದೊಳಗೆ ಕಾರು ನುಗ್ಗಿಸಿದ್ದಾನೆ. ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಕಾರು ರೈಲು ಪ್ಲಾಟ್‌ಫಾರ್ಮ್ ಮೇಲಿಂದ ಹಳಿಗಳ ಮೇಲೆ ಅಪ್ಪಳಿಸಿ ಕಾರು ಮತ್ತು ರೈಲ್ವೆ ಹಳಿ ಜಖಂಗೊಂಡಿದೆ. ರಾಕೇಶ್ ಎಂಬಾತ
ಕುಂಭಮೇಳದಿಂದ ವಾಪಸಾಗುತ್ತಿದ್ದ ಐವರು ನೇಪಾಳಿಗಳು ಅಪಘಾತಕ್ಕೆ ಬಲಿ
ಕುಂಭಮೇಳದಲ್ಲಿ ಪಾಲ್ಗೊಂಡು ವಾಪಸ್ ಆಗುತ್ತಿದ್ದಾಗ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಐವರು ನೇಪಾಳಿ ಪ್ರಜೆಗಳು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಒಂಬತ್ತು ಜನರಲ್ಲಿ ಐವರು ಸ್ಥಳದಲ್ಲೇ ಅಸು ನೀಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಚನಾ ಠಾಕೂರ್,




