ಅಪರಾಧ
ತಿರುಪತಿ ಲಡ್ಡು ಕಲಬೆರಕೆ: ನಾಲ್ವರನ್ನು ಬಂಧಿಸಿದ ಸಿಬಿಐ
ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದಲ್ಲಿ ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉತ್ತರಾಖಂಡ್ ರೂರ್ಕಿಯ ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್ ಜೈನ್, ಪೊಮಿಲ್ ಜೈನ್, ಪೂನಂಬಾಕ್ಕಂನ ವೈಷ್ಣವಿ ಡೈರಿ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ, ದುಂಡಿಗಲ್‌ನ ಎಆರ್ ಡೈರಿ ಎಂಡಿ ರಾಜಶೇಖರನ್ ಬಂಧಿತ ಆರೋಪಿಗಳು. ಟೆಂಡರ್ ಪಡೆಯುವ ಹಂತದಿಂದ ಪೂರೈಕೆ
ಅನ್ಯಜಾತಿಯವನ ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದೇ ಬಿಟ್ಟ ತಂದೆ
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರ್ಗೆನ ತಾಂಡಾದಲ್ಲಿ ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಳು ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಕ ಮಗಳನ್ನ ಕೊಲೆ ಮಾಡಿ ತಂದೆ ಪರಾರಿಯಾಗಿರುವ ಪ್ರಕರಣ ನಡೆದಿದೆ. ಬರ್ಗೆನ ತಾಂಡಾದ ನಿವಾಸಿ ಪರಶುರಾವ ಎಂಬಾತ ತನ್ನ ಮಗಳು ಅನ್ಯಜಾತಿಯ ಯುವಕನನ್ನು
ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೈದು ನದಿಗೆಸೆದಳು
ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನ ಜೊತೆಗೆ ಸೇರಿಕೊಂಡು ಪತ್ನಿ ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆದಿದ್ದಾಳೆ. ಬಸ್ತವಾಡ ಗ್ರಾಮದ ಅಪ್ಪಾಸಾಬ ಕೊಲೆಯಾ ಗಿದ್ದು, ಆರೋಪಿ ಪತ್ನಿ ಸಿದ್ದವ್ವ ಓಲೇಕಾರ್ ಮತ್ತು ಆಕೆಯ ಪ್ರಿಯಕರ ಗಣಪತಿ
ಪೊಲೀಸ್ ಠಾಣೆ ಮುಂದೆ ತಂದೆಯ ಶವವಿಟ್ಟು ಇನ್ಸ್ಪೆಕ್ಟರ್ ಪ್ರತಿಭಟನೆ
ಬೆಳಗಾವಿಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಪೊಲೀಸ್ ಠಾಣೆಯ ಎದರು ತಂದೆಯ ಶವವಿಟ್ಟು ಇನ್ಸ್ಪೆಕ್ಟರ್ ಪ್ರತಿಭಟನೆ ನಡೆಸಿದ್ದಾರೆ. ದೇವದುರ್ಗ ಠಾಣೆಯ ಇನ್ಸ್ಪೆಕ್ಟರ್ ಅಶೋಕ ಸದಲಗಿಯವರು ಹಾರೂಗೇರಿ ಠಾಣೆ ಪಿಎಸ್ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ಸ್ಪೆಕ್ಟರ್ ಅಶೋಕ ಸದಲಗಿ ತಂದೆ
ಎಟಿಎಂ ಯಂತ್ರಗಳಿಗೆ ಹಣ ಹಾಕುವಾಗಲೇ ದೋಚುತ್ತಿದ್ದ ಕ್ಯಾಶ್ ಆಫೀಸರ್ ಸೇರಿ 6 ಮಂದಿ ಸೆರೆ
ಬೆಂಗಳೂರು:ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಸ್ವಲ್ಪ ಹಾಕಿ ಉಳಿದ ಹಣವನ್ನು ಲಪಟಾಯಿಸುತ್ತಿದ್ದ ಹಾಗೂ ಪಾಸ್ ವರ್ಡ್ ಬಳಸಿ ಹಣ ಕದಿಯುತ್ತಿದ್ದ ಏಜೆನ್ಸಿಯೊಂದರ 6 ಮಂದಿ ನೌಕರರನ್ನು ಬಂಧಿಸಿ 90 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ. ನಂದಿನಿ ಲೇಔಟ್ ನ ಕ್ಯಾಶ್
ತಂದೆಯಿಂದ ನಿರಂತರ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಬಾಲಕಿ
ಅಹಮದಾಬಾದ್ನಲ್ಲಿ ಮಗಳ ಮೇಲೆ ತಂದೆ ನಿರಂತರ ಅತ್ಯಾಚಾರವೆಸಗಿ ಗರ್ಭವತಿ ಮಾಡಿರುವ ಪ್ರಕರಣ ವರದಿಯಾಗಿದೆ. 14 ವರ್ಷದ ಸಂತ್ರಸ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ದಿನಗೂಲಿ ಕಾರ್ಮಿಕನಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆಗ
ಬಿಎಸ್‌ವೈಗೆ ನಿರೀಕ್ಷಣಾ ಜಾಮೀನು, ಪೋಕ್ಸೋ ಪ್ರಕರಣ ರದ್ದು ಇಲ್ಲ: ಹೈಕೋರ್ಟ್
ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ ಆದೇಶ ಹೊರಡಿಸಿ ಪ್ರಕರಣ ರದ್ದು ಮಾಡಲು ನಿರಾಕರಿಸಿದೆ. ಇದರಿಂದ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ ಅಷ್ಟೇ. ಆದ್ರೆ ಕಷ್ಟ ತಪ್ಪಿಲ್ಲ.
ಮನೆಯವರನ್ನು ಹೊರಗಟ್ಟಿ ಬೀಗ ಜಡಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ, ಮನೆ ತೊರೆಯುವುದರ ಜೊತೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯೇ ಸಾಲಗಾರರನ್ನು ಮನೆಯಿಂದ ಹೊರಗಟ್ಟಿ ಬೀಗ ಜಡಿಯುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬ ಮತ್ತು ಗದಗ ಜಿಲ್ಲೆ ರೋಣದ ಶ್ಯಾನಭೋಗರ
ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ
ಚೆನ್ನೈನ ಕಿಲಂಬಕ್ಕಂ ಟರ್ಮಿನಸ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಯುವತಿ ಬಸ್ಸಿಗಾಗಿ ಕಾಯುತ್ತಿದ್ದಾಗ ಆಟೋದಲ್ಲಿ ಬಂದ ಮೂವರು ಆಕೆಯನ್ನು ಅಪಹರಿಸಿದ್ದರು. ಆಟೋ ಚಾಲಕ ಸೇರಿ ಮೂವರು ಚಾಕು ತೋರಿಸಿ
ಮೈಸೂರಿನ ಹಲವೆಡೆ ಐಟಿ ಅಧಿಕಾರಿಗಳಿಂದ ರೇಡ್
ಸರ್ಕಾರದ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಕಾಂಟ್ರಾಕ್ಟರ್ ರಾಮಕೃಷ್ಣೇಗೌಡ ಮನೆ, ಎಂ ಪ್ರೋ ಪ್ಯಾಲೇಸ್, ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಮೈಸೂರಿನ ಹಲವೆಡೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ




