Thursday, January 01, 2026
Menu

ಚಿಕ್ಕಮಗಳೂರಲ್ಲಿ ಶವವಾಗಿ ಪತ್ತೆಯಾದ ಬೆಂಗಳೂರಿನ ಯುವ ಜೋಡಿ

ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಯುವಕ ಹಾಗೂ ಯುವತಿಯ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಯುವತಿ ಕಾರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿದ್ದರೆ ಯುವಕನ ಮೃತದೇಹ ಕಾರು ನಿಂತ ಜಾಗದ ಪಕ್ಕದ ಮರದಲ್ಲಿ ಪತ್ತೆಯಾಗಿದೆ. ಮೃತ ಯುವಜೋಡಿಯ ವಯಸ್ಸು ಅಂದಾಜು 25-30ರ ಒಳಗಿದ್ದು, ಈ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ. ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಇದೆ. ಯುವಕ ಕಾರು ನಿಂತ ಜಾಗದ ಪಕ್ಕದ ಮರಕ್ಕೆ ವೇಲ್‌ನಿಂದ ನೇಣು ಬಿಗಿದುಕೊಂಡಿದ್ದಾನೆ. ವೇಲ್

ವಿಜಯಪುರ ಮೆಡಿಕಲ್ ಕಾಲೇಜಿನಲ್ಲಿ  ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಬಂಧನ

ವಿಜಯಪುರದ ಅಲ್-ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಕಾಶ್ಮೀರದ ಪ್ರಥಮ ವರ್ಷದ ವಿದ್ಯಾರ್ಥಿ ಮೇಲೆ ಅದೇ ಕಾಲೇಜಿನ  ಎಂಬಿಬಿಎಸ್ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್  ಮಾಡಿ ದೈಹಿಕ ಹಿಂಸೆ ನೀಡಿದ್ದಾರೆಂಬ  ಪ್ರಕರಣ ಸಂಬಂಧ ಪೊಲೀಸರು ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಮೊಹಮ್ಮದ್ ಕೈಸರ್ (23),

ನೌಕಾನೆಲೆ ಮಾಹಿತಿ ಪಾಕ್ ಗೆ ರವಾನೆ: ಕಾರವಾರದ ಇಬ್ಬರ ಬಂಧನ

ಕಾರವಾರ: ಕದಂಬ ನೌಕಾನೆಲೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಮಂಗಳವಾರ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ ವೇತನ ತಾಂಡೇಲ ಬಂಧಿತ ಆರೋಪಿಗಳಾಗಿದ್ದಾರೆ. ಸೋಮವಾರವೇ

ಬುದ್ದಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಪಾಪಿ ಮಗ!

ಬುದ್ದಿವಾದ ಹೇಳಿದ ತಂದೆಯನ್ನೇ ಚಾಕುವಿನಿಂದ ಇರಿದು ಪಾಪಿ ಮಗ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಡರಹಳ್ಳಿಯ ತಿಗಳರಪಾಳ್ಯದ ಕೆರೆಯ ಮುನೇಶ್ವರ ದೇವಸ್ಥಾನದ ಬಳಿ ಸೋಮವಾರ ಈ ಘಟನೆ ನಡೆದಿದ್ದು, ಮಾಜಿ ಸೈನಿಕ ಚನ್ನಬಸಪ್ಪ (61) ಅವರನ್ನು ಮಗ ಅಮಿತ್ [21]

ವರ್ತೂರ್‌ ಪ್ರಕಾಶ್‌ ಹೆಸರಲ್ಲಿ ಶ್ವೇತಾಗೌಡ ವಂಚಿಸಿದ ಚಿನ್ನ ಬಾಗಲಗುಂಟೆಯಲ್ಲಿ

ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ನವರತ್ನ ಜ್ಯುವೆಲರಿ ಮಾಲೀಕರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದೆ, ಶ್ವೇತಾಗೌಡ ವಂಚಿಸಿ ಬಚ್ಚಿಟ್ಟಿದ್ದ 2 ಕೆ.ಜಿ 100 ಗ್ರಾಂ ಚಿನ್ನಾಭರಣ ಎಲ್ಲಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಮಾಜಿ ಸಚಿವ

ನಾನಾ ಆಮಿಷವೊಡ್ಡಿ  ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಮಾಜಿ ಪಿಡಿಒ ಬೆಂಗಳೂರು ಪೊಲೀಸ್‌ ಬಲೆಗೆ

ಸರ್ಕಾರಿ ಕೆಲಸ ಕೊಡಿಸುವ ಆಮಿಷ, ಚಿನ್ನದ ಉದ್ಯಮ ಹಾಗೂ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಎರಡು ಪಟ್ಟು ಲಾಭ ಮತ್ತಿತರ ಹೆಸರಿನಲ್ಲಿ ಹಣ ಪಡೆದು ಹಲವರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಂಚಕನನ್ನು ಬೆಂಗಳೂರಿನ  ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಣ ಕಳವು ಪ್ರಶ್ನಿಸಿದ್ದಕ್ಕೆ ಬೆಂಕಿ ಹಚ್ಚಿ ತಂದೆಯನ್ನು ಜೀವಂತ ಸುಟ್ಟ ಮಗ

ಫರೀದಾಬಾದ್‌ನ ಅಜಯ್‌ನಗರದಲ್ಲಿ ಕಳ್ಳತನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಗನೊಬ್ಬ ಬೆಂಕಿ ಹಚ್ಚಿ ತಂದೆಯನ್ನೇ ಜೀವಂತ ಸುಟ್ಟು ಹಾಕಿದ್ದಾನೆ. ಮುಹಮ್ಮದ್ ಅಲೀಮ್ ಮಗನಿಂದ ಬೆಂಕಿಗಾಹುತಿಯಾದವರು. ತನ್ನ ಜೇಬಿನಿಂದ ಹಣ ಕದ್ದಿರುವುದಕ್ಕೆ ಗದರಿಸಿದ್ದಕ್ಕಾಗಿ 14 ವರ್ಷದ ಮಗ ತಂದೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಅತ್ತೆಯ ಸಾಯಿಸಲು ಮಾತ್ರೆ ಕೇಳಿದ ಮಹಿಳೆ: ಪೊಲೀಸ್‌ಗೆ ಮಾಹಿತಿ ನೀಡಿದ ವೈದ್ಯ

ಬೆಂಗಳೂರಿನ ಸಂಜಯನಗರ ವ್ಯಾಪ್ತಿಯಲ್ಲಿ ವೈದ್ಯರೊಬ್ಬರಲ್ಲಿ ಮಹಿಳೆಯು ಅತ್ತೆಯನ್ನು ಕೊಲ್ಲಲು ಮಾತ್ರೆ ಕೇಳಿರುವುದು ವರದಿಯಾಗಿದೆ. ಮಹಿಳೆಯು, ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳಿದ್ದಕ್ಕೆ ವೈದ್ಯರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಡಾಕ್ಟರ್ ಸುನೀಲ್ ಕುಮಾರ್ ಎನ್ನುವವರನ್ನು ಮಹಿಳೆಯೊಬ್ಬರು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದಾರೆ.

ಕಾನೂನು ಪದವಿ ಪ್ರಶ್ನೆಪತ್ರಿಕೆ ಲೀಕ್‌: ಉಪಪ್ರಾಂಶುಪಾಲ ಸೇರಿ ಮೂವರು ಸೆರೆ

ಕಾನೂನು ಪದವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕೋಲಾರದ ಬಸವ ಶ್ರೀ ಕಾನೂನು ವಿಶ್ವವಿದ್ಯಾಲಯದ ಉಪಪ್ರಾಂಶುಪಾಲ ಡಾ. ನಾಗರಾಜ್, ವರುಣ್‌ ಮತ್ತು ಜಗದೀಶ್ ಎಂಬವರನ್ನು ಬಂಧಿಸಿದ್ದಾರೆ. ಜನವರಿ 22ರಂದು ನಡೆಯಬೇಕಿದ್ದ ಕಾನೂನು ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು.

ಅಣ್ಣನ ನೋಡಲು ಜೈಲಿಗೆ ಬಂದು ಸಿಕ್ಕಿಬಿದ್ದ ದರೋಡೆಕೋರ!

ಬೆಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ದರೋಡೆಕೋರ ಅಣ್ಣನನ್ನು ನೋಡಲು ಜೈಲಿಗೆ ಭೇಟಿ ನೀಡಿದಾಗ ಕೃತಕ ಬುದ್ಧಿಮತ್ತೆ ( ಎಐ) ಪವರ್ಡ್ ಫೇಸ್ ರೆಕಗ್ನಿಷನ್ ಕ್ಯಾಮೆರಾದಿಂದ ಪೊಲೀಸರ ಅತಿಥಿಯಾಗಿದ್ದಾನೆ! ಡಕಾಯತಿ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಅಫ್ರೋಜ್