ಅಪರಾಧ
ಮಂಗಳಮುಖಿಯರಿಂದ ಯುವಕನ ಅಪಹರಣ: ಮಧುರೈನಲ್ಲಿ ರಕ್ಷಿಸಿದ ಬೆಂಗಳೂರು ಪೊಲೀಸ್
ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳಮುಖಿಯರು ಅಪಹರಿಸಿಕೊಂಡು ಹೋಗಿದ್ದ 25 ವರ್ಷದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ. ಮಂಗಳಮುಖಿಯರ ತಂಡ ಯುವಕನನ್ನು ಅಪಹರಿಸಿ ತಮಿಳುನಾಡಿನ ಮಧುರೈಗೆ ಕರೆದುಕೊಂಡು ಹೋಗಿತ್ತು. ಅಲ್ಲಿ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ ಲಿಂಗ ಪರಿವರ್ತನೆ ಮಾಡಿಸಲು ಮಂಗಳಮುಖಿಯರ ತಂಡ ಪ್ಲಾನ್ ಮಾಡಿತ್ತು ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಯುವಕನನ್ನು ಮಧುರೈನಿಂದ ರಕ್ಷಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಪೊಲೀಸರು ಮಧುರೈಗೆ ತೆರಳಿದ್ದಾಗ ಯುವಕ ಮಹಿಳೆಯರ ವೇಷದಲ್ಲಿದ್ದ.
ಗ್ಯಾಸ್ ಗೀಸರ್ ಸೋರಿಕೆ: ಬೆಂಗಳೂರಿನಲ್ಲಿ ತಾಯಿ ಮಗು ಸಾವು
ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಮತ್ತು ಮಗು ಮೃತಪಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಚಾಂದಿನಿ (26), ಯುವಿ (4) ಎಂದು ಗುರುತಿಸಲಾಗಿದೆ. ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಇಬ್ಬರೂ ಅಸ್ವಸ್ಥರಾಗಿದ್ದರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮದುವೆಗೆ ಒಪ್ಪದ ಪ್ರಿಯಕರ: ರಾಮನಗರದಲ್ಲಿ ಯುವತಿ ಆತ್ಮಹತ್ಯೆ
ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಪ್ರೀತಿಸಿದ ಯುವಕ ಮದುವೆಯಾಗಲು ಒಪ್ಪಲಿಲ್ಲವೆಂದು ನೊಂದ ಯುವತಿ ಆತ್ನಹತ್ಯೆ ಮಾಡಿಕೊಂಡಿದ್ದಾಳೆ. ವರ್ಷಿಣಿ (22) ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ. ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಯುವಕ ಪ್ರೀತಿಸುತ್ತಿದ್ದರು. ಯುವಕ ಮದುವೆಯಾಗಲು
ನ್ಯಾಷನಲ್ ಹೆರಾಲ್ಡ್ ಕೇಸ್: ಡಿಸಿಎಂ ಆಪ್ತ ಇನಾಯತ್ ಅಲಿಗೆ ದೆಹಲಿ ಪೊಲೀಸ್ ನೋಟಿಸ್
ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಆಪ್ತ, ಮಂಗಳೂರಿನ ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೂ ದೆಹಲಿ ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇಡಿ ನೀಡಿದ್ದ ದೂರಿನ ಅನ್ವಯ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಎಫ್‌ಐಆರ್ ದಾಖಲಿಸಿತ್ತು. ಪ್ರಕರಣದಲ್ಲಿ
ಕೋಲಾರದಲ್ಲಿ ಏಳು ದಿನದ ಹೆಣ್ಣು ಮಗುವನ್ನು ಬಿಟ್ಟು ಅಸ್ಸಾಂ ದಂಪತಿ ಸುಸೈಡ್
ಕೋಲಾರದ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿ ಗ್ರಾಮದಲ್ಲಿ ಅಸ್ಸಾಂ ಮೂಲದ ದಂಪತಿ ಏಳು ದಿನಗಳ ಹೆಣ್ಣು ಶಿಶುವನ್ನು ಬಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೆಹಮಾನ್ (28) ಮತ್ತು ಪತ್ನಿ ಫರಿಜಾ (22) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಗುರುತಿಸಲಾಗಿದೆ. ದಂಪತಿ ಅಸ್ಸಾಂನವರಾಗಿದ್ದು,
ಹಣಕ್ಕಾಗಿ ಮೈಸೂರು ಉದ್ಯಮಿಯ ಕಿಡ್ನ್ಯಾಪ್ ಮಾಡಿದ್ದ ಗ್ಯಾಂಗ್ ಅರೆಸ್ಟ್
ಮೈಸೂರಿನ ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ ಉದ್ಯಮಿಯನ್ನು ಅಪಹರಿಸಿದ್ದ ಗ್ಯಾಂಗ್ ಅನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಮೂರನೇ ಹಂತದ ನಿವಾಸಿ ಲೋಕೇಶ್ ಎಂಬವರನ್ನು ಟಾಟಾ ಸುಮೋದಲ್ಲಿ ಬಂದ ಐದು ಮಂದಿ ಅಪಹರಣ ಮಾಡಿಕೊಂಡು ಹೋಗಿದ್ದರು. ಲೋಕೇಶ್ ಮೊಬೈಲ್‌ನಿಂದ ಅವರ
ಜೈಲಿನಲ್ಲಿ ಸಹ ಕೈದಿಗಳಿಗೆ ಚಿತ್ರಹಿಂಸೆ: ದರ್ಶನ್ ವಿರುದ್ಧ ಆರೋಪ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ಅಲ್ಲಿನ ಕಠಿಣ ನಿಯಮಗಳಿಂದ ರೋಸಿದ್ದು, ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಜೈಲಿನ ಪಾರ್ಟಿ ವೀಡಿಯೊ ವೈರಲ್ ಆಗುತ್ತಿದ್ದಂತೆ ಜೈಲಿನಲ್ಲಿ
ಗಂಗಾವತಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮುಗಿಸಿ ವಾಪಸಾಗುತ್ತಿದ್ದ ಜೋಡಿ ಅಪಘಾತಕ್ಕೆ ಬಲಿ
ಮದುವೆಗೆ ಎರಡು ವಾರವಿದ್ದು, ಸಿದ್ಧತೆಯಲ್ಲಿದ್ದ ಜೋಡಿ, ಸಂಭ್ರಮದಿಂದ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಂಡು ಮನೆಗೆ ವಾಪಸ್ ಆಗುವಾಗ ರಸ್ತೆ ಅಪಘಾತ ಸಂಭವಿಸಿ ಮೃತಪಟ್ಟಿರುವ ಘಟನೆ ಕೊಪ್ಪಳದ ಗಂಗಾವತಿ ಬಳಿ ನಡೆದಿದೆ. ಬೈಕ್ಗೆ ಲಾರಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದ್ದು, ಕರಿಯಪ್ಪ ಮಡಿವಾಳ
ಗಂಡು ಮಗುವಿಗೆ ಹಂಬಲ: ವಿಜಯಪುರದಲ್ಲಿ ಮಾಟಗಾತಿ ಸಲಹೆಯಂತೆ ರಕ್ತ ಬರುವಂತೆ ಪತ್ನಿಯ ಕೂದಲು ಕಿತ್ತ ಗಂಡ
ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದಲ್ಲಿ ಗಂಡು ಮಗು ಬೇಕೆಂದು ಬಯಸುತ್ತಿದ್ದ ವ್ಯಕ್ತಿ ಮಾಟಗಾತಿಯ ಮಾತು ಕೇಳಿ ಪತ್ನಿಯ ನೆತ್ತಿಯಲ್ಲಿ ರಕ್ತ ಬರುವಂತೆ ಬಲವಂತವಾಗಿ ಕೂದಲನ್ನು ಕತ್ತರಿಸಿರುವ ಘಟನೆ ನಡೆದಿದೆ. ದುಂಡೇಶ್ ಮತ್ತು ಜ್ಯೋತಿ ದಳವಾಯಿ ದಂಪತಿಗೆ ಮೂರು ಹೆಣ್ಣು ಮಕ್ಕಳಿದ್ದು, ನಾಲ್ಕನೇಯದಾಗಿ
ಪತ್ನಿಯೊಂದಿಗೆ ಜಗಳ: ಮಕ್ಕಳ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ
ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿ ಸಿಟ್ಟಿನ ಭರದಲ್ಲಿ ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಕ್ಕಳಿಗೆ ವಿಷಕೊಟ್ಟು ಬಳಿಕ ಆತ ವಿಷ ಸೇವಿಸಿದ್ದಾನೆ. ಮೃತ ಬಾಬುರಾಮ್ ಕುಟುಂಬ ಕೆಲವು ಸಮಯದಿಂದ ವೈವಾಹಿಕ ಬಿಕ್ಕಟ್ಟಿನಲ್ಲಿದೆ. ಪತ್ನಿ ಹೆತ್ತವರ ಮನೆಯಲ್ಲಿ




