Thursday, January 01, 2026
Menu

ರನ್ಯಾ ರಾವ್ ಪ್ರಕರಣದಲ್ಲಿ ಯಾವ ಸಚಿವರ ಕೈವಾಡವೂ ಇಲ್ಲ ಅಂದ್ರು ಡಿ.ಕೆ. ಶಿವಕುಮಾರ್

ರನ್ಯಾ ರಾವ್ ಪ್ರಕರಣದಲ್ಲಿ ಯಾವ ಸಚಿವರೂ ಭಾಗಿಯಾಗಿಲ್ಲ. ಅವರಿಗೂ ಪ್ರಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಕಾನೂನು ಪ್ರಕಾರ ತನಿಖಾಧಿಕಾರಿಗಳು ಕೆಲಸ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಹೇಳಿದರು. ಖಾಸಗಿ ಹೊಟೇಲ್ ಬಳಿ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ನಟಿ ರನ್ಯಾ ರಾವ್  ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಸಚಿವರುಗಳ ಹೆಸರು ಕೇಳಿ ಬಂದಿರುವ ಬಗ್ಗೆ ಪ್ರಶ್ನಿಸಿದಾಗ, “ಸಚಿವರಿಗೂ ಇದಕ್ಕೂ ಸಂಬಂಧವಿಲ್ಲ. ಕೇಂದ್ರ ಸರ್ಕಾರದವರು ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ, ಮಾಡಲಿ” ಎಂದರು.

ಮರಳು ಮಾಫಿಯಾದ ದುಷ್ಕರ್ಮಿಗಳಿಂದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ

ಮರಳು ಮಾಫಿಯಾದ ದುಷ್ಕರ್ಮಿಗಳಿಂದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ಬಳಿ ನಡೆದ ಘಟನೆಯಲ್ಲಿ ಮಾನ್ವಿ ಪೊಲೀಸ್ಠಾಣೆಯ ಕಾನ್ಸ್ ಟೇಬಲ್ ಹೆಚ್. ಲಕ್ಷ್ಮಣ ಗಾಯಗೊಂಡಿದ್ದಾರೆ.

ಹಣಕ್ಕಾಗಿ ತಂದೆಯನ್ನೇ ಕೊಂದ ಮಗ; ಮೊಮ್ಮಗನ ಕೃತ್ಯ ಬಾಯಿಬಿಟ್ಟ ಅಜ್ಜಿ

ಹಣಕ್ಕಾಗಿ ಹೆತ್ತ ತಂದೆಯನ್ನೇ ಮಗ ಬರ್ಬರವಾಗಿ ಕೊಲೆ ಮಾಡಿ ಮುಚ್ಚಿ ಹಾಕಲು ಯತ್ನಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ಮಾರ್ಚ್ 8ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿರದಳ್ಳಿ ತಾಂಡದ ನಿವಾಸಿ ಚೆನ್ನಾರೆಡ್ಡಿ ರಾಠೋಡ

ನಿಶ್ಚಿತಾರ್ಥ ಮುಗಿಸಿ ವಾಪಸಾಗುತ್ತಿದ್ದಾಗ ಹನೂರಿನಲ್ಲಿ ಬಸ್‌ ಪಲ್ಟಿಯಾಗಿ ವ್ಯಕ್ತಿ ಸಾವು

ಚಾಮರಾಜನಗರದ ಹನೂರು ತಾಲೂಕಿನ ಬಂಡಳ್ಳಿ ಹೊರ ವಲಯದ ತೆಳ್ಳನೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್​ ಉರುಳಿ ಬಿದ್ದು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನವೀನ್(38) ಮೃತಪಟ್ಟವರು. ಘಟನೆಯಲ್ಲಿ 30ಕ್ಕೂ ಹೆಚ್ಚು ಜನರು

ಕರೆದಾಗ ಬರಲಿಲ್ಲವೆಂದು ಮೂರು ವರ್ಷದ ಮಗುವಿನ ಕೈ ಮುರಿದ ಚಿಕ್ಕಪ್ಪ

ಮೈಸೂರಿನ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ತಾನು ಕರೆದಾಗ ಬರಲಿಲ್ಲವೆಂದು  ಚಿಕ್ಕಪ್ಪನೊಬ್ಬ ಮಗುವಿನ ಮೇಲೆ ಹಲ್ಲೆ ಮಾಡಿ ಕೈ ಮುರಿದಿದ್ದಾನೆ. ಚಿಕ್ಕಪ್ಪ  ಆನಂದ್‌ ಎಂಬಾತ ಮಗುವಿಗೆ ದೊಣ್ಣೆಯಿಂದ ಹೊಡೆದು ಎರಡು ಕೈಮುರಿದಿದ್ದು  ಪೊಲೀಸರು ಆತನನ್ನು ಬಂಧಿಸಿದ್ದಾರೆ. 

ಬಾಲಕಿಗೆ ಬಲವಂತವಾಗಿ ಮದುವೆ ಮಾಡಿ ಕರೆದೊಯ್ದ ಆರೋಪಿಗಳ ಬಂಧನ

ರಾಜ್ಯದ ಗಡಿಭಾಗ ತಮಿಳುನಾಡಿಗೆ ಸೇರಿರುವ ಅಂಚೆಟ್ಟಿ ಗ್ರಾಮದಲ್ಲಿ 7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ ಮಾಡಿ, ಬಾಲಕಿ ಬರುವುದಿಲ್ಲ ಎಂದು ಕಿರುಚಾಡಿದರೂ ಕುಟುಂಬಸ್ಥರು ಆಕೆಯನ್ನು ಹೊತ್ತೊಯ್ದ ಘಟನೆ ನಡೆದಿದೆ. ಈ ದೃಶ್ಯದ ವೀಡಿಯೊ ವೈರಲ್‌ ಆಗಿದ್ದು, ಆರೋಪಿಗಳು ಮದುವೆ ಮಾಡಿ ಬಾಲಕಿ

ಹಾಸನದಲ್ಲಿ ಕಟ್ಟಡ ಕುಸಿದು ಬೀದಿ ಬದಿ ವ್ಯಾಪಾರಿ ಮಹಿಳೆಯರು ಸಾವು

ರಾಜ್ಯದ ನಾನಾ ಕಡೆ ಅವಘಡಗಳಿಂದ ಭಾನುವಾರ ಹಲವರು ಪ್ರಾಣ ಕಳೆದುಕೊಂಡಿರುವ ಮಧ್ಯೆ ಹಾಸನದಲ್ಲಿ ಕಟ್ಟಡವೊಂದು ಕುಸಿದು ಮೂವರು ಮಹಿಳೆಯರು ಸ್ಥಳದಲ್ಲೇ ಅಸು ನೀಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಪಾಳು ಬಿದ್ದಿದ್ದ ಕಟ್ಟಡ ಕುಸಿದುಬಿದ್ದು ಈ ದುರಂತ ಸಂಭವಿಸಿದೆ. ಬೀದಿ ಬದಿ

11.6 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಣೆ: ಬೆಂಗಳೂರಿನ ಯುವಕ ಗೋವಾದಲ್ಲಿ ಅರೆಸ್ಟ್‌

11.6ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದಡಿ ಗೋವಾದ ಪೊಲೀಸರು ಬೆಂಗಳೂರು ಮೂಲದ 23 ವರ್ಷದ ಯುವಕನನ್ನು ಬಂಧಿಸಿ  11 ಕೆಜಿಗಿಂತ ಹೆಚ್ಚು ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಇಷ್ಟೊಂದು ಡೊಡ್ಡ ಪ್ರಮಾಣದಲ್ಲಿ

ಮೈಸೂರು ರೈಲು ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ ಕರೆ

ಅನಾಮಿಕ ವ್ಯಕ್ತಿಯೊಬ್ಬ ಮೈಸೂರು ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಬೆದರಿಕೆ ಕರೆಯು ಆಂಧ್ರ ಪ್ರದೇಶದಿಂದ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಬಾಂಬ್ ಇಡುವಂತೆ ತಿಳಿಸಿದ್ದಾರೆ ಎಂದು ಕರೆ ಮಾಡಿದ

ಚಿತ್ರದುರ್ಗದಲ್ಲಿ ಕಾರು ಲಾರಿ ಡಿಕ್ಕಿಯಾಗಿ ಐವರ ಸಾವು

ಚಿತ್ರದುರ್ಗ ತಾಲೂಕಿನ ಸಿಬಾರಾ ಗ್ರಾಮದ ಬಳಿ ಲಾರಿ-ಇನ್ನೋವಾ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಐವರು ಅಸು ನೀಗಿದ್ದಾರೆ.  ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಸಿಬಾರ ಗ್ರಾಮದ ಹೋಟೆಲ್‌ವೊಂದರ ಬಳಿ  ಬೆಂಗಳೂರು ಮೂಲದ ಲಾರಿ ಹಾಗೂ ಕಾರು ಡಿಕ್ಕಿಯಾಗಿ ದುರಂತ ಸಂಭವಿಸಿದೆ.  ಗಾಯಗೊಂಡ ಓರ್ವನ