Menu

ಮಗನಿಗೆ ಬರ್ತ್‌ ಡೇ ಗಿಫ್ಟ್‌ ಜಗಳ: ಪತ್ನಿ, ಅತ್ತೆಯ ಕೊಲೆಯಲ್ಲಿ ಅಂತ್ಯ

ದೆಹಲಿಯ ರೋಹಿಣಿಯಲ್ಲಿ ಮಗನ ಬರ್ತ್‌ಡೇ ಗಿಫ್ಟ್‌ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಅತ್ತೆಯನ್ನು ಹತ್ಯೆ ಮಾಡಿದ್ದಾನೆ. ಕುಸುಮ್ ಸಿನ್ಹಾ (63) ಮತ್ತು ಮಗಳು ಪ್ರಿಯಾ ಸೆಹಗಲ್ (34) ಕೊಲೆಯಾದವರು. ಯೋಗೇಶ್‌ ಸೆಹಗಲ್ ಕೊಲೆ ಆರೋಪಿ. ಆ.28 ರಂದು ಮೊಮ್ಮಗ ಚಿರಾಗ್‌ನ ಹುಟ್ಟುಹಬ್ಬವನ್ನು ಆಚರಿಸಲು ಮಗಳು ಪ್ರಿಯಾ ಮನೆಗೆ ಕುಸುಮ್ ಬಂದಿದ್ದಾರೆ. ಮಗನಿಗೆ ಬರ್ತ್‌ಡೇ ಗಿಫ್ಟ್‌ ವಿಷಯದಲ್ಲಿ ಪ್ರಿಯಾ ಮತ್ತು ಆಕೆಯ ಪತಿ ಯೋಗೇಶ್ ನಡುವೆ ಜಗಳ ನಡೆದಿತ್ತು,

ಧರ್ಮಸ್ಥಳ ಪ್ರಕರಣ: ಎಸ್‌ಐಟಿಯಿಂದ ಬೆಂಗಳೂರಿನಲ್ಲಿ ಮಹಜರು

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾತಂಡವು ಬೆಂಗಳೂರಿನಲ್ಲಿ ಮಹಜರು ಪ್ರಕ್ರಿಯೆ ಮುಂದುವರಿಸಿದೆ. ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಎಸ್‌ಐಟಿ ಮಹಜರು ನಡೆಸುತ್ತಿದೆ. ವಿದ್ಯಾರಣ್ಯಪುರದ ಎಸ್.ಬಿ ಮ್ಯಾನ್ ಷನ್ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ಷಡ್ಯಂತ್ರ

ಕಳ್ಳರೆಂದು ಭಾವಿಸಿ ಗೂಗಲ್ ಮ್ಯಾಪ್ ತಂಡದ ಸದಸ್ಯರಿಗೆ ಗ್ರಾಮಸ್ಥರಿಂದ ಥಳಿತ

ಉತ್ತರ ಪ್ರದೇಶದ ಘಟಂಪುರದಲ್ಲಿ ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿಯವರು ಥಳಿಸಿದ್ದಾರೆ. ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ಭಾವಿಸಿದ್ದರಿಂದ ಈ ಎಡವಟ್ಟು ನಡೆದಿದೆ. ಗ್ರಾಮಸ್ಥರು

ಬೆಂಗಳೂರು ಸಿಖ್ ಗುರುದ್ವಾರಕ್ಕೆ ಬಾಂಬ್‌ ಬೆದರಿಕೆ

ಬೆಂಗಳೂರಿನ ಹಲಸೂರು ಕೆರೆ ಬಳಿ ಇರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಬಂದಿರುವುದಾಗಿ ದೂರು ದಾಖಲಾಗಿದೆ.  ಗುರುದ್ವಾರದ ಬಾತ್‌ರೂಂನಲ್ಲಿ ಆರ್‌ಡಿಎಕ್ಸ್ ಇಟ್ಟಿರುವುದಾಗಿ De-Brahminize Dravidistan ಎಂಬ ಸಂಘಟನೆಯಿಂದ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಇದು ಬ್ರಾಹ್ಮಣ ವಿರೋಧಿ ಸಂಘಟನ ಎಂದು

ಪಿಎಸ್ಐ ಮೇಲೆ ಕಾರು ಹತ್ತಿಸಲು ಯತ್ನಿಸಿದ ಪುಂಡರಿಂದ ಠಾಣೆಗೆ ಬಂದು ಬೆದರಿಕೆ

ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮುಂದುವರಿದಿದ್ದು, ಪೊಲೀಸರ ಮೇಲೆ ಕಾರು ಹತ್ತಿಸುವುದಕ್ಕೂ ಮುಂದಾಗಿದ್ದಾರೆ.  ರಾಜಗೋಪಲನಗರ ಠಾಣಾ ವ್ಯಾಪ್ತಿಯ ಬಾಟಲ್ ಮಾರ್ಕ್ ಬಾರ್ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ನಾಲ್ಕೈದು ಜನ ಮದ್ಯ ಸೇವಿಸುತ್ತಿದ್ದರು. ಅದೇ ವೇಳೆ ಸಬ್ ಇನ್ಸ್ಪೆಕ್ಟರ್ ಮುರಳಿ ನೈಟ್ ರೌಂಡ್ಸ್ ಮಾಡುತ್ತಿದ್ದರು.

ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಯತ್ನ: ಹೆಡ್ ಕಾನ್‌ಸ್ಟೇಬಲ್‌ ಅಮಾನತು

ಹೋಟೆಲ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟಕ್ಕೆ ಆಕ್ಷೇಪಿಸಿದ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿ ಬೆದರಿಸಿದ ಆರೋಪದಡಿ ಹೆಡ್ ಕಾನ್‌ಸ್ಟೇಬಲ್‌ವೊಬ್ಬರನ್ನು ಅಮಾನತುಗೊಳಿಸಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್‌ ಮಧುಸೂದನ್‌ ಅಮಾನತುಗೊಂಡವರು. ಭಾನುವಾರ ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿ ಕೆ.ಪಿ. ಅಗ್ರಹಾರ ಠಾಣೆ

Accident deaths- ದಕ್ಷಿಣಕನ್ನಡದಲ್ಲಿ ರಸ್ತೆ ಅಪಘಾತಕ್ಕೆ ಐವರು ಬಲಿ

ದಕ್ಷಿಣ ಕನ್ನಡದ ತಲಪಾಡಿ ಟೋಲ್ ಗೇಟ್ ಬಳಿ ನಡೆದ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಕೆಸಿ ರೋಡ್‌ನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ಮಧ್ಯೆ ಅಪಘಾತ ನಡೆದಿದ್ದು, ರಿಕ್ಷಾದಲ್ಲಿದ್ದ ಕೆಸಿ ರೋಡ್‌ನ ಐವರು ಪ್ರಾಣ ಕಳೆದುಕೊಂಡಿದ್ದಾರೆ.

97 ಲಕ್ಷ ರೂ. ಸಮೇತ ಚಾಲಕ ಪರಾರಿ: ಕೆಲವೇ ಗಂಟೆಗಳಲ್ಲಿ ಬಂಧಿಸಿದ ಚಳ್ಳಕೆರೆ ಪೊಲೀಸ್‌

ಬಾಡಿಗೆ ಕಾರು ಚಾಲಕನೊಬ್ಬ ಸಿಬಿಐ ನಿವೃತ್ತ ಎಸ್​​ಪಿಯನ್ನು ಯಾಮಾರಿಸಿ 97 ಲಕ್ಷ ರೂ. ಸಮೇತ ಪರಾರಿಯಾಗಿದ್ದು, ಕೆಲವೇ ಗಂಟೆಯಲ್ಲಿ ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನವರರಾದ ಸಿಬಿಐನ ನಿವೃತ್ತ ಎಸ್​​ಪಿ ಗುರುಪ್ರಸಾದ್ ಪತ್ನಿ ಲಲಿತಾ ಜತೆ ಬಾಡಿಗೆ ಕಾರಿನಲ್ಲಿ ಬಳ್ಳಾರಿಗೆ ಹೋಗಿ ಜಮೀನು

Suicide death- ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ: ಪತಿ ಅರೆಸ್ಟ್‌

ಬೆಂಗಳೂರಿನ ಎಸ್‍ಜಿ.ಪಾಳ್ಯದಲ್ಲಿ ಮಹಿಳಾ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡವರು. ಶಿಲ್ಪಾ ಅವರು ಪ್ರವೀಣ್ ಎಂಬಾತನನ್ನು ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ಶಿಲ್ಪಾಳನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಪ್ರವೀಣ್ ಬಿಂಬಿಸುತ್ತಿದ್ದಾನೆ ಎಂದು

Suicide death- ಬೀದರ್‌ ಸಾರಿಗೆ ಸಂಸ್ಥೆ ಬಸ್‌ನಲ್ಲೇ ಚಾಲಕ ಆತ್ಮಹತ್ಯೆ: ಮ್ಯಾನೇಜರ್‌ ಕಿರುಕುಳ ಕಾರಣವೆಂದ ಕುಟುಂಬ

ರಾಜ್ಯ ಸಾರಿಗೆ ಸಂಸ್ಥೆಯ ಬೀದರ್ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸ್ ಚಾಲಕರೊಬ್ಬರು ಮ್ಯಾನೇಜರ್‌ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಣದೂರು ಗ್ರಾಮದ ನಿವಾಸಿ ರಾಜಪ್ಪ (59) ಬಳ್ಳಾರಿ–ಬೀದರ್ ಮಾರ್ಗದ ಸ್ಲಿಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕರ್ತವ್ಯ ನಿರ್ವಹಿಸುತ್ತಿದ್ದ