ಅಪರಾಧ
ಮಂಗಳೂರು ಮುಡಾ ಆಯುಕ್ತರಿಗೆ ಬ್ರೋಕರ್‌ಗಳಿಂದ ವಾಮಾಚಾರದ ಬೆದರಿಕೆ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ನೂರ್ ಝಹರಾ ಖಾನಂ ಅವರಿಗೆ ದಲ್ಲಾಳಿಗಳು ವಾಮಾಚಾರ ಪ್ರಯೋಗದ ಬೆದರಿಕೆ ಒಡ್ಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಕ್ಕೆ ತನಗೆ ವಾಮಾಚಾರದ ಬೆದರಿಕೆಯೊಡ್ಡಿರುವುದಾಗಿ ಆಯುಕ್ತರು ಇಬ್ಬರು ದಲ್ಲಾಳಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬ್ರೋಕರ್ ವಹಾಬ್ (45) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಾಬಿತ್ (25) ವಿರುದ್ದ ಮೌಢ್ಯ ನಿರ್ಬಂಧ ಕಾಯ್ದೆ 2020ರ ಅಡಿ ಕೇಸು ದಾಖಲಿಸಬೇಕೆಂದು ಕಮಿಷನರ್
ಚಿಕ್ಕಮಗಳೂರಲ್ಲಿ ಮಗಳು ಸೇರಿ ಮೂವರಿಗೆ ಗುಂಡಿಕ್ಕಿ ಕೊಂದು ವ್ಯಕ್ತಿ ಆತ್ಮಹತ್ಯೆ
ಚಿಕ್ಕಮಗಳೂರು ತಾಲೂಕಿನ ಖಾಂಡ್ಯಾ ಸಮೀಪದ ಮಾಗಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗಳು ಸೇರಿ ಒಂದೇ ಮನೆಯಲ್ಲಿದ್ದ ಮೂವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತ್ತೆ ಜ್ಯೋತಿ(50), ನಾದಿನಿ ಸಿಂಧು(26), ಮಗಳು ಖುಷಿ(7) ಕೊಲೆಯಾದವರು. ಮಾಗಲು
ಆಲೋವೆರಾ ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿದ ಬೆಂಗಳೂರು ಬಾಲಕಿ ಸಾವು
ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ಪೋಷಕರ ನಿರ್ಲಕ್ಷ್ಯದಿಂದಾಗಿ ಬಾಲಕಿಯೊಬ್ಬಳು ಆಲೋವೆರಾ ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾಳೆ. 9ನೇ ತರಗತಿ ಓದುತ್ತಿರುವ ನಿಧಿ ಕೃಷ್ಣ (14) ಮೃತ ಬಾಲಕಿ. ಬಾಲಕಿಯು ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಆಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ ಆಲೋವೆರಾ
ಸ್ಕೂಲ್ ಮಗುವಿನ ತಂದೆಗೆ ಹನಿಟ್ರ್ಯಾಪ್, ಸುಲಿಗೆ ಮಾಡಿದ ಬೆಂಗಳೂರಿನ ಶಿಕ್ಷಕಿ ಅರೆಸ್ಟ್
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಪ್ರಿ ಸ್ಕೂಲ್ಗೆ ಬರುತ್ತಿದ್ದ ಮಗುವಿನ ತಂದೆಗೆ ಕಿಸ್ ಕೊಟ್ಟು ಹನಿಟ್ರ್ಯಾಪ್ ಮಾಡಿ 50 ಸಾವಿರ ರೂ. ಸುಲಿಗೆ ಮಾಡಿದ ಶಿಕ್ಷಕಿ ಬೆದರಿಕೆಯೊಡ್ಡಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ
ಗನ್ ಹಿಡ್ಕೊಂಡು ರೀಲ್ಸ್ ಮಾಡಿ ಜೈಲು ಸೇರಿದ್ದಾತನಿಂದ ಕಂತೆ ಕಂತೆ ನೋಟು ಹಿಡಿದು ರೀಲ್ಸ್
ಕಂತೆ ಕಂತೆ ನೋಟು ಹಿಡ್ಕೊಂಡು ಅದನ್ನು ಎಸೆಯುತ್ತ ರೀಲ್ಸ್ ಮಾಡಿ ಇನ್ಸ್ ಸ್ಟಾ ಗ್ರಾಮ್ ನಲ್ಲಿ ಸ್ಟೋರಿ ಅಪ್ಲೋಡ್ ಮಾಡಿ ಬಿಲ್ಡಪ್ ಕೊಡುತ್ತಿದ್ದ ಶೋಕಿವಾಲನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಫಾಲೋ ಮಾಡಿದವ್ರಿಗೆ, ಟೆಲಿಗ್ರಾಮ್ ಪೇಜ್ ಜಾಯಿನ್ ಆದರವರಿಗೆ ದುಡ್ಡು
ಕುಂಭಮೇಳದ ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕನ ಬಂಧನ
ಕುಂಭಮೇಳದಲ್ಲಿ ವೈರಲ್ ಆಗಿದ್ದ ಹುಡುಗಿ ಮೊನಾಲಿಸಾಗೆ ಅವಕಾಶ ನೀಡುವುದಾಗಿ ಹೇಳಿ ಸುದ್ದಿಯಾಗಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ದೆಹಲಿ ಪೊಲೀಸರು ಬಂಧಿಸಿ ದ್ದಾರೆ. ಮುಂಬೈನಲ್ಲಿ
ನ್ಯಾಮತಿಯಲ್ಲಿ ಕದ್ದ ಚಿನ್ನ ತಮಿಳುನಾಡಿನ ಪಾಳುಬಾವಿಯಲ್ಲಿ ಪತ್ತೆ
ದಾವಣಗೆರೆಯ ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣ ನಡೆದು ಆರು ತಿಂಗಳ ಬಳಿಕ ಚಿನ್ನಾಭರಣ ಸಮೇತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಚಿನ್ನ ಮುಚ್ಚಿಟ್ಟಿದ್ದು, ದರೋಡೆಗೆ ಕಾರಣ, ಸಂಚು ಮತ್ತಿತರ ವಿವರಗಳನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ
ಸಾಲದ ಶೂಲ: ದೊಡ್ಡಬಳ್ಳಾಪುರದಲ್ಲಿ ತಿಂಗಳ ಹಿಂದೆ ತಾಯಿ, ಇಂದು ಮಗ ಆತ್ಮಹತ್ಯೆ
ಸಾಲದ ಸುಳಿಗೆ ಸಿಲುಕಿ ಒಂದೂವರೆ ತಿಂಗಳ ಅವಧಿಯಲ್ಲಿ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ನಂದಿ ಮೋರಿ ಬಳಿ ಸೋಮವಾರ ಬೆಳಗ್ಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ತಾಲೂಕಿನ ಕೊನಘಟ್ಟ
ಹಳಿ ತಪ್ಪಿದ ಬೆಂಗಳೂರು-ಕಾಮಕ್ಯ ಎಕ್ಸ್ ಪ್ರೆಸ್, ಒಬ್ಬನ ಸಾವು
ಬೆಂಗಳೂರು-ಕಾಮಕ್ಯ ಎಕ್ಸ್ ಪ್ರೆಸ್ ರೈಲಿನ 11 ಬೋಗಿಗಳು ಒಡಿಶಾದ ಕಟಕ್ ನಲ್ಲಿ ಹಳಿ ತಪ್ಪಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಹೊರಟು ಒಡಿಶಾದ ಗುವಾಹತಿಗೆ ಸಂಚರಿಸುತ್ತಿದ್ದ ರೈಲು ಕಟಕ್ ನ ನೆರ್ಗುಂಡಿ ರೈಲು ನಿಲ್ದಾಣದ ಸಮೀಪ ಹಳಿ ತಪ್ಪಿದೆ. ಘಟನೆಯಲ್ಲಿ 8 ಮಂದಿ
ಸೈಬರ್ ವಂಚಕರ ಬೆದರಿಕೆ: ನೊಂದ ವೃದ್ಧ ದಂಪತಿ ಆತ್ಮಹತ್ಯೆ
ಬೆಳಗಾವಿ: ವಿಡಿಯೋ ಕಾಲ್ ಮಾಡಿ ನಗ್ನ ಚಿತ್ರಗಳಿವೆ ಎನ್ನುವ ಸೈಬರ್ ವಂಚಕರ ಬೆದರಿಕೆಯಿಂದ ನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83), ಪಾವಿಯಾ ನಜರತ್