Menu

ಪತಿ ಹಲ್ಲೆ: ಪೀಣ್ಯದಲ್ಲಿ ಕೋಮಾದಲ್ಲಿದ್ದ ಮಹಿಳೆ ಸಾವು

ಪೀಣ್ಯ ಬಳಿಯ ಚೊಕ್ಕಸಂದ್ರದಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಕೋಮಾದಲ್ಲಿದ್ದ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರೀತಿ ಸಿಂಗ್​ (26) ಮೃತ ಮಹಿಳೆ, ಆರೋಪಿ ಛೋಟೆಲಾಲ್ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಪತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮದ್ಯ ಸೇವಿಸಿ ಮನೆಗೆ ಬಂದಿದ್ದ ಛೋಟೆಲಾಲ್ ಹೆಂಡತಿ ಬಳಿ ಕುಡಿಯಲು ನೀರು ಕೇಳಿದ್ದ, ನಾನು ಈಗ ಕೆಲಸಕ್ಕೆ ಹೋಗಬೇಕು. ನೀನೇ ನೀರು ತೆಗೆದುಕೊಂಡು ಕುಡಿ ಎಂದು ಆಕೆ

ಮತ್ತೆ ಪತಿಯೊಂದಿಗೆ ಜೀವಿಸಬೇಕೆಂದು ವಿಚ್ಛೇದಿತೆ ಮನವಿ: ನಿರಾಕರಿಸಿದ ಹೈಕೋರ್ಟ್‌

ಮದುವೆಯಾದ ಮಹಿಳೆ ಪತಿಯೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪದೆ ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಮತ್ತೆ ಆತನೊಂದಿಗೆ ಜೀವನ ನಡೆಸಲು ಬಯಸಿದ್ದು, ಆತ ಒಪ್ಪದಿದ್ದಾಗ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಆದರೆ ಕೋರ್ಟ್‌ ಆಕೆಯ ಮನವಿಯನ್ನು ನಿರಾಕರಿಸಿದೆ. ಇದು ಪತಿಗೆ ಪತ್ನಿಯಿಂದ

ಚಿಕ್ಕಮಗಳೂರಿನಲ್ಲಿ ಹಸು ಬಾಲಕ್ಕೆ ಬೆಂಕಿ ಹಚ್ಚಿದ ಬಾಲಕನ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಬಾಲಕನೊಬ್ಬ ಹಸುವಿನ ಬಾಲಕ್ಕೆ ಸೆಂಟ್‌ ಸ್ಪ್ರೇ ಮಾಡಿ ಲೈಟರ್‌ನಿಂದ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಾಲಕ ನಡೆಸಿರುವ ಈ ದುಷ್ಕೃತ್ಯವು ಸಾರ್ವಜನಿಕರಲ್ಲಿ ಆಕ್ರೋಶವುಂಟು ಮಾಡಿದೆ. ಸಂಜೆ ರಸ್ತೆಯಲ್ಲಿ ನಿಂತಿದ್ದ ಹಸುವಿನ ಬಾಲಕ್ಕೆ ಬಾಲಕ ಕೈಯಲ್ಲಿದ್ದ ಸೆಂಟ್

ಬೆಂಗಳೂರಿನಲ್ಲಿ ಮರ ಬಿದ್ದು ಯುವತಿ ಸಾವು

ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಠಾಣೆ ಬಳಿ ಬೃಹತ್ ಮರ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಆರ್‌ಟಿ ನಗರದ ಕೀರ್ತನಾ (23) ಮೃತ ಯುವತಿ. ಕೀರ್ತನಾ ಅವರು ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ಪ್ರೀಮಿಯರ್ ಲೀಗ್‌

ನಾಗಮಂಗಲದಲ್ಲಿ ಆತಂಕ ಸೃಷ್ಟಿಸಿದ್ದ ಪ್ರೇತಾತ್ಮ ವೀಡಿಯೊ: ಲೈಕ್ಸ್, ವೀವ್ಸ್‌ಗಾಗಿ ಮಾಡಿದ್ದೆಂದು ತಪ್ಪೊಪ್ಪಿಗೆ

“ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಪ್ರೇತಾತ್ಮ” ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ನಾಗಮಂಗಲದ ಗೋಪಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವೀವ್ಸ್‌ಗಾಗಿ ದೆವ್ವದ ಫೇಕ್ ವೀಡಿಯೊ ಶೇರ್‌ ಮಾಡಿರುವುದಾಗಿ

ತಲಘಟ್ಟಪುರದಲ್ಲಿ ವರದಕ್ಷಿಣೆ ಕಿರುಕುಳ ಆರೋಪ: ಗೃಹಿಣಿ ಆತ್ಮಹತ್ಯೆ

ಬೆಂಗಳೂರಿನ ತಲಘಟ್ಟಪುರದ ಅವಲಹಳ್ಳಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ. ನವ್ಯಾ (28) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನವ್ಯಾ ಮತ್ತು ಶೈಲೇಶ್ ದಂಪತಿ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದರು. ಶೈಲೇಶ್ ಸಾಫ್ಟ್ ವೇರ್ ಎಂಜಿನಿಯರ್. ನವ್ಯಾಗೆ ಪತಿ ಮತ್ತವರ

ನೀರಿನ ಡ್ರಮ್‌ನಲ್ಲಿ ಮಗುವನ್ನು ಮುಳುಗಿಸಿ ಕೊಂದು ತಂದೆ ಆತ್ಮಹತ್ಯೆ

ನಾಲ್ಕು ತಿಂಗಳ ಗಂಡು ಮಗುವನ್ನು ನೀರಿನ ಡ್ರಮ್​​ನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಜಿಯೋರೈ ತಾಲೂಕಿನ ತಲ್ವಾಡಾ ಗ್ರಾಮದಲ್ಲಿ ನಡೆದಿದೆ. ತಂದೆ ಅಮೋಲ್ ಸೋನಾವಾನೆ ತನ್ನ ಮಗನನ್ನು ಅರ್ಧ ನೀರು ತುಂಬಿದ

ಕೆಮ್ಮು ಸಿರಫ್‌ ಸೇವಿಸಿದ ಮಕ್ಕಳ ಸಾವು: ವೈದ್ಯನ ಬಂಧನ

ಕೆಮ್ಮಿನ ಸಿರಪ್ ಸೇವಿಸಿ 11 ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯನನ್ನು ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಬಂಧಿಸಲಾಗಿದೆ. ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿಯ ಚಿಕಿತ್ಸಾಲಯದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ವೈದ್ಯ ಕೋಲ್ಡ್ರಿಫ್ ಸಿರಪ್

ಲೋಕಾಯುಕ್ತ ಅಧಿಕಾರಿಯೆಂದು ಬೆದರಿಸಿ ಹಣಕ್ಕೆ ಬೇಡಿಕೆ: ಆರೋಪಿ ಅರೆಸ್ಟ್‌

ರಾಮನಗರದ ಐಜೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಹೆಸರಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುರೇಗಪ್ಪ ಬಂಧಿತ ಆರೋಪಿ. ಮುರೇಗಪ್ಪ ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಮಾಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಕರೆ

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಶಂಕಾಸ್ಪದ ಅಸ್ಥಿಪಂಜರ ಪತ್ತೆ

ಬೆಂಗಳೂರು: ಕೊತ್ತನೂರು ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊತ್ತನೂರು ಬಳಿಯ ಸಮೃದ್ಧಿ ಅಪಾರ್ಟ್ ಮೆಂಟ್‌ನಲ್ಲಿ ಸುಮಾರು 6ರಿಂದ 8 ತಿಂಗಳ ಹಿಂದೆ ಮೃತಪಟ್ಟಿರಬಹುದಾದ ವ್ಯಕ್ತಿಯ ಅಸ್ಥಿಪಂಜರವು ಗುರುವಾರ ಸಂಜೆ ಕಟ್ಟಡ ಕಾರ್ಮಿಕರಿಗೆ ಕಾಣಿಸಿದೆ. ಅಪಾರ್ಟ್