ಅಪರಾಧ
ಕನ್ನಡಿಗರಿಗೆ ಅವಮಾನಿಸಿದ ಜಿಎಸ್ ಸೂಟ್ ಹೋಟೆಲ್ ಸೀಜ್, ಮ್ಯಾನೇಜರ್ ಅರೆಸ್ಟ್
ಹೋಟೆಲ್‌ನ ಹೊರಭಾಗದ ಎಲ್‌ಇಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸಿ ಬರಹ ಪ್ರದರ್ಶನ ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ ಕೋರಮಂಗಲದ ಜಿ.ಎಸ್ ಸೂಟ್ ಹೋಟೆಲ್ ಅನ್ನು ಸೀಜ್ ಮಾಡಲಾಗಿದ್ದು, ಮ್ಯಾನೇಜರ್ ಸರ್ಫಜ್ ಎಂಬಾತನನ್ನು ಬಂಧಿಸಲಾಗಿದೆ. ಮ್ಯಾನೇಜರ್‌ನನ್ನು ಅರೆಸ್ಟ್ ಮಾಡಿ ಜಿ.ಎಸ್ ಸೂಟ್ ಹೋಟೆಲ್‌ಗೆ ಮಡಿವಾಳ ಪೊಲೀಸರು ಬೀಗ ಹಾಕಿದ್ದಾರೆ. ಹೊಟೇಲ್ ಮಾಲೀಕ ಜಮ್‌ಶದ್ ಮೇಲೂ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಹೋಟೆಲ್ ಮಾಲೀಕ ಕೇರಳದಲ್ಲಿದ್ದಾರೆ. ಜಿ.ಎಸ್ ಸೂಟ್ ಹೋಟೆಲ್‌ನ ಹೊರಭಾಗದ ಎಲ್‌ಇಡಿ ಡಿಜಿಟಲ್
ಜಾತಕದೋಷವೆಂದು ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿ ಅರೆಸ್ಟ್
ಜಾತಕದಲ್ಲಿ ದೊಡ್ಡ ದೋಷವಿದೆ, ಪೂಜೆ ಮಾಡಿ ಸರಿ ಮಾಡುವುದಾಗಿ ಹೇಳಿ ನಂಬಿಸಿ ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿಯನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ಪೊಲೀಸ್ ಕ್ವಾಟ್ರಸ್‌ನಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್ ಅನಾರೋಗ್ಯಕ್ಕೆ ಒಳಗಾದಾಗ ಸ್ನೇಹಿತರ ಮೂಲಕ ಕಲಬುರಗಿಯ ಜ್ಯೋತಿಷಿ
ಐಷಾರಾಮಿ ಕಾರು ಮಾರಾಟದಿಂದ 100 ಕೋಟಿ ತೆರಿಗೆ ವಂಚನೆ: ಹೈದರಾಬಾದ್ ಡೀಲರ್ ಅರೆಸ್ಟ್
ಹೈದರಾಬಾದ್: ಐಷಾರಾಮಿ ಕಾರುಗಳನ್ನು ಅಕ್ರಮ ಮಾರಾಟದಿಂದ 100 ಕೋಟಿ ರೂ. ವಂಚಿಸಿದ್ದ ಹೈದರಾಬಾದ್ ನ ಡೀಲರ್ ನನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ. ಕಾರ್ ಲಾಂಗ್ ಶೋರೂಮ್ ಮಾಲೀಕ ಭಸರಾತ್ ಖಾನ್ ಕಾರುಗಳ ಮೂಲ ಬೆಲೆಗಿಂತ ಶೇ.50ರಷ್ಟು ಕಡಿಮೆ ಬೆಲೆಗೆ ಐಷಾರಾಮಿ ಕಾರುಗಳನ್ನು
ತುಮಕೂರು ಗೃಹ ರಕ್ಷಕದಳ ಕಮಾಂಡೆಂಟ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ತುಮಕೂರು ಜಿಲ್ಲಾ ಗೃಹ ರಕ್ಷಕದಳದ ಕಮಾಂಡೆಂಟ್ ರಾಜೇಂದ್ರ ತರಬೇತಿ ಶಿಬಿರದಲ್ಲಿ ತಪ್ಪು ಹೇಳಿಕೊಡುವ ನೆಪದಲ್ಲಿ ಮೈಮುಟ್ಟಿ ಕಿರುಕುಳ ನೀಡಿರುವುದಾಗಿ ಆರೋಪಿಸಿ ಐವರು ಮಹಿಳಾ ಸಿಬ್ಬಂದಿ ಡಿಸಿ, ಮಹಿಳಾ ಆಯೋಗ ಮತ್ತು ಅಗ್ನಿಶಾಮಕದಳ ಐಜಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ದೂರಿನ ಅರ್ಜಿ
ಪುನೀತ್ ಕೆರೆಹಳ್ಳಿಗೆ ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ
ಹಿಂದೂ ಪರ ಹೋರಾಟಗಾರ ಎನ್ನಲಾಗುವ ಪುನೀತ್ ಕೆರೆಹಳ್ಳಿಗೆ ಮೈಸೂರು ಮೂಲದ ವ್ಯಕ್ತಿ ಜೀವ ಬೆದರಿಕೆ ಒಡ್ಡಿರುವುದು ಬಹಿರಂಗಗೊಂಡಿದೆ. ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬ ವ್ಯಕ್ತಿ ಇದ್ರಿಷ್ ಪಾಷ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ
ಬಾಣಸವಾಡಿಯಲ್ಲಿ ಪತಿಯಿಂದಲೇ ಮಹಿಳೆಯ ಕೊಲೆ
ಬೆಂಗಳೂರಿನ ಬಾಣಸವಾಡಿಯಲ್ಲಿ ಮಹಿಳೆಯೊಬ್ಬರನ್ನು ಪತಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆಯಿತು. ಪತಿ ರಮೇಶ್ ಕೊಲೆ ಆರೋಪಿ, ಕಲೈವಾಣಿ ಕೊಲೆಯಾಗಿರುವ ಮಹಿಳೆ. ಇಬ್ಬರೂ ಕೆಲವು ವರ್ಷಗಳ ಹಿಂದೆ ಪರಸ್ಪರ ಎರಡನೇ ವಿವಾಹವಾಗಿದ್ದರು. ಮರಗೆಲಸ ಮಾಡಿಕೊಂಡಿದ್ದ ಆರೋಪಿ ಉಳಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಆರೋಪಿ
ಸಾಲಬಾಧೆ ತಾಳಲಾರದೇ ಬಾವಿಗೆ ಹಾರಿದ ಕುಟುಂಬ: ತಂದೆ-ಮಗ ಸಾವು, ತಾಯಿ ಸ್ಥಿತಿ ಗಂಭೀರ
ಕುಂದಾಪುರ: ಅತಿಯಾದ ಸಾಲಬಾಧೆಯಿಂದ ಮರ್ಯಾದೆಗೆ ಹೆದರಿ ಒಂದೇ ಕುಟುಂಬದ ಮೂವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ-ಮಗ ಮೃತಪಟ್ಟ ಘಟನೆ ನಡೆದಿದೆ. ಕುಂದಾಪುರದ ತೆಕ್ಕಟ್ಟೆಯ ಕಂಚುಗಾರುಬೆಟ್ಟು ನಿವಾಸಿ ತಂದೆ ಮಾಧವ ದೇವಾಡಿಗ (56) ಹಾಗೂ ಮಗ ಗಿರೀಶ್ ದೇವಾಡಿಗ (22)
ಸ್ಲೀಪರ್ ಬಸ್‌ನಲ್ಲಿ ಹೊತ್ತಿಕೊಂಡ ಬೆಂಕಿ: ಮಲಗಿದ್ದಲ್ಲೇ ಐವರು ಸಜೀವ ದಹನ
ಲಕ್ನೋದ ಮೋಹನ್ ಲಾಲ್ ಗಂಜ್ ಪ್ರದೇಶದ ಕಿಸಾನ್ ಪಥದಲ್ಲಿ ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಐವರು ಸಜೀವ ದಹನಗೊಂಡಿದ್ದಾರೆ. ಬಸ್‌ನಲ್ಲಿ 60 ಪ್ರಯಾಣಿಕರಿದ್ದರು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಏಕಾಏಕಿ
ರಾಜ್ಯದ ನಾನಾ ಕಡೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್
ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಗುರುವಾರ ಬೆಳಿಗ್ಗೆಯೇ ಲೋಕಾಯುಕ್ತ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದೆ. ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಏಳು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು
ವರ್ಕ್ ಫ್ರಂ ಹೊಮ್ ಪ್ರಾಜೆಕ್ಟ್ ನೆಪದಲ್ಲಿ ವಂಚನೆ: ಅಂತರಾಜ್ಯ ಗ್ಯಾಂಗ್ ಬಂಧನ
ಬೆಂಗಳೂರು: ವರ್ಕ್ ಫ್ರಂ ಹೊಮ್ ಪ್ರಾಜೆಕ್ಟ್ ನೆಪದಲ್ಲಿ ಸಾರ್ವಜನಿಕರಿಂದ ಫೋನ್‍ಪೇ,ಗೂಗಲ್ ಪೇ ಬ್ಯಾಂಕ್‍ಗಳ ಮೂಲಕ ಹಣ ವರ್ಗಾವಣೆ ಪಡೆದು ಮೋಸ ಮಾಡುತ್ತಿದ್ದ ಅಂತರಾಜ್ಯ ಗ್ಯಾಂಗ್ ನ್ನು ಬೇಧಿಸಿರುವ ಆಡುಗೊಡಿ ಪೊಲೀಸರು 12 ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ಹರ್ಷವರ್ದನ್ ಓಜಾ




