Menu

ರಾಯಚೂರಿನಲ್ಲಿ ಗಣೇಶ ಮೆರವಣಿಗೆ: ವಿದ್ಯುತ್‌ ಸ್ಪರ್ಶದಿಂದ ಯುವಕ ಸಾವು

ರಾಯಚೂರು ತಾಲೂಕಿನ ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ಗಣೇಶನ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾನೆ. ನರಸಿಂಹ (22) ಮೃತ ಯುವಕ. ಹನುಮಾಪುರ ಬಳಿ ರಾಜೊಳ್ಳಿಬಂಡಾ ಕಾಲುವೆಯಲ್ಲಿ ಗಣೇಶ ವಿಸರ್ಜನೆಗೆ ಹೊರಟಿದ್ದ ವೇಳೆ ಬೊಲೆರೋ ಪಿಕಪ್ ಮೇಲೆ ಗಣೇಶ ಮೂರ್ತಿ ಹಿಡಿದು ಕುಳಿತಿದ್ದ ಯುವಕನಿಗೆ ವಿದ್ಯುತ್ ಸ್ಪರ್ಶಿಸಿದೆ. ಬೊಲೆರೋ ಪಿಕಪ್‌ನಲ್ಲಿದ್ದ ಇನ್ನುಳಿದ ಯುವಕರು ವಿದ್ಯುತ್ ಸ್ಪರ್ಶಿಸಿದ ಕೂಡಲೇ ಕೆಳಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯ ನಡುವೆಯೇ ಗಣೇಶನ ಮೆರವಣಿಗೆ ನಡೆಯುತ್ತಿದ್ದ ವೇಳೆ

ಮಸ್ಕಿಯಲ್ಲಿ ಮಂಚಕ್ಕೆ ಬರಲು ನಿರಾಕರಿಸಿದ ಪತ್ನಿಯ ಕೊಲೆ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದೇಸಾಯಿ ಬೋಗಾಪುರ ಗ್ರಾಮದಲ್ಲಿ ಮಂಚಕ್ಕೆ ಬರಲು ನಿರಾಕರಿಸಿದ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಗಂಗಮ್ಮ ಕೊಲೆಯಾದ ಮಹಿಳೆ. ಯಲ್ಲಪ್ಪ ಕೊಲೆ ಆರೋಪಿ. ಪೊಲೀಸರು ಆರೋಪಿ ಯಲ್ಲಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. 2012ರಲ್ಲಿ

ಬಾಲಕಿಯೊಂದಿಗೆ ಮದುವೆ: ಹುಕ್ಕೇರಿಯಲ್ಲಿ ಗ್ರಾ.ಪಂ ಅಧ್ಯಕ್ಷನ ವಿರುದ್ಧ ಪೋಕ್ಸೊ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ 15 ವರ್ಷದ ಬಾಲಕಿಯನ್ನು ಮದುವೆಯಾಗಿದ್ದು, ಆತನ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯ ಸಚಿವ ಸತೀಶ್‌ ಜಾರಕಿಹೊಳಿ‌ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ

ಮಗನಿಗೆ ಬರ್ತ್‌ ಡೇ ಗಿಫ್ಟ್‌ ಜಗಳ: ಪತ್ನಿ, ಅತ್ತೆಯ ಕೊಲೆಯಲ್ಲಿ ಅಂತ್ಯ

ದೆಹಲಿಯ ರೋಹಿಣಿಯಲ್ಲಿ ಮಗನ ಬರ್ತ್‌ಡೇ ಗಿಫ್ಟ್‌ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಅತ್ತೆಯನ್ನು ಹತ್ಯೆ ಮಾಡಿದ್ದಾನೆ. ಕುಸುಮ್ ಸಿನ್ಹಾ (63) ಮತ್ತು ಮಗಳು ಪ್ರಿಯಾ ಸೆಹಗಲ್ (34) ಕೊಲೆಯಾದವರು. ಯೋಗೇಶ್‌ ಸೆಹಗಲ್ ಕೊಲೆ ಆರೋಪಿ. ಆ.28 ರಂದು ಮೊಮ್ಮಗ

ಧರ್ಮಸ್ಥಳ ಪ್ರಕರಣ: ಎಸ್‌ಐಟಿಯಿಂದ ಬೆಂಗಳೂರಿನಲ್ಲಿ ಮಹಜರು

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾತಂಡವು ಬೆಂಗಳೂರಿನಲ್ಲಿ ಮಹಜರು ಪ್ರಕ್ರಿಯೆ ಮುಂದುವರಿಸಿದೆ. ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಎಸ್‌ಐಟಿ ಮಹಜರು ನಡೆಸುತ್ತಿದೆ. ವಿದ್ಯಾರಣ್ಯಪುರದ ಎಸ್.ಬಿ ಮ್ಯಾನ್ ಷನ್ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ಷಡ್ಯಂತ್ರ

ಕಳ್ಳರೆಂದು ಭಾವಿಸಿ ಗೂಗಲ್ ಮ್ಯಾಪ್ ತಂಡದ ಸದಸ್ಯರಿಗೆ ಗ್ರಾಮಸ್ಥರಿಂದ ಥಳಿತ

ಉತ್ತರ ಪ್ರದೇಶದ ಘಟಂಪುರದಲ್ಲಿ ಗೂಗಲ್ ಮ್ಯಾಪ್ ತಂಡದ ಸದಸ್ಯರನ್ನು ಕಳ್ಳರೆಂದು ಭಾವಿಸಿ ಹಳ್ಳಿಯವರು ಥಳಿಸಿದ್ದಾರೆ. ಬಿರ್ಹಾರ್ ಔಟ್‌ಪೋಸ್ಟ್ ಪ್ರದೇಶದ ಮಹೋಲಿಯಾ ಗ್ರಾಮದ ಗ್ರಾಮಸ್ಥರು ಗೂಗಲ್ ಮ್ಯಾಪ್ ಕ್ಯಾಮೆರಾ ಅಳವಡಿಸಲಾದ ಕಾರನ್ನು ಕಳ್ಳರ ಕಾರು ಎಂದು ಭಾವಿಸಿದ್ದರಿಂದ ಈ ಎಡವಟ್ಟು ನಡೆದಿದೆ. ಗ್ರಾಮಸ್ಥರು

ಬೆಂಗಳೂರು ಸಿಖ್ ಗುರುದ್ವಾರಕ್ಕೆ ಬಾಂಬ್‌ ಬೆದರಿಕೆ

ಬೆಂಗಳೂರಿನ ಹಲಸೂರು ಕೆರೆ ಬಳಿ ಇರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಬಂದಿರುವುದಾಗಿ ದೂರು ದಾಖಲಾಗಿದೆ.  ಗುರುದ್ವಾರದ ಬಾತ್‌ರೂಂನಲ್ಲಿ ಆರ್‌ಡಿಎಕ್ಸ್ ಇಟ್ಟಿರುವುದಾಗಿ De-Brahminize Dravidistan ಎಂಬ ಸಂಘಟನೆಯಿಂದ ಬೆದರಿಕೆ ಬಂದಿದೆ ಎಂದು ಹೇಳಲಾಗಿದೆ. ಇದು ಬ್ರಾಹ್ಮಣ ವಿರೋಧಿ ಸಂಘಟನ ಎಂದು

ಪಿಎಸ್ಐ ಮೇಲೆ ಕಾರು ಹತ್ತಿಸಲು ಯತ್ನಿಸಿದ ಪುಂಡರಿಂದ ಠಾಣೆಗೆ ಬಂದು ಬೆದರಿಕೆ

ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮುಂದುವರಿದಿದ್ದು, ಪೊಲೀಸರ ಮೇಲೆ ಕಾರು ಹತ್ತಿಸುವುದಕ್ಕೂ ಮುಂದಾಗಿದ್ದಾರೆ.  ರಾಜಗೋಪಲನಗರ ಠಾಣಾ ವ್ಯಾಪ್ತಿಯ ಬಾಟಲ್ ಮಾರ್ಕ್ ಬಾರ್ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ನಾಲ್ಕೈದು ಜನ ಮದ್ಯ ಸೇವಿಸುತ್ತಿದ್ದರು. ಅದೇ ವೇಳೆ ಸಬ್ ಇನ್ಸ್ಪೆಕ್ಟರ್ ಮುರಳಿ ನೈಟ್ ರೌಂಡ್ಸ್ ಮಾಡುತ್ತಿದ್ದರು.

ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಯತ್ನ: ಹೆಡ್ ಕಾನ್‌ಸ್ಟೇಬಲ್‌ ಅಮಾನತು

ಹೋಟೆಲ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟಕ್ಕೆ ಆಕ್ಷೇಪಿಸಿದ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿ ಬೆದರಿಸಿದ ಆರೋಪದಡಿ ಹೆಡ್ ಕಾನ್‌ಸ್ಟೇಬಲ್‌ವೊಬ್ಬರನ್ನು ಅಮಾನತುಗೊಳಿಸಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್‌ ಮಧುಸೂದನ್‌ ಅಮಾನತುಗೊಂಡವರು. ಭಾನುವಾರ ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿ ಕೆ.ಪಿ. ಅಗ್ರಹಾರ ಠಾಣೆ

Accident deaths- ದಕ್ಷಿಣಕನ್ನಡದಲ್ಲಿ ರಸ್ತೆ ಅಪಘಾತಕ್ಕೆ ಐವರು ಬಲಿ

ದಕ್ಷಿಣ ಕನ್ನಡದ ತಲಪಾಡಿ ಟೋಲ್ ಗೇಟ್ ಬಳಿ ನಡೆದ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಕೆಸಿ ರೋಡ್‌ನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ಮಧ್ಯೆ ಅಪಘಾತ ನಡೆದಿದ್ದು, ರಿಕ್ಷಾದಲ್ಲಿದ್ದ ಕೆಸಿ ರೋಡ್‌ನ ಐವರು ಪ್ರಾಣ ಕಳೆದುಕೊಂಡಿದ್ದಾರೆ.