Thursday, December 25, 2025
Menu

ಸೈಬರ್‌ ವಂಚನೆ: ಬೆಂಗಳೂರಿನ ಮಹಿಳಾ ಟೆಕ್ಕಿ ಕಳೆದುಕೊಂಡಿದ್ದು ಎರಡು ಕೋಟಿ ರೂ.

ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಸೈಬರ್‌ ವಂಚಕರ ಡಿಜಿಟಲ್‌ ಅರೆಸ್ಟ್‌ ಜಾಲದ ಭೀತಿಗೆ ಒಳಗಾಗಿ ಇದ್ದ ಪ್ಲಾಟ್‌, ಸೈಟ್‌ ಮಾರಿ ಎರಡು ಕೋಟಿ ರೂ. ಕಳೆದುಕೊಂಡಿದ್ದಾರೆ. ವಿಜ್ಞಾನ ನಗರದ ನ್ಯೂ ತಿಪ್ಪಸಂದ್ರದಲ್ಲಿ ಸಾಫ್ಟ್‌ವೇರ್ ಉದ್ಯೋಗಿ 10 ವರ್ಷದ ಮಗನೊಂದಿಗೆ ವಾಸವಾಗಿದ್ದು, ಕೆಲವು ತಿಂಗಳ ಹಿಂದೆ ಬ್ಲೂ ಡಾರ್ಟ್ ಕೊರಿಯರ್ ಹೆಸರಿನಲ್ಲಿ ಕರೆ ಬಂದಿತ್ತು. ಕರೆ ಮಾಡಿದವರು ತಾವು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡು, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಗೇಜ್

ಭಟ್ಕಳ ತಹಸೀಲ್ದಾರ್‌ ಕಚೇರಿಗೆ ಬಾಂಬ್‌ ಬೆದರಿಕೆ

ಭಟ್ಕಳ ತಹಸೀಲ್ದಾರ್ ಕಚೇರಿಗೆ ಮಂಗಳವಾರ ಬೆಳಗ್ಗೆ ಪ್ರಬಲ ಬಾಂಬ್‌ ಸ್ಪೋಟವಾಗಲಿದೆ ಎಂದು ಹುಸಿ ಬೆದರಿಕೆ ಕರೆ ಬಂದಿದ್ದು, ಕಚೇರಿ ಆವರಣದಲ್ಲಿ ಆತಂಕ ಸೃಷ್ಟಿಯಾಗಿತ್ತು. ‘ಗೈನಾ ರಮೇಶ್@ಔಟ್‌ಲುಕ್ ಡಾಟ್ ಕಾಂ’ ಎಂಬ ಈಮೇಲ್ ಮೂಲಕ ಸಂದೇಶ ಬಂದಿದ್ದು, ತಮಿಳರು ಹಾಗೂ ಪಾಕಿಸ್ತಾನಿಗಳ ಸೇಡು:

ರಾಜ್ಯದ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ

ವಿಜಯನಗರ, ಧಾರವಾಡ, ಶಿವಮೊಗ್ಗ ಸೇರಿದಂತೆ ಕೆಲವೆಡೆ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಕ್ರಮ ಹಣ ಗಳಿಕೆ ಹಾಗೂ ಹಲವಾರು ದೂರು ಹಿನ್ನೆಲೆ ವಿಜಯನಗರ ಆರೋಗ್ಯಾಧಿಕಾರಿ ಶಂಕರ್ ನಾಯ್ಕ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ

ಶಬರಿಮಲೆಯಿಂದ ಬಂದು ಭರ್ಜರಿ ಪಾರ್ಟಿ: ಸ್ನೇಹಿತರಿಂದಲೇ ಕೊಲೆ

ಬ್ರಹ್ಮಾವರ ತಾಲೂಕು ಕೋಟ ಪಡುಕರೆಯಲ್ಲಿ ಶಬರಿಮಲೆ ಯಾತ್ರೆ ಮುಗಿಸಿಕೊಂಡು ಬಂದ ಯುವಕ ಬಳಿಕ ಸ್ನೇಹಿತರೊಂದಿಗೆ ಸೇರಿಕೊಂಡು  ಭರ್ಜರಿ ಪಾರ್ಟಿ ನಡೆಸಿದ್ದು, ಈ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ  ಸ್ನೇಹಿತರಿಂದಲೇ  ಕೊಲೆಯಾಗಿದ್ದಾನೆ. ಆಕ್ಸಿಸ್‌ ಬ್ಯಾಂಕ್‌ ಉದ್ಯೋಗಿಯಾಗಿದ್ದ ಸಂತೋಷ್ ಪೂಜಾರಿ (30) ಕೊಲೆಯಾದ

ಕೋಟಿ ರೂ. ವಿಮೆ ಹಣ ಪಡೆಯಲು ಅಮಾಯಕನನ್ನು ತನ್ನ ಕಾರಲ್ಲಿ ಸುಟ್ಟು ಹಾಕಿದಾತ ಅರೆಸ್ಟ್‌

ಮಹಾರಾಷ್ಟ್ರದ ಲಾತೂರಿನಲ್ಲಿ ಒಂದು ಕೋಟಿ ರೂ. ವಿಮೆ ಹಣ ಪಡೆಯಲು ಲಿಫ್ಟ್‌ ಕೊಡೋದಾಗಿ ನಂಬಿಸಿ ವ್ಯಕ್ತಿಯೊಬ್ಬನನ್ನು ಕರೆದೊಯ್ದು ಕಾರಲ್ಲಿ ಸುಟ್ಟು ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚೌಹಾಣ್​ ಬಂಧಿತ ಆರೋಪಿ. ಆತ ಒಂದು ಕೋಟಿ ರೂ.

ಕೋಮು ಭಾವನೆ ಕೆರಳಿಸುವ ಪೋಸ್ಟ್‌: ಸೌದಿಯಿಂದ ಬಂದಿಳಿದ ಬಂಟ್ವಾಳದ ಯುವಕ ಅರೆಸ್ಟ್‌

ಸೌದಿ ಅರೇಬಿಯಾದಲ್ಲಿರುವ ಬಂಟ್ವಾಳದ ಯುವಕ ಮಂಗಳೂರಿನಲ್ಲಿ ಕೋಮು ಭಾವನೆ ಕೆರಳಿಸುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದ ಪ್ರಕರಣದಡಿ ಆತ ಭಾರತಕ್ಕೆ ಬಂದಿಳಿದ ತಕ್ಷಣ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಪಾಣೆಮಂಗಳೂರಿನ 27 ವರ್ಷದ ಅಬ್ದುಲ್ ಖಾದರ್ ನೇಹಾದ್ ಬಂಧಿತ ಆರೋಪಿ. ಆತ

ಅನ್ಯ ಜಾತಿ ಯುವತಿಯ ಮದುವೆಯಾದ ಮಗ: ತಾಯಿಯನ್ನು ಥಳಿಸಿದ ಪೊಲೀಸ್‌

ಮಗ ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಆತನ ತಾಯಿ ಮೇಲೆ ಧಾರವಾಡದ ಕುಂದಗೋಳ ಠಾಣೆಯ ಪೊಲೀಸರು ಮನ ಬಂದಂತೆ ಥಳಿಸಿರುವ ಆರೋಪ ಕೇಳಿ ಬಂದಿದೆ. ಧಾರವಾಡದ ಕುಂದಗೋಳ ತಾಲೂಕಿನ ಮುಳ್ಳಳಿ ಗ್ರಾಮದ ಯುವಕ ದೇವರಾಜ್ ಎದುರು ಮನೆ ಯುವತಿ ಜೊತೆ

ಸೈಬರ್ ವಂಚಕರ ನಂಬಿ 8.3 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ಉದ್ಯಮಿ

ಬೆಂಗಳೂರಿನ ಹಿರಿಯ ಉದ್ಯಮಿಯೊಬ್ಬರು ಸೈಬರ್ ವಂಚಕರ ಬಲೆಗೆ ಸಿಲುಕಿ 8.3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ರಾಜೇಂದ್ರ ನಾಯ್ಡು (71) ವಂಚನೆಗೆ ಒಳಗಾದವರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಸೈಬರ್‌ ಖದೀಮರು ಅವರಿಂದ ಹಣ ದೋಚಿಸಿದ್ದಾರೆ. ಸೈಬರ್ ವಂಚಕರ ಜಾಲ ನಾಯ್ಡು

ವೀಕೆಂಡ್‌ ಪಾರ್ಟಿಗೆ ಪೊಲೀಸರ ಭೇಟಿ: ಭಯಗೊಂಡು ಬಾಲ್ಕನಿಯಿಂದ ಹಾರಿದ ಯುವತಿ ಸ್ಥಿತಿ ಗಂಭೀರ

ಹೆಚ್‌ಎಎಲ್‌ನ ಎಇಸಿಎಸ್ ಲೇಔಟ್‌ನಲ್ಲಿರುವ ಹೊಟೇಲ್‌ವೊಂದರಲ್ಲಿ ಸ್ನೇಹಿತರೊಂದಿಗೆ ವೀಕೆಂಡ್‌ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ಧಿಡೀರ್ ಬಂದ ಕಾರಣ ಭಯಗೊಂಡ ಯುವತಿ  ಬಾಲ್ಕನಿಯಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ತಲೆ, ಮೈಕೈಗೆ ಗಂಭೀರ ಗಾಯಗಳಾಗಿದ್ದು, ಕುಂದಲಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ತಪಾಸಣೆಯೆಂದು ಮನೆಗೆ ದಾಳಿ ಮಾಡಿ ದರೋಡೆ ಮಾಡುತ್ತಿದ್ದ ನಕಲಿ ಪೊಲೀಸ್‌ ಅರೆಸ್ಟ್‌

ಖಾಸಗಿ ಕಂಪನಿ ಉದ್ಯೋಗಿಯ ಮನೆಗೆ ತಪಾಸಣೆಗೆಂದು ಬಂದಿರುವುದಾಗಿ ಹೇಳಿ ದರೋಡೆ ಮಾಡಿದ್ದ ನಕಲಿ ಪೊಲೀಸ್‌ ಮತ್ತು ಮೂವರು ಸಹಚರರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಚಟುವಟಿಕೆ ಆರೋಪ ಹೊರಿಸಿ ಮನೆಗೆ ನುಗ್ಗಿ ತಪಾಸಣೆ ಎಂದು ಹೇಳಿ ಹಣ ಸುಲಿಗೆ ಮಾಡಿದ್ದ