Menu

ಸಂಸದ ಸುಧಾಕರ್ ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ

ಸಂಸದ ಸುಧಾಕರ್ ಗೆ ಸೇರಿದ ಚಿಕ್ಕಬಳ್ಳಾಪುರದ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಕಿಟಕಿ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳ ಮೂಲದ ವಿದ್ಯಾರ್ಥಿ ಮಹಮದ್ ಶಬೀರ್ (26) ಆತ್ಮಹತ್ಯೆ ಮಾಡಿಕೊಂಡವ. ಸಂಸದ ಸುಧಾಕರ್ ಗೆ ಸೇರಿದ ಶಾಂತ ಗ್ರೂಪ್ ಆಫ್‌ ಇನ್ಸ್ಟಿಟ್ಯೂಟ್‌ನಲಿ ಈ ದುರಂತ ನಡೆದಿದೆ. ಈತ ಕಾಲೇಜಿನಲ್ಲಿ ಟೆಕ್ನಿಷಿಯನ್ ಕೋರ್ಸ್‌ ಅಧ್ಯಯನ ಮಾಡುತ್ತಿದ್ದ. ಹಾಸ್ಟೆಲ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ನಿಖರ ಕಾರಣ ತಿಳಿದು

ಸುಳ್ಳು ಕೇಸ್ ದಾಖಲಿಸಿದ್ದ ಬೆಂಗಳೂರಿನ ಮಹಿಳೆಗೆ ಹೈಕೋರ್ಟ್‌ನಿಂದ ಎರಡು ಲಕ್ಷ ರೂ. ದಂಡ

ಮಗ ಕಾಣೆಯಾಗಿದ್ದಾನೆ ಎಂದು ಸುಳ್ಳು ಕೇಸ್ ದಾಖಲಿಸಿದ್ದ ಬೆಂಗಳೂರಿನ ಮಹಿಳೆಗೆ ಹೈಕೋರ್ಟ್ ಎರಡು ಲಕ್ಷ ರೂ. ದಂಡ ವಿಧಿಸಿದೆ. ಎರಡು ವಾರದಲ್ಲಿ ದಂಡ ಕಟ್ಟದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಪೊಲೀಸರ ಮೇಲಿನ ಕೋಪಕ್ಕೆ ಬೆಂಗಳೂರಿನ ಇಂದಿರಾನಗರ ನಿವಾಸಿ

ಆನೇಕಲ್‌ ತೈಲ ಕಾರ್ಖಾನೆಯೊಂದರಲ್ಲಿ ಬೆಂಕಿ ದುರಂತ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿರುವ ವಿಶಾಲ್ ಟ್ರೈಬೊಟೆಕ್ ತೈಲ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕಾರ್ಖಾನೆಯ ಒಳಗಿನ ಆಯಿಲ್ ಬ್ಯಾರೆಲ್‌ಗಳು ಧಗಧಗನೆ ಉರಿದಿವೆ. ಯಾವುದೇ ಪ್ರಾಣಹಾನಿ ಆಗಿಲ್ಲ, ಸ್ಥಳಕ್ಕೆ ತಕ್ಷಣವೇ ಧಾವಿಸಿದ

ಅಪ್ರಾಪ್ತ ವಯಸ್ಕ ಬಾಲಕಿಯ ರೇಪ್‌: ನವಜಾತ ಶಿಶು ಸಾವು

ಉತ್ತರ ಪ್ರದೇಶದ ಬರೇಲಿಯಲ್ಲಿ 11 ವರ್ಷದ ಬಾಲಕಿ ಮೇಲೆ 2 ಮಕ್ಕಳ ತಂದೆಯಾಗಿರುವ ವ್ಯಕ್ತಿಯೊಬ್ಬ ನಿರಂತರ ಅತ್ಯಾಚಾರವೆಸಗಿದ್ದು, ಆಕೆ ಗರ್ಭಿಣಿಯಾಗಿ ಹೆರಿಗೆಯಾದ ಅರ್ಧ ಗಂಟೆಯಲ್ಲಿ ಮಗು ಮೃತಪಟ್ಟಿದೆ. ಆರೋಪಿ ರಶೀದ್ (31) ಬಾಲಕಿಯನ್ನು ಬೆದರಿಸಿ ನಿರಂತರ ಅತ್ಯಾಚಾರ ಎಸಗಿದ್ದು, ಏಳು ತಿಂಗಳ

ಬಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ನಕಲಿ ನರ್ಸ್‌: ಪ್ರತಿಕ್ರಿಯಿಸಲು ಆಸ್ಪತ್ರೆ ನಕಾರ

ಬೆಳಗಾವಿ ಬಿಮ್ಸ್‌ ಆಸ್ಪತ್ರೆಯಲ್ಲಿ ನಕಲಿ ನರ್ಸ್ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಆರೋಪ ಕೇಳಿ ಬಂದಿದೆ. ನರ್ಸಿಂಗ್ ವಿದ್ಯಾರ್ಥಿನಿ ಎಂದು ಹೇಳಿ ಕಳೆದ ಮೂರು ತಿಂಗಳಿನಿಂದ ರೋಗಿಗಳಿಗೆ ಕಾರವಾರ ಮೂಲದ ಸನಾ ಶೇಖ್ ಎಂಬಾಕೆ ಚಿಕಿತ್ಸೆ ನೀಡಿರುವುದು ಅಚ್ಚರಿ ಹುಟ್ಟಿಸಿದೆ. ಬೆಳಗಾವಿ ಕುಮಾರಸ್ವಾಮಿ

ಪ್ರೀತಿಸಿ ಮದುವೆಯಾದ ಗಂಡ, ಮಕ್ಕಳನ್ನು ಬಿಟ್ಟು ಪ್ರಿಯಕರನೇ ಬೇಕೆಂದ ಮಹಿಳೆ

ಆನೇಕಲ್ ಬಸವನಪುರ ಗ್ರಾಮದಲ್ಲಿ ಲೀಲಾವತಿ ಎಂಬಾಕೆ ಪ್ರೀತಿಸಿ ಮದುವೆಯಾದ ಗಂಡ, ಮಕ್ಕಳನ್ನು ಬಿಟ್ಟು ಪ್ರಿಯಕರನೇ ಬೇಕೆಂದು ಪಟ್ಟು ಹಿಡಿದಿದ್ದು, ಮನವೊಲಿಸಲು ಪೊಲೀಸರು ಕೂಡ ವಿಫಲರಾಗಿದ್ದಾರೆ. ಮೂರು ಮಕ್ಕಳು ನಮ್ಮನ್ನು ಬಿಟ್ಟು ಹೋಗಬೇಡ ಎಂದು ಅಳುತ್ತಿದ್ದರೆ, ಮೋಸ ಮಾಡಬೇಡ ಎಂಬುದು ಗಂಡನ ಅಳಲು,

ಅನಿಲ್‌ ಅಂಬಾನಿಯ ಸಾಲ ಖಾತೆಗಳನ್ನು “ವಂಚನೆ” ವರ್ಗೀಕರಣಗೊಳಿಸಿದ ಬಿಒಬಿ

ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಮಾಜಿ ನಿರ್ದೇಶಕ ಅನಿಲ್ ಧೀರಜ್‌ಲಾಲ್ ಅಂಬಾನಿಯವರ ಸಾಲ ಖಾತೆಗಳನ್ನು ಬ್ಯಾಂಕ್ ಆಫ್ ಬರೋಡಾ ‘ವಂಚನೆ’ ಎಂದು ವರ್ಗೀಕರಿಸಿದೆ. ಇದರಿಂದ ಸಂಸ್ಥೆಯ ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸುವುದರೊಂದಿಗೆ ಅನಿಲ್ ಅಂಬಾನಿ ಕಾನೂನು ಸವಾಲುಗಳನ್ನು ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಧರ್ಮಸ್ಥಳ ಪ್ರಕರಣ: ಕೇರಳ ಯೂಟ್ಯೂಬರ್ ಮನಾಫ್​​ಗೂ ಎಸ್ಐಟಿ ನೋಟಿಸ್

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಯೂಟ್ಯೂಬರ್ ಮನಾಫ್​​ಗೂ ಎಸ್ಐಟಿ ನೋಟಿಸ್​ ನೀಡಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರ ಆರೋಪದ ಮೇಲೆ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್​​ನನ್ನು ಎಸ್ಐಟಿ ಈಗಾಗಲೇ ವಿಚಾರಣೆ ನಡೆಸಿದೆ. ಯೂಟ್ಯೂಬರ್ ಮನಾಫ್​, ಪ್ರಕರಣಕ್ಕೆ

ಚಾಮರಾಜನಗರದಲ್ಲಿ ಗ್ರಾಹಕಿಯಂತೆ ಹೋಗಿ ಚಿನ್ನ ಎಗರಿಸುತ್ತಿದ್ದ ಮಹಿಳೆ ಅರೆಸ್ಟ್‌

ಚಾಮರಾಜನಗರದಲ್ಲಿ ಚಿನ್ನದಂಗಡಿಗೆ ಗ್ರಾಹಕಿಯಂತೆ ಹೋಗಿ ಚಿನ್ನದ ಸರ ಎಗರಿಸುತ್ತಿದ್ದ ಮಹಿಳೆಯನ್ನು ಚಾಮರಾಜನಗರ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಲೀಲಾ ಬಂಧಿತ ಮಹಿಳೆ, ಆಭರಣ ಖರೀದಿಸುವ ನೆಪದಲ್ಲಿ ಚಾಮರಾಜನಗರದ ಜ್ಯುವೆಲರಿ ಶಾಪ್‌ಗೆ ಹೋಗಿದ್ದ ಆಕೆ ಸಿಬ್ಬಂದಿಯನ್ನು ಯಾಮಾರಿಸಿ 9 ಗ್ರಾಂ ಚಿನ್ನದ ಸರ ಹಾಗೂ

ವೀರೇಂದ್ರ ಪಪ್ಪಿ ಮತ್ತೆ ನಾಲ್ಕು ದಿನ ಇಡಿ ವಶಕ್ಕೆ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಮತ್ತೆ ನಾಲ್ಕು ದಿನ ಇಡಿ ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಅಕ್ರಮ ಬೆಟ್ಟಿಂಗ್‌ ಆರೋಪದಡಿ ವೀರೇಂದ್ರ ಪಪ್ಪಿ ಇಡಿ ವಶದಲ್ಲಿದ್ದರು, ಆದರೆ ಗುರುವಾರಕ್ಕೆ