ಅಪರಾಧ
ಕಳಸದಲ್ಲಿ ಜೀಪ್ ಸಮೇತ ನದಿಗೆ ಬಿದ್ದ ಯುವಕ: ಶವ ಸಿಗುವ ಮೊದಲೇ ತಾಯಿ ಆತ್ಮಹತ್ಯೆ
ಚಿಕ್ಕಮಗಳೂರಿನ ಕಳಸದಲ್ಲಿ ಗುರುವಾರ 23 ವರ್ಷದ ಯುವಕ ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಮೃತಪಟ್ಟಿದ್ದು, ಇದರಿಂದ ಮನನೊಂದ ಆತನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ನದಿಗೆ ಬಿದ್ದು ಹೋಗಿರುವುದರಿಂದ ನೊಂದ ತಾಯಿ ರವಿಕಲಾ ಕಳಸ ತಾಲೂಕಿನ ಕೊಳಮಾಗೆ ಬಳಿ ಮನೆ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ಜೀಪ್ ಸಮೇತ ನದಿಗೆ ಬಿದ್ದಿದ್ದು, ಜೀಪ್ ಇನ್ನೂ ಮೇಲಕ್ಕೆ ಎತ್ತಿಲ್ಲ, ಆತನ ಮೃತದೇಹವೂ ಸಿಕ್ಕಿಲ್ಲ. ಅದಕ್ಕೂ ಮೊದಲೇ ತಾಯಿ
ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದ ಸುಪ್ರೀಂ
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಮಂದಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಹೈಕೋರ್ಟ್ ನೀಡಿರುವ ಜಾಮೀನು ರದ್ದಾಗುತ್ತಾ ಅಥವಾ ಮುಂದುವರಿಯುತ್ತಾ ಎಂಬುದು ಮುಂದಿನ ವಿಚಾರಣೆಯಲ್ಲಿ ತೀರ್ಮಾನವಾಗಲಿದೆ. ಲಿಖಿತ ವಾದ ಸಲ್ಲಿಸಿ ಎಂದು
3,000 ಕೋಟಿ ರೂ. ಸಾಲ ವಂಚನೆ: ರಿಲಯನ್ಸ್ ಗ್ರೂಪ್ ವಿರುದ್ಧ ಇಡಿ ದಾಳಿ
3,000 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಉದ್ಯಮಿ ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದೆ. 35ಕ್ಕೂ ಹೆಚ್ಚು ಸ್ಥಳಗಳು, ರಿಲಯನ್ಸ್ ಗ್ರೂಪ್ನ 50 ಕಂಪನಿಗಳ ಮೇಲೆ
ಸೈಬರ್ ಕ್ರೈಂ ಸಂತ್ರಸ್ತರಿಗೆ ನೀಡಬೇಕಿದ್ದ ಹಣ ವಂಚಿಸಿ ಮಜಾ ಉಡಾಯಿಸಿದ ಇನ್ಸ್ಪೆಕ್ಟರ್ಗಳು
ಸೈಬರ್ ಕ್ರೈಂ ಸಂತ್ರಸ್ತರಿಗೆ ವಾಪಸ್ ಕೊಡಬೇಕಾಗಿದ್ದ 2 ಕೋಟಿ ರೂಪಾಯಿಗಳನ್ನು ನಕಲಿ ದಾಖಲೆ ಬಳಸಿ ಪೊಲೀಸ್ ಇನ್ಸ್ಪೆಕ್ಟರ್ಗಳು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೊಲೀಸ್ ಇನ್ಸ್ಪೆಕ್ಟರ್ಗಳು ಹಣವನ್ನು ಲೂಟಿ ಮಾಡಿ ವೈದ್ಯಕೀಯ ರಜೆ ಪಡೆದು ಲವರ್ಸ್ ಜೊತೆ ಗೋವಾ, ಮನಾಲಿ
ಬೆಂಗಳೂರಿನಲ್ಲಿ ಗರ್ಭಿಣಿ ಸಾವು: ಮನೆಯಲ್ಲಿ ಶವದೊಂದಿಗೆ ಆರಾಮವಾಗಿ ಎರಡು ದಿನ ಕಳೆದ ಪತಿ
ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಥಣಿಸಂದ್ರದಲ್ಲಿ ಗರ್ಭಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶ ಮೂಲದ ಸುಮನಾ(22) ಮೃತ ಗರ್ಭಿಣಿ. ಪತಿ ಶಿವಂ ಎಂಬಾತನ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೂರು ದಿನಗಳ ಹಿಂದೆ ಮನೆಯಲ್ಲಿಯೇ ಮಹಿಳೆ ಮೃತಪಟ್ಟಿದ್ದರು. ವಾಸನೆ ಬಂದು ಸ್ಥಳೀಯರು ಗಮನಿಸಿದಾಗ
ಗೋವಾದಲ್ಲಿ ಕನ್ನಡಿಗರ ಮೇಲೆ ಗೂಂಡಾಗಿರಿ: ರಕ್ಷಣೆಗಾಗಿ ಸಿಎಂಗೆ ಮನವಿ
ಗೋವಾದಲ್ಲಿ ಕನ್ನಡಿಗ ಕಾರ್ಮಿಕ ಮೇಲೆ ಹಲ್ಲೆ ದೌರ್ಜನ್ಯ ನಡೆಯುತ್ತಿದ್ದು, ಅಲ್ಲಿನ ಕನ್ನಡಿಗರು ರಕ್ಷಣೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಕನ್ನಡಿಗ ಲಾರಿ ಡ್ರೈವರ್ ಮೇಲೆ ಅಲ್ಲಿನ ಸ್ಥಳೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆ ಕಲಕೇರಿ ಗ್ರಾಮದ ನಿವಾಸಿ
ಗದಗ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್: ದೂರು ನೀಡಿದ್ದ ಗಂಡನ ವಿರುದ್ಧವೇ ದೂರು!
ಗದಗ್: ಮದುವೆ ನೆಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಿದ್ದಾರೆ ಎಂಬ ಭಾರೀ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಬೆಟಗೇರಿಯ ಸೆಟ್ಮೆಂಟ್ ಪ್ರದೇಶದ ಯುವಕ ವಿಶಾಲ ಕುಮಾರ್ನನ್ನು
ಕೆಜಿಎಫ್ ಬಾಬು ನಿವಾಸಕ್ಕೆ ಆರ್ಟಿಒ ದಾಳಿ: ದುಬಾರಿ ಕಾರುಗಳ ದಾಖಲೆ ಪರಿಶೀಲನೆ
ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಷರೀಫ್ ನಿವಾಸಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅವರ ಬಳಿ ಇರುವ ಐಷಾರಾಮಿ ಕಾರುಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಕೆಜಿಎಫ್ ಬಾಬು ಬಳಿ ರೋಲ್ಸ್ ರಾಯ್ಸ್, ವೆಲ್ಪೇರ್ ಸೇರಿದಂತೆ
Lokayukta raid- ಅಕ್ರಮ ಗಳಿಕೆ: ರಾಜ್ಯದ ನಾನಾ ಕಡೆ ಲೋಕಾಯುಕ್ತ ದಾಳಿ
ಬೆಂಗಳೂರು, ಮೈಸೂರು, ಕೊಪ್ಪಳ ಮತ್ತು ಬಳ್ಳಾರಿಯ ಸರ್ಕಾರಿ ಅಧಿಕಾರಿಗಳಿಗಳ ಮನೆಗಲು ಸೇರಿದಂತೆ ರಾಜ್ಯದ ನಾನಾ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯಕ್ಕೂ ಮೀರಿ ಗಳಿಕೆ ಆರೋಪದಡಿ ದಾಳಿ ನಡೆಸಿರುವ ಲೋಕಾಯುಕ್ತ ದಾಳಿ ಸ್ಥಳಗಳಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಐಎಎಸ್
Dharmasthala case- ಧರ್ಮಸ್ಥಳ ಪ್ರಕರಣ: ಎಸ್ಐಟಿಗೆ ಹೆಚ್ಚುವರಿ 20 ಅಧಿಕಾರಿಗಳ ನೇಮಕ
ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ತಂಡಕ್ಕೆ ಹೆಚ್ಚುವರಿ 20 ಅಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಕರ್ನಾಟಕ ರಾಜ್ಯ ಡಿಜಿಪಿ ಆದೇಶ ಹೊರಡಿಸಿದ್ದು, ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣದ ತನಿಖೆಗಾಗಿ ರಚಿಸಿದ್ದ