ಅಪರಾಧ
ಸಿಎಂ ಡಿಸಿಎಂ ನಿವಾಸಗಳಿಗೆ ಬಾಂಬ್ ಬೆದರಿಕೆ ಸಂದೇಶ: ತನಿಖೆಗೆ ಎಸ್‌ಐಟಿ ರಚನೆ
ಸಿಎಂ ಮತ್ತು ಡಿಸಿಎಂ ಮನೆಗಳಲ್ಲಿ 4 ಕೆಜಿಯಷ್ಟು ಆರ್‌ಡಿಎಕ್ಸ್ ಮತ್ತು ಐಇಡಿ ಸ್ಫೋಟಕ ಇರಿಸಲಾಗಿದೆ. ಅವುಗಳನ್ನು ದೂರದಿಂದಲೇ ಸ್ಫೋಟಿಸಲಾಗುತ್ತದೆ ಎಂದು ಕಳೆದ ಶನಿವಾರ ಇ-ಮೇಲ್ ಮೂಲಕ ಹುಸಿ ಬೆದರಿಕೆ ಬಂದಿತ್ತು. ಈ ಹಿನ್ನೆಲೆ ಪೊಲೀಸ್ ಇಲಾಖೆ ಇಂಥ ಪ್ರಕರಣಗಳನ್ನು ಭೇದಿಸಲು ಎಸ್‌ಐಟಿ ರಚಿಸಿದೆ. ಕಳೆದ ಶನಿವಾರ ಬೆಳಗ್ಗೆ 4:20ಕ್ಕೆ ಆರ್ನಾ ಅಶ್ವಿನ್ ಶೇಖರ್ ಎಂಬ ಮೇಲ್ ಐಡಿಯಿಂದ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಇಮೇಲ್ ಐಡಿ ಮತ್ತು ಡಿಸಿಎಂ ಅವರ
ಸಿಎಂ, ಡಿಸಿಎಂ ಮನೆಗೆ ಬಾಂಬ್ ಬೆದರಿಕೆ: ಎಸ್ ಐಟಿ ತನಿಖೆಗೆ ಆದೇಶ
ಸಿಎಂ, ಡಿಸಿಎಂ ಮನೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಸ್ ಐಟಿ ತನಿಖೆಗೆ ಆದೇಶಿಸಿದೆ. ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಕೆಲ ಶಾಲೆಗಳು, ಸರ್ಕಾರಿ ಕಚೇರಿ ಹಾಗೂ ದೇವಸ್ಥಾನಗಳಿಗೆ ಬಾಂಬ್ ಬೆದರಿಕೆ ಬರುತ್ತಿವೆ. ಬೆಂಗಳೂರಿನಲ್ಲೇ ಇಂತಹ 34
ಸೈಟ್ ಕೊಡಿಸುವುದಾಗಿ ನಂಬಿಸಿ ಕಿರುತೆರೆ ಕಲಾವಿದರಿಗೆ ವಂಚನೆ: ಐವರ ವಿರುದ್ಧ ಎಫ್‌ಐಆರ್
ಬೆಂಗಳೂರಿನಲ್ಲಿ ಕಿರುತೆರೆ ಕಲಾವಿದರಿಗೆ ಸೈಟ್ ಕೊಡಿಸುವುದಾಗ ನಂಬಿಸಿ 1.6 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆಂದು ಬಿಲ್ಡರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಭಗೀರಥ , ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ, ಮತ್ತು ಉಮಾಕಾಂತ್
ಬೆಂಗಳೂರಿನಲ್ಲಿ ಪಿಯು ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ
ಬೆಂಗಳೂರಿನ ಕ್ಲಾರೆನ್ಸ್ ಪ್ರೌಢಶಾಲೆಯ 12ನೇ ತರಗತಿಯ ವಿದ್ಯಾರ್ಥಿ, ರಾಜ್ಯ ಮಟ್ಟದಲ್ಲಿ ಡೈವಿಂಗ್ ಚಾಂಪಿಯನ್ ಶಾಲೆಯ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ರಿಚರ್ಡ್ಸ್ ಟೌನ್‌ನ ಪಾಟರಿ ರಸ್ತೆಯಲ್ಲಿರುವ ಶಾಲೆಗೆ ವಿದ್ಯಾರ್ಥಿಯನ್ನು ಬಿಟ್ಟು ತಂದೆ ಕೆಲಸಕ್ಕೆ ಹೋದ 10 ನಿಮಿಷಗಳಲ್ಲಿ
ಆರೆಸ್ಸೆಸ್ ಕಾರ್ಯಕರ್ತರಿಂದ ಲೈಂಗಿಕ ಕಿರುಕುಳ: ಕೇರಳದ ಟೆಕ್ಕಿ ಸುಸೈಡ್
ಕೇರಳದ ತಿರುವನಂತಪುರದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ನಿರಂತರ ಲೈಂಗಿಕ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಡ್ಜ್ ವೊಂದರಲ್ಲಿ ಟೆಕ್ಕಿ ಆನಂದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ ಸ್ಟಾಗ್ರಾಂ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಆರೆಸ್ಸೆಸ್ ಸದಸ್ಯರು ತನಗೆ ನಿರಂತರ
ಮಾವನ ಕೊಂದು ಉಪ್ಪಿನ ಚಿಲದಲ್ಲಿ ಮುಚ್ಚಿಟ್ಟ ಅಳಿಯ!
ಯಡ್ರಾಮಿ: ಮಾವನಿಗೆ ಹಣ ನೀಡುವದಾಗಿ ನಂಬಿಸಿ ಮಾವನನ್ನು ಮನೆಗೆ ಕರೆಸಿ ಕೊಲೆ ಮಾಡಿ ಉಪ್ಪಿನ ಚಿಲದಲ್ಲಿ ಮುಚ್ಚಿಟ್ಟ ಘಟನೆ ಯಡ್ರಾಮಿ ಠಾಣೆಯ ಕಣಮೇಶ್ವರ ಗ್ರಾಮದಲ್ಲಿ ನಡೆದಿದೆ. ಕೊಟ್ಟ ಸಾಲ ವಾಪಸ್ ಕೊಡು ಎಂದ ಮಾವನನ್ನೇ ಕೊಲೆ ಮಾಡಿ ಮನೆಯ ಅಡುಗೆ ಕೋಣೆಯಲ್ಲಿರುವ
ಚಿಕ್ಕಬಳ್ಳಾಪುರದಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಯುವತಿಯ ಗ್ಯಾಂಗ್ ರೇಪ್
ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಡ್ರಾಪ್ ಕೊಡುವುದಾಗಿ ಸ್ಕೂಟರ್ ಹತ್ತಿಸಿಕೊಂಡ ವ್ಯಕ್ತಿ ಮತ್ತು ಆತನ ಸ್ನೇಹಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಪೊಲೀಸರು ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದಾರೆ. ಆರೋಪಿಗಳು ಅದೇ ಊರಿನ ಸಿಕಂದರ್ ಬಾಬಾ ಹಾಗೂ ಜನಾರ್ಧನಾಚಾರಿ ಎಂದು ಗುರುತಿಸಲಾಗಿದ್ದು, ಸಿಸಿಟಿವಿ ದೃಶ್ಯ
ತಮಿಳಗ ವೆಟ್ರಿ ಕಳಗಂ ಸಮಾವೇಶದಲ್ಲಿ ಕಾಲ್ತುಳಿತ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ
ಸೆಪ್ಟೆಂಬರ್ 27ರಂದು ನಟ ವಿಜಯ್ ಅವರ ಹೊಸ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ ಸಮಾವೇಶ ತಮಿಳುನಾಡಿನ ಕರೂರಿನಲ್ಲಿ ನಡೆದಾಗ ಸಂಭವಿಸಿದ ಭೀಕರ ಕಾಲ್ತುಳಿತ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು
ಬೆಂಗಳೂರು ಚುನಾವಣಾ ಅಕ್ರಮ: ಎಸ್‌ಐಟಿ ತನಿಖೆ ಮನವಿ ನಿರಾಕರಿಸಿದ ಸುಪ್ರೀಂ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವ ಬಗ್ಗೆ ಎಸ್‌ಐಟಿ ತನಿಖೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳು ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿರುವುದಾಗಿ ಆರೋಪಿಸಿವೆ. ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ
ವೀರೇಂದ್ರ ಪಪ್ಪಿ ಬಿಡುಗಡೆ ಕೋರಿ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್
ಆನ್‌ಲೈನ್ ಬೆಟ್ಟಿಂಗ್ ದಂಧೆ ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇಡಿ ಬಂಧನದಲ್ಲಿರುವ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಬಿಡುಗಡೆಗೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಪಪ್ಪಿ ಬಂಧನ ಕಾನೂನುಬಾಹಿರವೆಂದು ಬಿಡುಗಡೆ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಇಡಿ ಪರ ಎಎಸ್‌ಜಿ




