Saturday, December 27, 2025
Menu

ಕೆಆರ್‌ಎಸ್‌ನಲ್ಲಿ ರಿವರ್ಸ್‌ ತೆಗೆಯುತ್ತಿದ್ದ ಬಸ್‌ಗೆ ಊಟ ಮಾಡುತ್ತಿದ್ದ ಮಹಿಳೆ ಬಲಿ

ಮಂಡ್ಯದ ಕೆಆರ್‌ಎಸ್ ನಲ್ಲಿ ಬಸ್ ರಿವರ್ಸ್ ತೆಗೆಯುವಾಗ ನಡೆದ ಅವಘಡದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಆರ್‌ಎಸ್‌ಗೆ ಪ್ರವಾಸ ಬಂದಿದ್ದ ಕೇರಳದ ಮಹಿಳೆ ಕೌಸಲ್ಯಾ ಪಾರ್ಕಿಂಗ್‌ ಬಳಿ ಊಟ ಮಾಡುತ್ತ ಕುಳಿತಿದ್ದಾಗ ಈ ದುರಂತ ಸಂಭವಿಸಿದ್ದು, ಮತ್ತೊಬ್ಬರು ಕೇರಳದ ಮಹಿಳೆ ಗಾಯಗೊಂಡಿದ್ದಾರೆ. ಕೆಆರ್‌ಎಸ್ ವೀಕ್ಷಣೆ ಬಳಿಕ ಪಾರ್ಕಿಂಗ್ ಬಳಿ ಕೌಸಲ್ಯಾ ಹಾಗೂ ನಾರಾಯಣಿ ಊಟ ಮಾಡುತ್ತಿದ್ದರು. ಬಸ್‌ ಹಿಂದೆ ಇದ್ದ ಈ ಮಹಿಳೆಯರನ್ನು ಗಮನಿಸದೆ ಚಾಲಕ ಬಸ್ ರಿವರ್ಸ್ ತೆಗೆದುಕೊಂಡಾಗ ಈ

ಮದುವೆ ಭರವಸೆಯಿತ್ತು ರೇಪ್‌ ಮಾಡಿ ವಂಚಿಸಿದ ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸಸ್ಪೆಂಡ್‌

ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ವಿರುದ್ಧ ಮದುವೆಯ ಭರವಸೆಯಿತ್ತು ರೇಪ್‌ ಮಾಡಿ ವಂಚಿಸಿರುವುದಾಗಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇನ್ಸ್‌ಪೆಕ್ಟರ್‌ ಸುನಿಲ್ ಮತ್ತು ಅವರೊಂದಿಗೆ ಗುರುತಿಸಿಕೊಂಡ ಮತ್ತೊಬ್ಬ ಎಎಸ್‌ಐಯನ್ನು ತಕ್ಷಣವೇ ಅಮಾನತುಗೊಳಿಸ

ಮಾಲೂರು ಬಾರ್‌ನಲ್ಲಿ ಮಿಕ್ಸ್‌ಚರ್ ಕೊಡಲಿಲ್ಲವೆಂದು ಕ್ಯಾಷಿಯರ್‌ನ ಕೊಲೆ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ಬಾರ್‌ನಲ್ಲಿ ರಾತ್ರಿ ಮದ್ಯ ಸೇವನೆಗೆ ಹೋದ ವ್ಯಕ್ತಿ ಸೈಡ್ಸ್ ನೀಡುವುದಕ್ಕೆ ಬಾರ್ ಕ್ಯಾಷಿಯರ್ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹೋದ ಕ್ಯಾಷಿಯರ್‌ ಮನೆಯೊಳಗೆ ಹೋಗಬೇಕು ಎನ್ನುವಷ್ಟರಲ್ಲಿ ಆತನ ಹೆಂಡತಿ-ಮಕ್ಕಳ ಕಣ್ಣೆದುರೇ ಚಾಕು

ಮೈಸೂರಿನಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಿದ ಸೋದರರು ಜಲ ಸಮಾಧಿ

ಮೈಸೂರಿನ ವರುಣಾ ನಾಲೆ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಸಹೋದರರು ಬಾಲಕನನ್ನು ಬದುಕಿಸಿ ತಾವೇ ಜಲಸಮಾಧಿ ಆಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ಮುಳುಗುತ್ತಿರುವುದನ್ನು ನೋಡಿದ ನಾಲೆಯ ಮೇಲ್ಗಡೆ ನಡೆದುಕೊಂಡು ಬರುತ್ತಿದ್ದ ಸಹೋದರರು

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಹಿಳೆ ಬಿಎಂಟಿಸಿ ಬಸ್‌ಗೆ ಬಲಿ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಹಿಳೆ ಬೆಂಗಳೂರಿನ ವಿಜಯನಗರ ಸಮೀಪದ ಹಂಪಿನಗರದಲ್ಲಿ ಬಿಎಂಟಿಸಿ ಬಸ್‌ಗೆ ಬಲಿಯಾಗಿರುವ ಘಟನೆ ನಡೆದಿದೆ. ಯಲಹಂಕದಿಂದ ಹಂಪಿನಗರದತ್ತ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಹಂಪಿನಗರ ಬಸ್ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದ ವೇಳೆ ಡಿಕ್ಕಿ ಹೊಡೆದು 58 ವರ್ಷದ ಮಹಿಳೆ ಮಾಲಾ ಅಸು ನೀಗಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಆರೋಪಿ ಪ್ರದೋಶ್‌ಗೆ ಮಧ್ಯಂತರ ಜಾಮೀನು

ರೇಣುಕಾ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್​ಗೆ 20 ದಿನಗಳ ಮಧ್ಯಂತರ ಜಾಮೀನು ಮಂಜೂರಾಗಿದೆ. ಆರೋಪಿ ಪ್ರದೋಶ್ ತಂದೆ ಸುಬ್ಬಾರಾವ್ ಇತ್ತೀಚೆಗೆ ನಿಧನರಾಗಿದ್ದು, ಅವರ ಉತ್ತರಾದಿ ಕ್ರಿಯೆಗಳಿಗಾಗಿ ಜಾಮೀನು ನೀಡಬೇಕೆಂದು ಬೆಂಗಳೂರಿನ 57 ಸಿಸಿಹೆಚ್ ಕೋರ್ಟ್​​ಗೆ ಅರ್ಜಿ ಹಾಕಲಾಗಿತ್ತು. ಪರಿಶೀಲಿಸಿದ

ಮೂಡಿಗೆರೆ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಯುವತಿ ಸಾವು

ಬೆಂಗಳೂರಿನಿಂದ ಸ್ನೇಹಿತೆಯ ಮದುವೆ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ರಂಜಿತಾ (27) ಮೃತ ಯುವತಿ, ಈಕೆ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿ. ಶುಕ್ರವಾರ ಈ

ಬಾಗಲಕೋಟೆ ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಬಾಗಲಕೋಟೆಯ ನವನಗರದ 49ನೇ ಸೆಕ್ಟರ್‌ನಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಬದಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಕೆಲವು ದಿನಗಳಿಂದ ನೆಲಕ್ಕೆ ಬಿದ್ದುಕೊಂಡಿದ್ದ ವಿದ್ಯುತ್ ತಂತಿ ತುಳಿದು ಈ ಸಾವು ಸಂಭವಿಸಿದೆ.

ಬೆಂಗಳೂರಿನಲ್ಲಿ ಮಹಿಳೆಯ ಕೊಂದು ಶವ ಆಟೋದಲ್ಲಿಟ್ಟು ಪ್ರಿಯಕರ ಪರಾರಿ

ಬೆಂಗಳೂರಿನ ತಿಲಕ್​ನಗರ ಮುಖ್ಯರಸ್ತೆಯಲ್ಲಿ ನಾಲ್ಕು ಮಕ್ಕಳ ತಾಯಿಯನ್ನು ಹತ್ಯೆಗೈದು ಆಟೋದಲ್ಲಿ ಶವವಿಟ್ಟು ಪ್ರಿಯಕರ ಪರಾರಿ ಆಗಿದ್ದಾನೆ. ಸಲ್ಮಾ(35) ಹತ್ಯೆಯಾದ ಮಹಿಳೆ, ಪ್ರಿಯಕರ ಸುಬ್ಬುಮಣಿ ಕೊಲೆ ಆರೋಪಿ. ಆಟೋದಲ್ಲಿ ಮೃತದೇಹ ಇರುವುದನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೇಸ್ ದಾಖಲಿಸಿಕೊಂಡು ತಿಲಕ್​ನಗರ

ವೈದ್ಯೆ ಆತ್ಮಹತ್ಯೆ ಪ್ರಕರಣ: ಅತ್ಯಾಚಾರಿ ಆರೋಪಿ ಪಿಎಸ್‌ಐ ಪೊಲೀಸ್‌ಗೆ ಶರಣು

ಮಹಾರಾಷ್ಟ್ರದ ಸತಾರದಲ್ಲಿ ನಡೆದಿದ್ದ ವೈದ್ಯೆಯ ಆತ್ಮಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದ್ನೆ ಫಾಲ್ಟನ್ ಗ್ರಾಮೀಣ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಮತ್ತೊಬ್ಬ ಆರೋಪಿಯಾದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್‌ನನ್ನು ಪುಣೆಯಲ್ಲಿ ಬಂಧಿಸಲಾಗಿತ್ತು. ವೈದ್ಯೆಗೆ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಬದಲಾಯಿಸುವಂತೆ ರಾಜಕಾರಣಿಗಳು