Thursday, February 12, 2026
Menu

ಬಳ್ಳಾರಿಯಲ್ಲಿ ಕಿರು ಸೇತುವೆಗೆ ಕಾರು ಡಿಕ್ಕಿ: ದೇವಸ್ಥಾನದಿಂದ ವಾಪಸಾಗುತ್ತಿದ್ದ ಮೂವರ ಸಾವು

ಬಳ್ಳಾರಿಯಲ್ಲಿ ರಸ್ತೆ ಬದಿಯ ಕಿರು ಸೇತುವೆಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಒಂದೇ ಕುಟುಂಬದ ಐವರು ಕಾರಿನಲ್ಲಿ ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್‌ ಬರುವಾಗ ಈ ಅಪಘಾತ ನಡೆದಿದೆ. ಬಳ್ಳಾರಿ ಮತ್ತು ಸಿರುಗುಪ್ಪ ರಸ್ತೆ ಮಧ್ಯೆ ದೇವಿ ನಗರ ಕ್ಯಾಂಪ್ ಹತ್ತಿರ ಅಪಘಾತ ಸಂಭವಿಸಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದ ಮತ್ತು ಮಂಜು ಕವಿದ ವಾತಾವರಣದಲ್ಲಿ ರಸ್ತೆ

ಕೋರ್ಟ್‌ನಲ್ಲಿ ಡಿವೋರ್ಸ್‌ ಕೇಸ್‌: ಬೆಂಗಳೂರಿನಲ್ಲಿ ಪತ್ನಿಗೆ ಗುಂಡಿಕ್ಕಿ ಕೊಂದ ಪತಿ

ಬೆಂಗಳೂರಿನ ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಬಳಿ ಗಂಡನೊಬ್ಬ ಹೆಂಡತಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಗುಂಡೇಟು ತಗುಲಿದ ಪತ್ನಿ ಭುವನೇಶ್ವರಿಯನ್ನು ಪತಿ ಬಾಲಮುರುಘನ್ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಅಸು ನೀಗಿದ್ದಾರೆ. ಪತಿ ಪತ್ನಿ ನಡುವೆ ಕೋರ್ಟ್‌ನಲ್ಲಿ ಡಿವೋರ್ಸ್‌ ಕೇಸ್ ನಡೆಯುತ್ತಿತ್ತು,

ವಾರಪೂರ್ತಿ ಪ್ರೊಫೆಸರ್ ಕೆಲಸ, ವೀಕೆಂಡ್ ಮದುವೆ ಮನೆಗಳಲ್ಲಿ ಕಳ್ಳತನ!

ಬೆಂಗಳೂರು: ವಾರಪೂರ್ತಿ ಫ್ರೊಫೆಸರ್ ಆಗಿ ಪಾಠ ಮಾಡುವ ಮಹಿಳೆ ವೀಕೆಂಡ್ ಗಳಲ್ಲಿ ಮದುವೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಕಿ ಕಳ್ಳಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ಕೆಆರ್ ಪುರಂನಲ್ಲಿ ನಿವಾಸಿ ಆಗಿರುವ ಶಿವಮೊಗ್ಗ ಮೂಲದ ರೇವತಿ ಬಂಧಿತ ಆರೋಪಿಯಾಗಿದ್ದು, ಈಕೆ ಖಾಸಗಿ ಕಾಲೇಜಿನಲ್ಲಿ

ಗರ್ಭಿಣಿ ಆತ್ಮಹತ್ಯೆ, ದಲಿತೆಯೆಂದು ಗಂಡನ ಮನೆಯವರಿಂದ ಕೊಲೆ: ಕುಟುಂಬ ಆರೋಪ

ಚಿತ್ರದುರ್ಗ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಜಾತಿ ದ್ವೇಷದಿಂದ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಗರ್ಭಿಣಿ ನೇಣುಬಿಗುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ, ಜಾತಿ ದ್ವೇಷದ ಹಿನ್ನೆಲೆಯಲ್ಲಿ ಆಕೆಯ ಗಂಡನ ಮನೆಯವರು ಮಾಡಿದ ಕೊಲೆ ಎಂದು ಪೋಷಕರು ಆರೋಪಿಸಿದ್ದಾರೆ.

ಪತ್ನಿ ಸುಪರ್ದಿಗೆ ಮಕ್ಕಳ ನೀಡಲು ಕೋರ್ಟ್‌ ಆದೇಶ: ಮಕ್ಕಳ ಸಾಯಿಸಿ ತಾಯಿ ಜೊತೆ ವ್ಯಕ್ತಿ ಆತ್ಮಹತ್ಯೆ

ಮಕ್ಕಳನ್ನು ಪತ್ನಿ ಜೊತೆ ಬಿಡಲು ಕೋರ್ಟ್ ಆದೇಶಿಸಿದ್ದಕ್ಕೆ ವ್ಯಕ್ತಿ ಎರಡು ಮಕ್ಕಳಿಗೆ ವಿಷವುಣಿಸಿ ಸಾಯಿಸಿದ ಬಳಿಕ ತಾಯಿ ಜೊತೆ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಮಗಳು ಹಿಮಾ(6), ಮಗ ಕಣ್ಣನ್‌ಗೆ(2) ವಿಷ ನೀಡಿದ ಬಳಿಕ ತಾಯಿ ಉಷಾ(65)

ರಾಯಚೂರಿನಲ್ಲಿ ಎಇಇ ನಿವಾಸ, ಕಚೇರಿಗಳಿಗೆ ಲೋಕಾಯುಕ್ತ‌ ದಾಳಿ

ರಾಯಚೂರಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಂಧನೂರಿನಲ್ಲಿ ಎಇಇ ಆಗಿರುವ ಬಿ.ವಿಜಯಲಕ್ಷ್ಮಿ ಅವರಿಗೆ ಸೇರಿರುವ ರಾಯಚೂರು ನಗರದಲ್ಲಿನ ಎರಡು ಮನೆ ಸೇರಿ ಐದು ಕಡೆ ದಾಳಿ ನಡೆದಿದೆ. ಆದಾಯಕ್ಕಿಂತ‌ ಅಧಿಕ

ಟಿಟಿಡಿ ಮಾಜಿ ಅಧ್ಯಕ್ಷ, ಎಂಪಿಯಾಗಿದ್ದ ಆದಿಕೇಶವುಲು ನಾಯ್ಡು ಆಪ್ತ ಸಾವು: ಆದಿಕೇಶವುಲು ನಾಯ್ಡು ಮಗಳು, ಮಗನ ಬಂಧನ

ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರಾಗಿದ್ದ ದಿ. ಆದಿಕೇಶವುಲು ನಾಯ್ಡು ಅವರ ಆಪ್ತ ಹಾಗೂ ಉದ್ಯಮಿ ರಘುನಾಥ್ ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದಿಕೇಶವುಲು ಅವರ ಮಗಳು ಕಲ್ಪಜ ಮತ್ತು ಮಗ ಶ್ರೀನಿವಾಸ್‌ ಅವರನ್ನು ಸಿಬಿಐ ಬಂಧಿಸಿದೆ.

ಚಿನ್ನಕ್ಕಾಗಿ ಅಜ್ಜಿಯ ಕೊಲೆಗೈದ ಮೊಮ್ಮಗ: ಪತ್ತೆ ಹಚ್ಚಿದ ನಾಯಿಗಳು

ಚಿನ್ನಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗನ ಕ್ರೌರ್ಯವನ್ನು ತನಿಖೆಯಲ್ಲಿ ಭಾಗವಹಿಸಿದ್ದ ಶ್ವಾನದಳದ ನಾಯಿಗಳು ಬಯಲು ಮಾಡಿವೆ. ಆಂಧ್ರದ ವಿಜಯನಗರ ಭೋಗಾಪುರಂ ಮಂಡಲದ ಮುಡಸಲಪೇಟೆ ವಿಮಾನ ನಿಲ್ದಾಣ ಕಾಲೊನಿಯಲ್ಲಿ ನಡೆದ ವೃದ್ಧ ಮಹಿಳೆಯ ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯಾಗಿರುವ ಮೊಮ್ಮಗನನ್ನು ಬಂಧಿಸಿದ್ದಾರೆ.

ಬಾಗಲೂರಿನಲ್ಲಿ ಕಲ್ಲು ಎತ್ತಿಹಾಕಿ ಪತ್ನಿಯ ಹತ್ಯೆ ಮಾಡಿ ಅಪಘಾತದ ಕಥೆ ಕಟ್ಟಿದ ಪತಿ ಅರೆಸ್ಟ್‌

ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಬಳಿ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿ ಅಪಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.  ಹತ್ಯೆ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಲಹಂಕದ ಬೊಮ್ಮಸಂದ್ರದ ನಿವಾಸಿ ಅನಂತ್ (64) ಎಂಬಾತ

ಪ್ರಿಯಕರ ಅಪ್ಪನ ಕೊಲೆ ಮಾಡುತ್ತಿದ್ದರೆ ನೋಡುತ್ತಿದ್ದ 17 ವರ್ಷದ ಮಗಳು!

ಪ್ರೀತಿಗೆ ಒಪ್ಪದ ತಂದೆಗೆ ಡ್ರಗ್ಸ್ ನೀಡಿ ಮೈಮೇಲೆ ಎಚ್ಚರ ಇಲ್ಲದಂತೆ ಮಾಡಿದ ಮಗಳು ಪ್ರಿಯಕರ ಕೊಲೆ ಮಾಡಲು ಹೇಳಿ ನೋಡುತ್ತಾ ನಿಂತ ಅಮಾನವೀಯ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್‌ನ ವಡೋದರಾದ ಪದ್ರಾ ಗ್ರಾಮದಲ್ಲಿ 17ರ ಹುಡುಗಿ ಗೆಳೆಯನ ಜೊತೆ ಸೇರಿ