ಅಪರಾಧ
ಸಂಡೂರು ಇನ್ಸ್ಪೆಕ್ಟರ್ ವಿರುದ್ಧ ಕ್ರಿಮಿನಲ್ ಕೇಸ್: ಹೈಕೋರ್ಟ್ ಸೂಚನೆ
ಸಂಡೂರು ತಾಲೂಕು ಇನ್ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಇನ್ಸ್ಪೆಕ್ಟರ್ ಮಹೇಶ್ ಗೌಡ ಕ್ಷುಲ್ಲಕ ಕಾರಣಕ್ಕೆ ವಿವೇಕಾನಂದ್ ಎಂಬವರಿಗೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧ ವಿವೇಕಾನಂದ್ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಆಗಸ್ಟ್ 24 ರಂದು ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿಯಾಗಲು ಸಂಡೂರು ಐಬಿಗೆ ವಿವೇಕಾನಂದ್ ಸಂಡೂರಿಗೆ ಹೋಗಿದ್ದರು. ಈ ವೇಳೆ ಸಚಿವರನ್ನು ಭೇಟಿ ಮಾಡಲು ಬಿಡದೆ ಬಾಯಿಗೆ ಬಂದಂತೆ ಇನ್ಸ್ಪೆಕ್ಟರ್
ಕಾರು ಡಿಕ್ಕಿಯಾಗಿ ಉರಿದ ಬೈಕ್: ಕಲಬುರಗಿಯಲ್ಲಿ ಸವಾರರಿಬ್ಬರು ಸಜೀವ ದಹನ
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿ ಬೆಂಕಿಹೊತ್ತಿಕೊಂಡು ಅದರಲ್ಲಿದ್ದ ಸವಾರರಿಬ್ಬರು ಸಜೀವ ದಹನಗೊಂಡಿದ್ದಾರೆ. ಸಿರಗಾಪುರ ಗ್ರಾಮದ ಆಕಾಶ ಧನವಂತ (19) ಮತ್ತು ಭೂಸಣಗಿ ಗ್ರಾಮದ ಸುಶೀಲ್ (28) ಬೆಂಕಿಗೆ ಬಲಿಯಾದವರು. ಮಹಾಗಾಂವ್
ಬೆಂಗಳೂರಿನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗು ತಂದೆಯ ಕಾರಿಗೆ ಸಿಲುಕಿ ಸಾವು
ಬೆಂಗಳೂರಿನ ತೋಟದಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ತಂದೆಯ ಕಾರಿಗೆ ಸಿಲುಕಿ ಮಗು ಸ್ಥಳದಲ್ಲೇ ಮೃತಪಟ್ಟ ಗೃದಯವಿದ್ರಾವಕ ಘಟನೆಯೊಂದು ನಡೆದಿದೆ. ದೇವಿಕಾ ಹಾಗೂ ಮುನೇಶ್ ದಂಪತಿಯ ಒಂದು ವರ್ಷ ಹತ್ತು ತಿಂಗಳ ನೂತನ್ ಕಾರಿನಡಿ ಸಿಲುಕಿ ಅಸು ನೀಗಿದ ಮಗು. ಮಳವಳ್ಳಿ ತಾಲೂಕಿನ ಬೂವಿನದೊಡ್ಡಿಯ
ಮಡಿಕೇರಿ: ಪತ್ನಿಗೆ ವೀಡಿಯೊ ಕಾಲ್ ಮಾಡಿ ಪತಿ ಲೈವ್ ಸುಸೈಡ್
ಮಡಿಕೇರಿ ಸಮೀಪದ ಸಿಂಕೋನ ಎಂಬಲ್ಲಿ ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ನಿವಾಸಿ ಕೀರ್ತನ್ (36) ಎಂಬಾತ ಪತ್ನಿಗೆ ವೀಡಿಯೊ ಕಾಲ್ ಮಾಡಿ ಲೈವ್ ಆಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಕೀರ್ತನ್ ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ತವರಿನಲ್ಲಿದ್ದ ಪತ್ನಿ
ತಾಳಿ ಕಟ್ಟಿ ಲೈಂಗಿಕವಾಗಿ ಬಳಕೆ: ಜಾತಿ ಕಾರಣಕ್ಕೆ ಮದುವೆ ಬಹಿರಂಗಗೊಳಿಸದ ಪೇದೆ
ಮಹಿಳಾ ಪೇದೆಗೆ ತಾಳಿ ಕಟ್ಟಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಆಕೆ ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ಪತ್ನಿಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಿರಾಕರಿಸಿ ಮತ್ತೊಂದು ಹುಡುಗಿಯೊಂದಿಗೆ ವಿವಾಹ ನಿಶ್ಚಯಿಸಿಕೊಂಡು ವಂಚನೆ ಎಸಗಿದ ಆರೋಪದಡಿ ಪೇದೆಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಅಮೃತೂರು ಪೊಲೀಸ್
ತಡವಾಗಿ ಬಂದಿದ್ದಕ್ಕೆ ಬ್ಯಾಗ್ ಜೊತೆ 100 ಸಿಟಪ್ಸ್ ಶಿಕ್ಷೆ: ಶಾಲಾ ಬಾಲಕಿ ಸಾವು
ಮಹಾರಾಷ್ಟ್ರದ ವಸೈಯಲ್ಲಿರುವ ಶಾಲೆಗೆ ಮಕ್ಕಳ ದಿನಾಚರಣೆಯಂದು ತಡವಾಗಿ ಬಂದಿದ್ದಕ್ಕೆ ಶಿಕ್ಷಕಿ ನೀಡಿದ ಶಿಕ್ಷೆಗೆ ಆರನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆಯೊಂದು ನಡೆದಿದೆ. ವಸೈನಲ್ಲಿರುವ ಶ್ರೀ ಹನುಮಂತ್ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಶುಕ್ರವಾರ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಹತ್ತು ನಿಮಿಷ ತಡವಾಗಿ
ಮೈಸೂರಿನಲ್ಲಿ ಲೈಂಗಿಕ ಕಿರುಕುಳ: ಉಪನ್ಯಾಸಕನ ವಿರುದ್ಧ ವಿದ್ಯಾರ್ಥಿನಿ ದೂರು
ಮೈಸೂರು ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ. ಹೆಚ್ಚು ಮಾರ್ಕ್ಸ್ ನೀಡ್ತೇನೆ, ಒಳ್ಳೆಯ ಕೆಲಸ ಕೊಡಿಸುತ್ತೇನೆ. ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದು ಉಪನ್ಯಾಸಕ ಭರತ್ ಭಾರ್ಗವ ಕಿರುಕುಳ
ಎಳನೀರು ಮಾರುವ ಮಹಿಳೆಯ ಹನಿಟ್ರಾಪ್‌ಗೆ ಸಿಲುಕಿದ ಇಂಡಿ ಬ್ಯಾಂಕ್ ಮ್ಯಾನೇಜರ್
ವಿಜಯಪುರದ ಡಿಯ ಡಿವೈಎಸ್ಪಿ ಕಚೇರಿ ಪಕ್ಕ ಹಲವು ವರ್ಷಗಳಿಂದ ಎಳನೀರು ಮಾರಿಕೊಂಡಿದ್ದ ಮಹಿಳೆ ಬ್ಯಾಂಕ್ ಮ್ಯಾನೇಜರ್‌ನನ್ನು ಹನಿಟ್ರಾಪ್ ಮಾಡಿ ಬೆದರಿಸಿ ಹಣ ಸುಲಿಗೆಗೆ ಯತ್ನಿಸಿ ಅರೆಸ್ಟ್ ಆಗಿದ್ದಾಳೆ. ಪ್ರಕರಣ ಸಂಬಂಧ ಆರೋಪಿ ಮಹಿಳೆ, ಆಕೆಯ ಮಗ ಹಾಗೂ ಯ್ಯೂಟೂಬ್ ಪತ್ರಕರ್ತನನ್ನೂ ಬಂಧಿಸಲಾಗಿದೆ.
ಸಾಂಬಾರ್ ಗೆ ವಿಷ ಬೆರೆಸಿ ಕೊಲೆಗೆ ಯತ್ನ: ಒಂದೇ ಕುಟುಂಬದ 8 ಮಂದಿ ಅಸ್ವಸ್ಥ
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ(ಭಾಗ್ಯನಗರ) ತಾಲೂಕಿನ ದೇವಿರೆಡ್ಡಿಪಲ್ಲಿಯಲ್ಲಿ ವಿಷ ಬೆರೆಸಿದ ಸಾಂಬಾರ್ ಸೇವಿಸಿ ಅಸ್ವಸ್ಥರಾಗಿದ್ದ 9 ಮಂದಿಯಲ್ಲಿ ಒಂದೇ ಕುಟುಂಬದ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸಾಂಬಾರಿಗೆ ವಿಷ ಬೆರೆಸಿದ್ದ ಪಾಪಿ ದೇವಿರೆಡ್ಡಿಪಲ್ಲಿಯ ಮದ್ದರೆಡ್ಡಿ ಮತ್ತು ಪಾಪಿರೆಡ್ಡಿ ಎಂಬುವವರು ಅಕ್ಕಪಕ್ಕದ ಮನೆಯವರಾಗಿದ್ದು, ಎರಡು
ಕಲಬೆರಕೆ ನಂದಿನಿ ತುಪ್ಪ ತಯಾರಿಸುತ್ತಿದ್ದ ಜಾಲ ಪತ್ತೆ: ಕೆಎಂಎಫ್ ಡಿಸ್ಟ್ರಿಬ್ಯೂಟರ್ ಸೇರಿ ನಾಲ್ವರ ಬಂಧನ
ಬೆಂಗಳೂರು, ಹೊರರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ತಯಾರಿಸಿ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ನಗರದಾದ್ಯಂತ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಪತ್ತೆಹಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಪುತ್ರ ದೀಪಕ್, ಸಪ್ಲೈರ್‌ಗಳಾದ ಮುನಿರಾಜು, ಅಭಿ,ಹಾಗೂ




