Thursday, February 12, 2026
Menu

ಬಳ್ಳಾರಿ ಗಲಭೆ: 26 ಆರೋಪಿಗಳು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ

ಬೆಂಗಳೂರು: ಬಳ್ಳಾರಿಯ ಬ್ಯಾನರ್​​ ಗಲಾಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ಪ್ರಕರಣದ ಸಂಬಂಧ ಕೊಲೆ ಆರೋಪಿ ಗುರುಚರಣ್‌ ಸಿಂಗ್ ಸೇರಿ 26 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಪೊಲೀಸರು ಪ್ರಕರಣದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಜನವರಿ 1ರಂದು ನಡೆದಿದ್ದ ಗಲಭೆ ದಿನ ಶಾಸಕ ಭರತ್‌ ರೆಡ್ಡಿ ಆಪ್ತನ ಗನ್‌ಮ್ಯಾನ್‌

ದರೋಡೆಗೆ ಸಂಚು ಹಾಕ್ತಿದ್ದ ಐವರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ

ಶಿವಮೊಗ್ಗ: ಭದ್ರಾವತಿಯ ಗೋಂದಿ ಕೈಮರದಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದ ಐವರು ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮದುವೆ ಸಮಾರಂಭದಲ್ಲಿ ಎಎಪಿ ನಾಯಕ ಜರ್ನೈಲ್ ಸಿಂಗ್ ಹತ್ಯೆ

ಅಮೃತ್‌ಸರ ಎಎಪಿ ನಾಯಕ ಜರ್ನೈಲ್ ಸಿಂಗ್‌ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಅತಿಥಿಗಳ ಸಮ್ಮುಖವೇ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜರ್ನೈಲ್ ಸಿಂಗ್ ತರಣ್ ತರಣ್ ಜಿಲ್ಲೆಯ ವಲ್ಥೋವಾ ಗ್ರಾಮದ ನಿವಾಸಿ. ಅಮೃತಸರದಲ್ಲಿ ಮದುವೆಯೊಂದರಲ್ಲಿ ಭಾಗಿಯಾಗಿದ್ದಾಗ ದುಷ್ಕರ್ಮಿಗಳು ಸಮೀಪದಿಂದಲೇ ಗುಂಡು ಹಾರಿಸಿ

ಸುಳ್ಯದ ತಾಯಿ ಮಗು ಶವ ಕೆರೆಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮನೆಯೊಂದರಲ್ಲಿ ರಾತ್ರಿ ಮಲಗಿದ್ದ ತಾಯಿ ಮತ್ತು ಮೂರು ವರ್ಷದ ಮಗುವಿನ ಶವ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮಗು ಧನ್ವಿ (3) ಮೃತಪಟ್ಟವರು. ಹರೀಶ್ ಅವರು

ಬೆಂಗಳೂರಿನಲ್ಲಿ ಓಂ ಶಕ್ತಿ ಭಕ್ತರ ಮೇಲೆ ಕಲ್ಲೆಸೆತ: ನಾಲ್ವರು ಬಾಲಕರ ಬಂಧನ

ಚಾಮರಾಜಪೇಟೆ ಬಳಿಯ ಜೆಜೆ ನಗರ ಠಾಣೆ ವ್ಯಾಪ್ತಿಯಲ್ಲಿ ದೇವಿಯ ತೇರು ಎಳೆಯುತ್ತಿದ್ದ ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿರುವ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪ್ರಕರಣ ಸಂಬಂಧ ನಾಲ್ಕು ಬಾಲಕರನ್ನು ಬಂಧಿಸಲಾಗಿದೆ. ವಿ.ಎಸ್ ಗಾರ್ಡಡ್‌ನ ಓಂ

ಪ್ರೀತಿಸಿದ ಹುಡುಗನ ವಶೀಕರಣ: ಗುರೂಜಿ ಸೋಗಿನಲ್ಲಿ ಯುವತಿಗೆ 2.05 ಲಕ್ಷ ರೂ. ವಂಚನೆ

ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಜಿಯಲ್ಲಿ ವಾಸವಾಗಿದ್ದ ಯುವತಿಗೆ ಆನ್‌ಲೈನ್‌ ಮೂಲಕ ಭವಿಷ್ಯ ಹೇಳುವುದಾಗಿ ಗುರೂಜಿ ಸೋಗಿನಲ್ಲಿ ನಂಬಿಸಿದ ವ್ಯಕ್ತಿಯೊಬ್ಬ 2.05 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಆಡುಗೋಡಿ ನಿವಾಸಿಯಾಗಿರುವ ಯುವತಿ ಚಂದ್ರಶೇಖರ್ ಸುಗತ್ ಗುರೂಜಿ ಎಂಬಾತನ ವಿರುದ್ಧ

ಮೂಡಿಗೆರೆಯಲ್ಲಿ ಕುಡಿದ ಮತ್ತಿನಲ್ಲಿ ಮಗನ ಕಡಿದು ಕೊಂದ ತಂದೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಅಪ್ಪನೇ ತನ್ನ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರದೀಪ್ ಆಚಾರ್ (29) ಕೊಲೆಯಾದವರು. ರಮೇಶ್ ಆಚಾರ್ ಮಗನ ಕೊಲೆಗೈದಿರುವ ತಂದೆ. ಕ್ಷುಲಕ ಕಾರಣಕ್ಕೆ ಕುಡಿದು ಅಪ್ಪ-ಮಗ ಆಗಾಗ ಮನೆಯಲ್ಲಿ

ಪರ ಪುರುಷನಿಗಾಗಿ ಮೂರು ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ ಹತ್ಯೆಗೈದ ತಾಯಿ

ವಿವಾಹಿತ ಮಹಿಳೆಯೊಬ್ಬಳು ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಜೊತೆಯಲ್ಲೇ ಹೋಗಬೇಕೆಂದು ತನ್ನ ಮೂವರು ಮಕ್ಕಳಿಗೆ ಆಹಾರದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಿರುವ ಘಟನೆ ಲಾಹೋರ್‌ನಿಂದ 200 ಕಿ.ಮೀ ದೂರ ಪಂಜಾಬ್ ಪ್ರಾಂತ್ಯದ ಗುಜರಾತ್ ಜಿಲ್ಲೆಯ ಸರೈ ಅಲಮ್‌ಗಿರ್‌ನಲ್ಲಿ

ಬೆಂಗಳೂರಿನಲ್ಲಿ ವಿಶೇಷ ಚೇತನ ಮಗುವಿಗೆ ವಿಷ ನೀಡಿದ ತಂದೆ

ಚಿಕಿತ್ಸೆ ಕೊಡಿಸಲು ಹಣವಿಲ್ಲವೆಂದು ತಂದೆಯು ವಿಷ ನೀಡಿ ವಿಶೇಷ ಚೇತನ ಮಗುವನ್ನು ಸಾಯಿಸಲು ಮುಂದಾಗಿರುವ  ಕ್ರೂರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಶೇಷ ಚೇತನ ಮಗನ ಚಿಕಿತ್ಸೆಗಾಗಿ ಅಲೆದು ಬೇಸತ್ತಿದ್ದ ತಂದೆ, ವಿಷ ನೀಡಿ ಸಾಯಿಸಲು ಮುಂದಾಗಿದ್ದು, ಮಗುವೀಗ ಸಾವು -ಬದುಕಿನ ಹೋರಾಟದಲ್ಲಿದೆ.

ಮಕ್ಕಳ ಕೈಗೆ ಆಟವಾಡಲು ಮೊಬೈಲ್‌ ನೀಡಿ ತಾಯಿ ಆತ್ಮಹತ್ಯೆ

ತೆಲಂಗಾಣದಲ್ಲಿ ಮಹಿಳೆಯೊಬ್ಬರು ಮಕ್ಕಳ ಕೈಗೆ ಆಟವಾಡಲು ಮೊಬೈಲ್‌ ನೀಡಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವಸಂತಾ(29) ಆತ್ಮಹತ್ಯೆ ಮಾಡಿಕೊಂಡವರು. ಮೃತ ಮಹಿಳೆ. ಆಕೆ ನಾಲ್ಕು ವರ್ಷಗಳ ಹಿಂದೆ ಪತಿ ಲಕ್ಷ್ಮಣ್ ಅವರನ್ನು ಕಳೆದುಕೊಂಡಿದ್ದು, ಏಳು ವರ್ಷ ಹಾಗೂ ಮೂರೂವರೆ ವರ್ಷದ