ಅಪರಾಧ
ಗಾಣಗಾಪುರ ದತ್ತ ಕ್ಷೇತ್ರದಲ್ಲಿ ಗುರುಪೂರ್ಣಿಮೆ: ನೂಕುನುಗ್ಗಲಿನಲ್ಲಿ ಮಹಿಳೆ ಸಾವು
ಗಾಣಗಾಪುರ ದತ್ತಾತ್ರೇಯ ಕ್ಷೇತ್ರದಲ್ಲಿ ಗುರುವಾರ ಗುರುಪೂರ್ಣಿಮೆ ನಿಮಿತ್ತ ಗುರು ದರ್ಶನ ಮಾಡಲು ಭಕ್ತರು ಸರತಿಯಲ್ಲಿ ಕಾಯುತ್ತಿರುವಾಗ ನೂಕು ನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕಲಾವತಿ ಮೃತ ಮಹಿಳೆ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸಲು ಮಾಹಿತಿ ನೀಡಿದ್ದಾರೆ. ಗುರುಪೂರ್ಣಿಮೆ ಸಂಭ್ರಮದೊಂದಿಗೆ ಗುರು ಆರಾಧನೆಗಾಗಿ ಗಾಣಗಾಪುರದ ದತ್ತಾತ್ರೇಯ ದೇಗುಲಕ್ಕೆ ರಾಜ್ಯ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು. ಜನ ಹೆಚ್ಚಾಗುತ್ತಿದ್ದಂತೆ ಸಂಜೆಯ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದೆ. ನೂಕುನುಗ್ಗಲು ನಡುವೆ ಸಂಜೆ 5.30ಕ್ಕೆ
ಮಚ್ಚಿನಿಂದ ಕೊಚ್ಚಿ ತಂದೆ, ಅಣ್ಣನ ಕೊಲೆ ಮಾಡಿದ್ದ ತಮ್ಮ ಸೆರೆ
ಹಾಸನ:ಆಸ್ತಿ ಮಾರಾಟದ ಹಣ ಕೊಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಗನೊಬ್ಬ ತಂದೆ ಹಾಗೂ ಅಣ್ಣ ಇಬ್ಬರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ. ಗಂಗೂರು ಗ್ರಾಮದ ತಂದೆ ದೇವೇಗೌಡ (70)
ಬೆಟ್ಟಿಂಗ್ ಆ್ಯಪ್ ವಿರುದ್ಧ ಇಡಿ ಪ್ರಕರಣ: ಸಂಕಷ್ಟದಲ್ಲಿ ವಿಜಯ್ ದೇವರಕೊಂಡ
ಬೆಟ್ಟಿಂಗ್ ಆ್ಯಪ್ಗಳ ವಿರುದ್ಧ ಕ್ರಮ ಕೈಗೊಂಡಿರುವ ಇಡಿ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ನಟಿ ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ನಿರೂಪಕಿ ಶ್ರೀಮುಖಿ ಸೇರಿ 29 ನಟರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಕೆಲವು
ಸೀರೆಯುಟ್ಟು ರಿಮ್ಸ್ ಆಸ್ಪತ್ರೆ ಪ್ರವೇಶಿಸಿದ ಪುರುಷನ ಬಂಧನ
ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಡೋರ್ ಮೂಲಕ ಸೀರೆಯುಟ್ಟ ಪುರುಷನೊಬ್ಬ ಪ್ರವೇಶಿಸಿದ್ದು, ಇಲ್ಲಿನ ಮಾರ್ಕೆಟ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಶರಣಪ್ಪ ಬಂಧಿತ ಆರೋಪಿ. ಸೀರೆಯುಟ್ಟು ಬಂದ ಪುರುಷನನ್ನು ಸ್ಥಳೀಯರು ತಡೆದು ಪ್ರಶ್ನಿಸಿದ್ದಾರೆ. ಯಾವ ವಾರ್ಡ್‌ಗೆ ಹೋಗಬೇಕು, ಭೇಟಿಯಾಗಲು ಬಂದಿರುವ ರೋಗಿ
ಮಂಗಳೂರು ಹಿಂದೂ ಸಂಘಟನೆ ಮುಖಂಡನ ಮೊಬೈಲ್‌ನಲ್ಲಿ ನಗ್ನ ವೀಡಿಯೊಗಳು
ಮಂಗಳೂರಿನ ಹಿಂದೂ ಜಾಗರಣ ವೇದಿಕೆ ಮುಖಂಡನ ಮೊಬೈಲ್ ನಲ್ಲಿ ನಗ್ನ ಅಶ್ಲೀಲ ವೀಡಿಯೊಗಳು ಪತ್ತೆಯಾಗಿದ್ದು, ಮೂಡಬಿದಿರೆ ಪೊಲೀಸರು ಎಫ್ ಎಸ್ ಎಲ್‌ಗೆ ಕಳುಹಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ದ.ಕ ಜಿಲ್ಲಾ ಸಹಸಂಯೋಜಕ ಸಮೀತ್ ರಾಜ್ ಧರೆಗುಡ್ಡ ಎಂಬಾತ ವೀಡಿಯೊ ಕಾಲ್ ಗಳ
ಜಾತಿ ನಿಂದನೆ ಕೇಸ್ ಬೆದರಿಕೆ:ಯಾದಗಿರಿ ಯುವಕ ಆತ್ಮಹತ್ಯೆ, ತಂದೆ ಹೃದಯಾಘಾತಕ್ಕೆ ಬಲಿ
ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಜಾತಿ ನಿಂದನೆ ಕೇಸ್ಗೆ ಹೆದರಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೆಹಬೂಬ್(22) ಎಂಬ ಯುವಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ತಂದೆ ಸೈಯದ್
ಶಾಸಕ ಸುಬ್ಬಾರೆಡ್ಡಿ ಮನೆ ಸೇರಿ ಐದು ಕಡೆ ಇಡಿ ದಾಳಿ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಯ ಮನೆಗಳೂ ಸೇರಿದಂತೆ ಬೆಂಗಳೂರಿನ ಐದು ಕಡೆಗಳಲ್ಲಿ ಗುರುವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳಲ್ಲಿ ಶೋಧ ಮುಂದುವರಿದಿದೆ.
ಅಕ್ರಮ ಸೈಟ್ ಮಾರಾಟ: ಕೆಹೆಚ್‌ಬಿ ಎಇಇ ಸೇರಿ ಮೂವರ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲು
ಅಕ್ರಮವಾಗಿ ಸೈಟ್ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿ ನಷ್ಟ ಉಂಟುಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಹೆಚ್‌ಬಿ) ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸೇರಿದಂತೆ ಇಬ್ಬರಿಗೆ ಸಂಬಂಧಿಸಿದ ಕಚೇರಿ, ನಿವಾಸಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಹೆಚ್‌ಬಿಯ ಯಲಹಂಕ
ಜೈಲಲ್ಲಿ ಉಗ್ರರಿಗೆ ನೆರವು ನೀಡುತ್ತಿದ್ದ ಮೂವರು 6 ದಿನ ಎನ್ ಐಎ ಕಸ್ಟಡಿಗೆ
ಬೆಂಗಳೂರು: ನಗರ ಹಾಗೂ ಕೋಲಾರದಲ್ಲಿ ಮಂಗಳವಾರ ರಾತ್ರಿ ದಿಢೀರ್ ದಾಳಿ ನಡೆಸಿ ಬಂಧಿಸಿರುವ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಎಎಸ್ಐ ಚಾಂದ್ ಪಾಷಾ ಮತ್ತು ಶಂಕಿತ ಉಗ್ರನ ತಾಯಿ ಫಾತೀಮಾಳನ್ನು ಕೋರ್ಟ್ ಇದೇ ಜು. 14 ರವರೆಗೆ ರಾಷ್ಟ್ರೀಯ ತನಿಖಾ
suicide death- ಗಜೇಂದ್ರಗಢದಲ್ಲಿ ಪ್ರೇಮಿಗಳಿಂದ ವಿಷ ಸೇವನೆ: ಬಾಲಕಿ ಸಾವು, ಯುವಕನ ಸ್ಥಿತಿ ಗಂಭೀರ
ಗದಗದ ಗಜೇಂದ್ರಗಢ ತಾಲೂಕಿನ ರಾಜೂರು ಗ್ರಾಮದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅಪ್ರಾಪ್ತ ವಯಸ್ಕ ಹುಡುಗಿ ಅಸು ನೀಗಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿದ್ದ ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಹುಡುಗಿ ಮೃತಪಟ್ಟಿದ್ದಾಳೆ, ದೇವಪ್ಪ