Menu

ನಿಡಗುಂದಿಯಲ್ಲಿ ಪೊಲೀಸ್‌ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ

ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೌನೇಶ್ ಅಬ್ಬಿಹಾಳ (30) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮೃತನ ಸೋದರ ಮಾವ ಬಸವರಾಜ್ ಕಾಣೆಯಾಗಿದ್ದರು. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೌನೇಶ್‌ನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಗುರುವಾರ ಮತ್ತೆ ವಿಚಾರಣೆಗೆ ಬರುವಂತೆ ಹೇಳಿದ್ದರು. ಆದರೆ ವಿಚಾರಣೆಗೆ ಹೆದರಿದ

ರಾಜ್ಯದ ನಾನಾ ಕಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ರೇಡ್‌

ಬೆಂಗಳೂರು, ಬಾಗಲಕೋಟೆ, ರಾಯಚೂರು, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ನಿವಾಸ, ಕಚೇರಿಗಳಿಗೆ ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳು, ಬಾಗಲಕೋಟೆಯ ಗ್ರಾಮ ಪಂಚಾಯತ್ ಪಿಡಿಒ, ರಾಯಚೂರಿನಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಪತ್ರ ಅಧಿಕಾರಿಗಳ ಮನೆ, ಬೆಂಗಳೂರಿನಲ್ಲಿ

ಪಾಗಲ್ ಪ್ರೇಮಿಯಿಂದ ವಿದ್ಯಾರ್ಥಿನಿಯ ಕೊಲೆ; ಬೆಚ್ಚಿಬಿದ್ದ ಸಿಂಧನೂರು ಜನತೆ

ಸಿಂಧನೂರು : ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎಸ್ ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯನ್ನು ಪಾಗಲ್ ಪ್ರೇಮಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ, ಇದರಿಂದ ಸಿಂಧನೂರು ಜನತೆ ಭಯದ ವಾತಾವರಣ ಇದೆ. ಲಿಂಗಸ್ಗೂರು ಮೂಲದ ಯುವಕ ಶೇಕ್ ಮಹಿಬುಲ್ ಎಂಬ ಪಾಗಲ್

ಸಹಪಾಠಿಯ ರೇಪ್‌ ಮಾಡಲು 7ನೇ ತರಗತಿಯವನಿಂದ 9ನೇ ತರಗತಿಯವನಿಗೆ 100 ರೂ. ಸುಪಾರಿ

ಮಹಾರಾಷ್ಟ್ರದ ದೌಂಡ್ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ ಸಹಪಾಠಿ ವಿದ್ಯಾರ್ಥಿನಿ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲು 9ನೇ ತರಗತಿಯ ಬಾಲಕನಿಗೆ 100 ರೂ ಸುಪಾರಿ ನೀಡಿರುವ ಆತಂಕಕಾರಿ ಪ್ರಕರಣ ಬಹಿರಂಗಗೊಂಡಿದೆ. ಸುಪಾರಿ ಪಡೆದಿದ್ದ ಬಾಲಕ

ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಪೊಲೀಸ್‌ ದಾಳಿ: ನಾಲ್ವರ ಬಂಧನ

ಬೆಂಗಳೂರಿನ ನಾನಾ ಕಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ 9 ಮಹಿಳೆಯರನ್ನು ರಕ್ಷಿಸಿದ್ದಾರೆ. ಬಿಇಎಲ್ ಬಡಾವಣೆಯಲ್ಲಿ ಹೈಫೈ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು ಹೊರ ರಾಜ್ಯದಿಂದ ಕೆಲಸಕ್ಕೆ ಬರುವ ಯುವತಿಯರನ್ನೇ ಗುರಿಯಾಗಿಸಿಕೊಂಡು ಕೆಲಸದ

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ ತಡೆದು ರೌಡಿಯ ಹುಚ್ಚಾಟ

ಹಾಸನ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತಡೆದ ರೌಡಿ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಸುಕಿನ ಜಾವ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ರೌಡಿ

ಮುಡಾ ಮಾಜಿ ಅಧ್ಯಕ್ಷ ನಟೇಶ್ ವಿರುದ್ಧ ಇಡಿ ಶೋಧ ರದ್ದುಗೊಳಿಸಿದ ಹೈಕೋರ್ಟ್‌

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿರುವ ಸಮನ್ಸ್ ರದ್ದು ವಿಚಾರವಾಗಿ ಮಹತ್ವದ ಸೂಚನೆ ನೀಡಿರುವ ಕರ್ನಾಟಕ ಹೈಕೋರ್ಟ್‌, ನಟೇಶ್ ವಿರುದ್ಧ ಪಿಎಂಎಲ್‌ಎ ಕಾಯ್ದೆಯಡಿ ಇಡಿ ಶೋಧನೆಯನ್ನು ರದ್ದುಪಡಿಸಿದೆ.

ಸೇಲ್ಸ್​​ಮ್ಯಾನ್ ಸೋಗಿನಲ್ಲಿ ಬಂದಾತ ಕರುವಿನ ಬಾಲ ಕತ್ತರಿಸಿ ಪರಾರಿ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ಸೇಲ್ಸ್​​ಮ್ಯಾನ್ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಕರುವಿನ ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಗುಂಡ್ಮಿಯಲ್ಲಿ ಮಯ್ಯ ಕುಟುಂಬದ ಮನೆಯೊಂದಕ್ಕೆ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿ, ಮನೆಯವರನ್ನು ಕರೆದು ವಸ್ತುಗಳನ್ನು ತೋರಿಸಿದ್ದಾನೆ. ವಸ್ತುಗಳ ಖರೀದಿಗೆ

ಸಾಲ ಕೊಡದ ಸಿಟ್ಟಿಗೆ ಸಹಾಯಕನಿಂದಲೇ ಮೀಟರ್‌ ಬಡ್ಡಿ ದಂಧೆಕೋರನ ಕಿಡ್ನ್ಯಾಪ್‌

ಸಾಲ ಕೊಡಲಿಲ್ಲ ಎಂಬ ಕೋಪಕ್ಕೆ ಸಾಲ ಕೊಡುವ ಮೀಟರ್‌ ಬಡ್ಡಿ ದಂಧೆಕೋರನನ್ನೇ ಅಪಹರಿಸಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಡ್ಡಿ ದಂಧೆಕೋರ ಮುಂಡಗೋಡ ನಿವಾಸಿ ಜಮೀರ್ ದರ್ಗಾವಲೆಯ ಬಳಿ ಬಡ್ಡಿ ವಸೂಲಿ ಕೆಲಸ ಮಾಡುತ್ತಿದ್ದ ಖ್ವಾಜಾ ಅಪಹರಣಕಾರ. ಖ್ವಾಜಾಗೆ ಸಾಲ

ಕೊಪ್ಪಳದಲ್ಲಿ ಅನಿಲ ಸೋರಿಕೆಗೆ ಕಾರ್ಮಿಕ ಬಲಿ , ಹಲವರು ಅಸ್ವಸ್ಥ

ಕೊಪ್ಪಳ ತಾಲೂಕಿನ ಅಲ್ಲಾನಗರದಲ್ಲಿ ಸ್ಟೀಲ್‌ ಫ್ಯಾಕ್ಟರಿಯೊಂದರಲ್ಲಿ ಅನಿಲ ಸೋರಿಕೆ ಉಂಟಾಗಿ ಕಾರ್ಖಾನೆಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದು,  ಎಂಟಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಅಲ್ಲಾನಗರದ ಹೊಸಪೇಟೆ ಇಸ್ಪಾತ್ ಸ್ಟೀಲ್ ಫ್ಯಾಕ್ಟರಿಯಲ್ಲಿ ಕಾರ್ಬನ್ ಮೊನಾಕ್ಸೈಡ್ ಟ್ಯಾಂಕ್ ಸೋರಿಕೆ ಉಂಟಾಗಿ ಕಾರ್ಮಿಕ ಮಾರುತಿ (24) ಉಸಿರುಗಟ್ಟಿ ಅಸು