ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಹೊರಭಾಗದಲ್ಲಿರುವ ಶ್ರೀ ತಿಮ್ಮಪ್ಪ ಕಾಟನ್ ಮಿಲ್ ಗೋದಾಮಿನಲ್ಲಿ ಅನ್ನ ಭಾಗ್ಯ ಅಕ್ಕಿ ಸರ್ಕಾರ ಬಡವರಿಗೆ ಪಡಿತರದಲ್ಲಿ ವಿತರಿಸುತ್ತಿದ್ದ ಜೋಳದ ಚೀಲಗಳೂ ಪತ್ತೆಯಾಗಿವೆ.
ಸಿಐಡಿ ಅಧಿಕಾರಿಗಳು ತನಿಖೆ ನಡೆಸುವಾಗ ಬಡವರಿಗೆ ಸರ್ಕಾರ ವಿತರಣೆ ಮಾಡುವ ಅಕ್ಕಿ ಜೊತೆಗೆ ಜೋಳಕ್ಕೂ ಕನ್ನ ಹಾಕಿರುವುದು ಬಯಲಾಗಿದೆ. ಭಾರಿ ಪ್ರಮಾಣದ ಅಕ್ಕಿ ಜೋಳ ಕಳ್ಳ ಸಂಗ್ರಹ ನೋಡಿ ಆಹಾರ ಇಲಾಖೆ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಗೋದಾಮಿನಲ್ಲಿರುವ ಪಡಿತರ ಅಕ್ಕಿ ಚೀಲಗಳ ಏಣಿಕೆ ಕಾರ್ಯ ವೇಳೆ ಪಡಿತರ ಜೋಳದ ಚೀಲಗಳು ಪತ್ತೆಯಾಗಿವೆ. ಅಧಿಕಾರಿಗಳ ತಂಡ ಪಡಿತರ ಅಕ್ಕಿ ತೂಕ ಮಾಡಿ ಚೀಲ ಎಣಿಕೆ ಕಾರ್ಯ ಮಾಡುತ್ತಿದೆ. ಪತ್ತೆಯಾಗಿರುವ ಕೆಲವು ಜೋಳದ ಚೀಲಗಳ ಮೇಲೆ ಕರ್ನಾಟಕ ಸರಕಾರ ಎಂಬ ಉಲ್ಲೇಖವಿದೆ. ಬೇರೆ ಚೀಲಗಳಲ್ಲಿ ಕೂಡ ಜೋಳ ಸಂಗ್ರಹವಾಗಿದೆ.
ಅಧಿಕಾರಿಗಳು ಈಗಾಗಲೇ 254 ಕ್ವಿಂಟಾಲ್ ಪಡಿತರ ಅಕ್ಕಿ ಎಣಿಕೆ ಮಾಡಿದ್ದು, ಪಡಿತರ ಅಕ್ಕಿ ಹಾಗೂ ಜೋಳ ಏಣಿಕೆ ಕಾರ್ಯ ಮುಂದುವರಿಸಲಿದ್ದಾರೆ. ಎರಡು ತಿಂಗಳ ಹಿಂದೆ ಸರಕಾರದಿಂದ ಅಕ್ಕಿ ಜೊತೆ ಪಡಿತರ ಕಾರ್ಡ್ ಸದಸ್ಯರಿಗೆ 3 ಕೆಜಿ ಜೋಳ ವಿತರಣೆ ಮಾಡಲಾಗಿತ್ತು.