ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಆಂಧ್ರಪ್ರದೇಶದ ಬಿಬಿಎಂ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸ್ನೇಹಿತನೇ ಕೊಲೆ ಮಾಡಿದ್ದಾನೆ. ದೇವಿಶ್ರೀ(21) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿಯಾಗಿರುವ ದೇವಿಶ್ರೀ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದೇವಿಶ್ರೀ ರೆಡ್ಡಪ್ಪ, ಜಗದಂಭ ದಂಪತಿಯ ಕೊನೆಯ ಮಗಳು
ಭಾನುವಾರ ಯುವತಿ ತನ್ನ ಸ್ನೇಹಿತನೆಂದು ಹೇಳಲಾದ ಪ್ರೇಮ್ ವರ್ಧನ್ ಎಂಬಾತನ ಜೊತೆ ಇನ್ನೊಬ್ಬಳು ಸ್ನೇಹಿತೆಯ ರೂಮಿಗೆಹೋಗಿದ್ದಳು. ಅಲ್ಲಿ ಆಕೆಯ ಸ್ನೇಹಿತ ಪ್ರೇಮ್ ವರ್ಧನ್ ಕೊಲೆ ಮಾಡಿ ಸ್ಥಳದಿಂದ ವಾಪಸ್ಸಾಗಿದ್ದಾನೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣದ ಸಮಗ್ರ ತನಿಖೆಯನ್ನು ಮುಂದುವರಿಸಿದ್ದಾರೆ.
ಅವಳ ಸ್ನೇಹಿತೆ ಕರೆ ಮಾಡಿ ಅವರ ರೂಂಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಏನಾಗಿದೆ ಗೊತ್ತಿಲ್ಲ. ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಕೊಲೆಯಾಗಿರುವ ವಿದ್ಯಾರ್ಥಿನಿಯ ಕುಟುಂಬದವರು ಆಗ್ರಹಿಸಿದ್ದಾರೆ. ಯುವಕ ರ್ಯಾಗಿಂಗ್ ಮಾಡುತ್ತಿದ್ದ ಬಗ್ಗೆ ದೇವಿಶ್ರೀ ಕಾಲೇಜಿಗೆ ಮತ್ತು ಪೋಷಕರಿಗೂ ಮೂರು ತಿಂಗಳ ಹಿಂದೆಯೇ ತಿಳಿಸಿದ್ದಳು. ಕಾಲೇಜಿನವರು ಯಾವುದೇ ಕ್ರಮ ಕೈಗೊಂಡಿಲ್ಲ. ಪೋಷಕರು ಇನ್ನು ಮೂರು ತಿಂಗಳಿಗೆ ಕಾಲೇಜು ಮುಗಿಯುತ್ತ್ತೆತದೆ ಎಂದು ಮಗಳಿಗೆ ಸಮಾಧಾನ ಮಾಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.


